ಸಂವಿಧಾನ ಕುರಿತು ಜಾಗೃತಿ ಮೂಡಿಸಿ: ತಹಸೀಲ್ದಾರ್ ಪ್ರಾಣೇಶ್

| Published : Feb 06 2024, 01:32 AM IST

ಸಾರಾಂಶ

ಜಿಲ್ಲೆಯಾದ್ಯಂತ ಜಾಗೃತಿ ಜಾಥಾ ನಡೆಯುತ್ತಿದ್ದು, ಸದ್ಯ ಕುಕನೂರು ತಾಲೂಕಿಗೆ ಆಗಮಿಸಿದ್ದು, ಪ್ರತಿ ಗ್ರಾಪಂ ಮಟ್ಟದಲ್ಲಿ ತಲುಪಲಿದೆ. ಇದರ ಜನರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು

ಕುಕನೂರು: ಸಂವಿಧಾನ ದಿನಾಚರಣೆಯ ನಿಮಿತ್ತ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದ್ದು, ಪ್ರತಿಯೊಬ್ಬರು ಸಂವಿಧಾನ ಕುರಿತು ಜಾಗೃತಿ ಮೂಡಿಸಬೇಕು ಎಂದು ತಹಸೀಲ್ದಾರ್ ಎಚ್. ಪ್ರಾಣೇಶ್ ಹೇಳಿದರು.

ತಾಲೂಕಿನ ಭಾನಾಪುರ ಗ್ರಾಮದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದ ಅವರು, ಜಿಲ್ಲೆಯಾದ್ಯಂತ ಜಾಗೃತಿ ಜಾಥಾ ನಡೆಯುತ್ತಿದ್ದು, ಸದ್ಯ ಕುಕನೂರು ತಾಲೂಕಿಗೆ ಆಗಮಿಸಿದ್ದು, ಪ್ರತಿ ಗ್ರಾಪಂ ಮಟ್ಟದಲ್ಲಿ ತಲುಪಲಿದೆ. ಇದರ ಜನರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ವಿ.ಕೆ. ಬಡಿಗೇರ, ಗ್ರಾಪಂ ಪಿಡಿಓ ರಮೇಶ ತಿಮ್ಮಾರಡ್ಡಿ, ಗ್ರಾಪಂ ಉಪಾಧ್ಯಕ್ಷೆ ಪವಿತ್ರಾ ಪ್ರಕಾಶ ಬಂಗೇರ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ವಿಜಯಕುಮಾರ, ಗ್ರಾಪಂ ಕಾರ್ಯದರ್ಶಿ ಪರಶುರಾಮ ನಾಯಕ, ಗ್ರಾಮಲೆಕ್ಕಿಗ ಹನುಮೇಶ ಮಾಳೆಕೊಪ್ಪ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಬಸಪ್ಪ ಗಡ್ಡದ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಪ್ರೌಢ ಶಾಲೆ ಮುಖ್ಯೋಪಾಧ್ಯಯ ನಾಗಪ್ಪ ಅಗಸಿಮುಂದಿನ, ಸೋಮಶೇಖರ ಹರ್ತಿ, ಆನಂದ ಕುಮಾರ ಕನ್ನಾರಿ, ಕಾಶಿವಿಶ್ವನಾಥ, ಉದಯಕುಮಾರ, ಲಿಂಗರಡ್ಡಿ, ಮಾಜಿ ಗ್ರಾಪಂ ಸದಸ್ಯ ಪ್ರಕಾಶ ಸುಳ್ಳದ, ಕರವಸೂಲಿಗಾರ ಅಲ್ಲಾಭಕ್ಷಿ ನದಾಫ್‌, ಪರಶುರಾಮ ಮಡಿವಾಳರ ಇತರರಿದ್ದರು.