ಸಾರಾಂಶ
ಸ್ವಯಂ ಉದ್ಯೋಗ ತರಬೇತಿಗಳ ಸದ್ಭಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸುವಲ್ಲಿ ಮಹಿಳೆಯರು ಮುಂದೆ ಬನ್ನಿ ಎಂದು ಐಡಿಎಲ್ ಫೌಂಡೆಷನ್ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಬೆಂಗಳೂರು ರೋಟರಿ ಕ್ಲಬ್ ಅಧ್ಯಕ್ಷೆ ಡಾ.ಶೈನಿ ಗ್ರೇಸ್ ಪಾಲ್ ಮಹಿಳೆಯರಿಗೆ ಕರೆ ನೀಡಿದರು.
ಹೊಸದುರ್ಗ: ಸ್ವಯಂ ಉದ್ಯೋಗ ತರಬೇತಿಗಳ ಸದ್ಭಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸುವಲ್ಲಿ ಮಹಿಳೆಯರು ಮುಂದೆ ಬನ್ನಿ ಎಂದು ಐಡಿಎಲ್ ಫೌಂಡೆಷನ್ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಬೆಂಗಳೂರು ರೋಟರಿ ಕ್ಲಬ್ ಅಧ್ಯಕ್ಷೆ ಡಾ.ಶೈನಿ ಗ್ರೇಸ್ ಪಾಲ್ ಮಹಿಳೆಯರಿಗೆ ಕರೆ ನೀಡಿದರು.
ತಾಲೂಕಿನ ಶ್ರೀರಾಂಪುರದ ವನದುರ್ಗ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಗಂಗ ಕೃಷ್ಣ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ವತಿಯಿಂದ ಆಯೋಜಿಸಿದ ಎಂಟು ದಿನದ ಉಚಿತ ಬ್ಯೂಟಿ ಪಾರ್ಲರ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.ರಾಣೆಬೆನ್ನೂರಿನ ಸಾಹಿತಿ ಲಕ್ಷ್ಮಿ ಎನ್.ಅಡಕಿ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಇದ್ದು, ಜೀವನದಲ್ಲಿ ಜಿಗುಪ್ಸೆಗೊಂಡಿರುವ ಮಹಿಳೆಯರು ಸಮಾಜದಲ್ಲಿ ಅಸ್ತಿತ್ವ ಬಿಟ್ಟು ಹೋಗಬೇಕಾದರೆ, ಸಮಾಜಕ್ಕೆ ನಾವುಗಳೇ ಕೊಡುಗೆಯಾಗಬೇಕು. ಮಹಿಳೆಯರಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ಇಂತಹ ಸಂಸ್ಥೆಗಳನ್ನು ಅಪ್ಪಿಕೊಂಡಾಗ ಮಾತ್ರ ಯಶಸ್ಸಿನತ್ತ ಸಾಗಬಹುದು ಎಂದು ತಿಳಿಸಿದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
ಟ್ರಸ್ಟಿ ಉಮಾ ಕುಮಾರ್ ಬ್ಯೂಟಿಷಿಯನ್ ಶಶಿಕಲಾ, ಕೆ.ಶ್ವೇತಾ, ನಾಗರತ್ನ, ಸುಮಾಯಾ ಭಾನು, ಶಶಿಕಲಾ ಇನ್ನೂ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಅನುರಾಧ ಪ್ರಾರ್ಥಿಸಿ, ಸಂಚಿತ ಸ್ವಾಗತಿಸಿ ಎಚ್.ಗಾಯಿತ್ರಿ ವಂದಿಸಿ ಸಾನಿಯಾ ಕಾರ್ಯಕ್ರಮ ನಿರೂಪಿಸಿದರು.