ಶಿಕ್ಷಣ ಜೊತೆಗೆ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಿ: ಮಹೇಶ ಬೆಲ್ಲದ

| Published : Jan 10 2025, 12:49 AM IST

ಸಾರಾಂಶ

ಗುಣಾತ್ಮಕ ಶಿಕ್ಷಣ ಕೊಡುವುದರ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವನ್ನು ಮಕ್ಕಳಲ್ಲಿ ಮೂಡಿಸಬೆಕಾಗಿದೆ ಎಂದು ಬೆಂಗಳೂರಿನ ಉದ್ಯಮಿ ಮತ್ತು ಬಿ.ಜಿ.ಬೆಲ್ಲದ ಸೇವಾ ಸಂಸ್ಥೆಯ ಅಧ್ಯಕ್ಷ ಮಹೇಶ ಬೆಲ್ಲದ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಗುಣಾತ್ಮಕ ಶಿಕ್ಷಣ ಕೊಡುವುದರ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವನ್ನು ಮಕ್ಕಳಲ್ಲಿ ಮೂಡಿಸಬೆಕಾಗಿದೆ ಎಂದು ಬೆಂಗಳೂರಿನ ಉದ್ಯಮಿ ಮತ್ತು ಬಿ.ಜಿ.ಬೆಲ್ಲದ ಸೇವಾ ಸಂಸ್ಥೆಯ ಅಧ್ಯಕ್ಷ ಮಹೇಶ ಬೆಲ್ಲದ ಹೇಳಿದರು.

ಗುರುವಾರ ಅಥಣಿ ವಿಧ್ಯಾವರ್ಧಕ ಸಂಸ್ಥೆಯ 36ನೇ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳನ್ನು ಸಾಧ್ಯವಾದಷ್ಟು ಮೊಬೈಲ್‌ ಬಳಿಕೆಯಿಂದ ದೂರ ಇಡಿ. ಅತಿಯಾದ ಮೊಬೈಲ್‌ ಬಳಿಕೆಯಿಂದ ಮಕ್ಕಳಲ್ಲಿ ಓದುವ ಮತ್ತು ಜ್ಞಾಪಕ ಶಕ್ತಿ ಕಡಿಮೆ ಆಗುತ್ತಿದೆ. ಸಮಾಜಿಕ ಚಟುವಟಿಕೆಗಳಿಂದ ದೂರ ಉಳಿಯುವ ಹವ್ಯಾಸ ಬೆಳೆಸುತಿದೆ ಎಂದು ಹೇಳಿದರು.

ಉದ್ಯಮಿ ಆನಂದ ಹಂಜಿ ಮಾತನಾಡಿ, ಮಕ್ಕಳಿಗೆ ಶಾಲೆಯಲ್ಲಿ ಸಾಧಕರ ಕರೆಸಿ ಭಾಷಣ ಮತ್ತು ಸಂವಾದ ಕಾರ್ಯಕ್ರಮ ನಡೆಸಿಕೊಡುವುದರಿಂದ ಮಕ್ಕಳಲ್ಲಿ ಸಹ ಅವರಂತೆ ತಾವೂ ಸಾಧಕರಾಗಬೇಕೆಂಬ ಹಂಬಲ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸಾಕಷ್ಟು ಸಾಧನೆ ಮಾಡುವ ಶಕ್ತಿ ಇದೆ. ಅವರಿಗೆ ಪ್ರೋತ್ಸಾಹದ ಕೊರತೆ ಇದೆ. ಇದನ್ನು ನಿಗಿಸಲು ಶಿಕ್ಷಕರು ಶಾಲೆಯ ಆಡಳಿತ ಮಂಡಳಿಯ ಸದಸ್ಯರು ಒಗ್ಗಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಶಿವಣ್ಣ ಹಂಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಪ್ರಕಾಶ ಮಾಹಾಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಣ್ಣ ಹಂಜಿ ಸ್ವಾಗತಿಸಿದರು. ಎಸ್.ಪಿ. ಪೀರಗೊಂಡ ವಣದಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಸಂಸ್ಥೆಯ ನಿರ್ದೇಶರಕಾದ ಓಂಕಾರ ಸಾವಡಕರ ವಿಜಯಕುಮಾರ ಬುರ್ಲಿ ಅಶೋಕ ಬುರ್ಲಿ ಶ್ರೀಶೈಲ ಸಂಕ ಸುನೀಲ ಶಿವಣಗಿ ಉಪಸ್ಥಿತರಿದ್ದರು.