ಸಾರಾಂಶ
ಸುಜಾತ ಭಟ್ ಅವರು ಕ್ಷಣಕ್ಷಣಕ್ಕೂ ಒಂದೊಂದು ಹೇಳಿಕೆ ನೀಡುತ್ತಿರುವುದರಿಂದ ಆಕೆಯ ಹೇಳಿಕೆ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ ಎಂದು ಎಂ ವಿಜಯ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸುಜಾತಾ ಭಟ್ ಅವರು ಕ್ಷಣಕ್ಷಣಕ್ಕೂ ಒಂದೊಂದು ಹೇಳಿಕೆ ನೀಡುತ್ತಿರುವುದರಿಂದ ಆಕೆಯ ಹೇಳಿಕೆ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ಮೊದಲು ಸುಜಾತಾ ಭಟ್ ಅವರನ್ನು ಪೊಲೀಸರು ವಶಕ್ಕೆ ಪಡೆಯಬೇಕು ಎಂದು ಕೊಡಗಿನ ವಾಸಂತಿ ಸಹೋದರ ಎಂ.ವಿಜಯ್ ಆಕ್ರೋಶ ಹೊರಹಾಕಿದ್ದಾರೆ.ವಿರಾಜಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಸುಜಾತಾ ಭಟ್ ದಿನಕ್ಕೊಂದು ಸುಳ್ಳು ಸೃಷ್ಟಿ ಮಾಡುತ್ತಿದ್ದಾರೆ. ರಾತ್ರಿ ಮಗಳು ಅಲ್ಲ ಅನ್ನುತ್ತಾರೆ, ಬೆಳಿಗ್ಗೆ ಮಗಳು ಎನ್ನುತ್ತಾರೆ. ಒಂದೊಂದು ಸಲ ಒಂದೊಂದು ರೀತಿಯ ಹೇಳಿಕೆ ನೀಡುತ್ತಾರೆ. ನನ್ನ ಸಹೋದರಿ ವಾಸಂತಿ ಎಷ್ಟು ಜನರಿಗೆ ಮಗಳು ಆಗಬೇಕು? ಎಲ್ಲರಿಗೂ ಮಗಳ ಇವಳು? ಎಲ್ಲಾ ಸುಳ್ಳು ಹೇಳುತ್ತ ಇದ್ದಾರೆ.
ಸುಜಾತಾ ಭಟ್ ಅವರ ಬಾಯಿಯಿಂದಲೇ ಮಾಧ್ಯಮಗಳ ಮುಖಾಂತರ ಕೇಳಿದ್ದೇನೆ. ವಾಸಂತಿ ಅವರ ಪಾಸ್‌ಪೋರ್ಟ್ ಚಿನ್ನಾಭರಣಗಳನ್ನು ಕದ್ದುಕೊಂಡು ಹೋಗಿದ್ದಾರೆ. ಅವರ ಪೋಟೊ ಆಲ್ಬಮ್, ಬಟ್ಟೆಗಳು ಸೇರಿದಂತೆ ಸುಮಾರು 15 ಲಕ್ಷದಷ್ಟು ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ.2004 ರಿಂದ ರಂಗಪ್ರಸಾದ್ ಹಾಗೂ ಸುಜಾತಾ ಭಟ್ ಅವರೊಂದಿಗೆ ಸಂಬಂಧ ಇದೆ. ಸುಜಾತಾ ಭಟ್ ಅವರ ಮೇಲೆ ಸಾಕಷ್ಟು ಅನುಮಾನ ಇದೆ. ವಾಸಂತಿ ಸತ್ತ ಸಂದರ್ಭದಲ್ಲೇ ಅದು ಅನುಮಾನದ ಸಾವು ಎಂದು ದೂರು ನೀಡಿದ್ದೆವು. ಸಿಬಿಐ ತನಿಖೆ ಆಗಿತ್ತು. ಅದರಲ್ಲಿ ಆತ್ಮಹತ್ಯೆ ಎಂದು ವರದಿ ಬಂದಿದೆ. ನನ್ನ ಬಳಿ ವಾಸಂತಿ ಭಟ್ ಅವರ ಹಲವಾರು ದಾಖಲೆಗಳು ಇವೆ. ಎಸ್‌ಐಟಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.