ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಪಠ್ಯ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯುವುದಕ್ಕೆ ಸೀಮಿತಗೊಳಿಸದೇ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಮುಖ್ಯ ಎಂದು ನಗರದ ಬಿಜಿಎಸ್ ಶಾಲೆಯ ಪ್ರಾಂಶುಲರಾದ ಎಂ.ವಿ.ಜಿಕ್ಕಜ್ಜಪ್ಪ ಹೇಳಿದರು.ನಗರದ ಬಿ.ಜಿ.ಎಸ್. ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತುಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದ ಅವರು, ರಚನಾತ್ಮಕ ಹಾಗು ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಈ ಕಾರಣದಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು. ನಾನಾ ಮಾದರಿಗಳ ಪ್ರದರ್ಶನ
ಸಿಸ್ಥಿರ ಕೃಷಿ ಪದ್ದತಿ, ಸ್ವಚ್ಚತೆ ಮತ್ತು ಆರೋಗ್ಯ, ಮಾನವನ ಮೆದುಳು ಮಾದರಿ, ಸಂಪನ್ಮೂಲ ನಿರ್ವಹಣೆ, ಕೈಗಾರಿಕಾ ಅಭಿವೃದ್ದಿ, ಚಂದ್ರಯಾನ-3, ಮಾನವನ ಹೃದಯದ ಮಾದರಿ, ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ ಪರಿಸರ ಸಂರ್ಕಷನೇ ಜತೆಗೆ ಲಭ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಹೇಗೆ ಅಭಿವೃದ್ದಿ ಕಾರ್ಯ ನಡೆಸಬಹುದು ಎಂಬುದನ್ನು ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಿಳಿಸಿಕೊಟ್ಟರು.ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಹೊಸತನದ ಪ್ರದರ್ಶನ ತೋರಬೇಕೆಂಬ ಹಂಬಲ ಎದ್ದು ಕಾಣುತ್ತಿತ್ತು. ಮತ್ತಷ್ಟು ಸೂಕ್ತ ತರಬೇತಿ ಮತ್ತು ಮಾರ್ಗದರ್ಶನದ ಅಗತ್ಯವಿದೆ ಎಂದು ತೀರ್ಪುಗಾರರಾದ ವಿಜ್ಞಾನ ಉಪನ್ಯಾಸಕ ಎಚ್.ಆರ್.ನರಸಿಂಹಮೂರ್ತಿ ಹೇಳಿದರು.
ಗಮನ ಸೆಳೆದ ಮಳೆಕೊಯ್ಲುಆಧುನಿಕತೆ ಬೆಳೆದಂತೆ ಮಳೆ ಪ್ರಮಾಣ ಕಡಿಮೆಗೊಂಡು ನೀರ ಅಭಾವ ಉದ್ಭವಿಸುತ್ತಿರುವ ಇಂದಿನ ದಿನಗಳಲ್ಲಿ ಮಳೆ ನೀರು ಕೊಯ್ಲು ವಿಧಾನದಿಂದ ಮಳೆ ನೀರು ಸಂಗ್ರಹಣೆ ಮೂಲಕ ನೀರಿನ ಕೊರತೆ ನೀಗಿಸುವಿಕೆ ಕುರಿತು ಪ್ರದರ್ಶನದಲ್ಲಿ ಗಮನ ಸಳೆಯಿತು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಮಂಜೇಶ್‌ರೆಡ್ಡಿ, ಎಲ್.ಪಾಂಡುರಂಗ, ವಿಜ್ಞಾನ ಶಿಕ್ಷಕರಾದ ಬಿ.ಎನ್.ಪುಷ್ಪಾ, ಹೇಮಲತ, ಆಶಾರಾಣಿ, ಬಾಬಾಜಾನ್ ಸಬೀಹಾಭಾನು ಭಾಗವಹಿಸಿದ್ದರು.