ಕ್ಷಯ ರೋಗ ಕುರಿತು ಜನಜಾಗೃತಿ ಮೂಡಿಸಿ

| Published : Dec 04 2024, 12:32 AM IST

ಸಾರಾಂಶ

ಕ್ಷಯ ರೋಗವನ್ನು ಪತ್ತೆಹಚ್ಚಲು ತರಬೇತಿಗಳನ್ನು ನೀಡಬೇಕು. ಸುಮಾರು ೫೫ ವರ್ಷ ವಯಸ್ಸಿನವರನ್ನು, ಸಕ್ಕರೆ ಕಾಯಿಲೆ ಇರುವವರನ್ನು, ಏಡ್ಸ್ ರೋಗಿಗಳನ್ನು, ಧೂಮಪಾನ, ಮಧ್ಯಪಾನ ಮಾಡುವವರನ್ನು ಹಾಗೂ ಹೆಚ್ಚು ಜನ ಸಮೂಹ ಸೇರುವ ಸ್ಥಳಗಳಲ್ಲಿ ಕ್ಷಯ ರೋಗ ಪತ್ತೆ ಹಚ್ಚುವ ಪರೀಕ್ಷೆಗಳನ್ನು ಮಾಡಬೇಕು.

ಕನ್ನಡಪ್ರಭ ವಾರ್ತೆ ಕೋಲಾರಗೃಹ ಆರೋಗ್ಯ ಯೋಜನೆಯ ಸಹಯೋಗದಿಂದ ಕ್ಷಯರೋಗವನ್ನು ಪತ್ತೆ ಹಚ್ಚಿ ಅದಕ್ಕೆ ತ್ವರಿತ ಗತಿಯಲ್ಲಿ ಚಿಕಿತ್ಸೆ ನೀಡಬೇಕು. ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಅರಿವು ಕಾರ್ಯಕ್ರಮ ಹಾಗೂ ವ್ಯಾಪಕವಾಗಿ ಪ್ರಚಾರವನ್ನು ಜನರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಎನ್.ಟಿ.ಇ.ಪಿ ೧೦೦ ದಿನಗಳ ಶಿಬಿರ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತರಬೇತಿ ನೀಡಲು ಸೂಚನೆ

ಕ್ಷಯ ರೋಗವನ್ನು ಪತ್ತೆಹಚ್ಚಲು ತರಬೇತಿಗಳನ್ನು ನೀಡಬೇಕು. ಸುಮಾರು ೫೫ ವರ್ಷ ವಯಸ್ಸಿನವರನ್ನು, ಸಕ್ಕರೆ ಕಾಯಿಲೆ ಇರುವವರನ್ನು, ಏಡ್ಸ್ ರೋಗಿಗಳನ್ನು, ಧೂಮಪಾನ, ಮಧ್ಯಪಾನ ಮಾಡುವವರನ್ನು ಹಾಗೂ ಹೆಚ್ಚು ಜನ ಸಮೂಹ ಸೇರುವ ಸ್ಥಳಗಳಲ್ಲಿ ಕ್ಷಯ ರೋಗ ಪತ್ತೆ ಹಚ್ಚುವ ಪರೀಕ್ಷೆಗಳನ್ನು ಮಾಡಬೇಕು ಎಂದರು. ರೋಗಿಗಳ ಗುಣಲಕ್ಷಣಗಳ ಆಧಾರದ ಮೇಲೆ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಸೇರಿಸಿಕೊಳ್ಳುವುದು, ಇಲ್ಲದಿದ್ದರೆ ಅವರವರ ಸ್ವಂತ ಮನೆಯಲ್ಲಿಯೇ ಚಿಕಿತ್ಸೆ ನೀಡಬೇಕು. ನಿಕ್ಷಯ್ ಪೋರ್ಷನ್ ಯೋಜನೆ ಮತ್ತು ನಿಕ್ಷಯ್ ಮಿತ್ರವನ್ನು ನೂರರಷ್ಟು ಎಲ್ಲಾ ಕೇಂದ್ರಗಳಲ್ಲಿ ಜಾರಿಗೆ ತರಬೇಕು ಎಂದು ಹೇಳಿದರು. 7ರಂದು ಶಿಬಿರ ಉದ್ಘಾಟನೆ

ಡಿ.೭ರಂದು ಶಿಬಿರ ಉದ್ಘಾಟಿಸಲಾಗುವುದು, ಮಾ.೧೭/೨೦೨೫ ರವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಹಾಗೂ ಯುವಜನತೆಗೆ ಕ್ಷಯ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಕ್ಷಯ ರೋಗ ಬಂದು ವಾಸಿಯಾದ ವ್ಯಕ್ತಿಗಳನ್ನು ಕರೆತಂದು ಜನರಿಗೆ ಅರಿವು ಮೂಡಿಸುವುದು. ಅರಿವು ಕಾರ್ಯಕ್ರಮಗಳಲ್ಲಿ ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿ ಡಾ.ಜಿ.ಪ್ರಸನ್ನಕುಮಾರ್ ಇದ್ದರು.