ಬ್ಯಾಂಕ್‌ ಚುನಾವಣೆಯಲ್ಲಿ ಬೋಗಸ್‌ ಮತದಾರರ ಸೃಷ್ಟಿ

| Published : Dec 26 2024, 01:03 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪಟ್ಟಣದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲೊಂದಾದ ದಿ ಕರ್ನಾಟಕ ಕೋ ಆಪ್ ಬ್ಯಾಂಕ್‌ ಚುನಾವಣೆಯಲ್ಲಿ ಹಾಲಿ ಪೆನಲ್‌ದವರು ಅಧಿಕಾರಕ್ಕಾಗಿ ತಾವೇ ಗೆಲ್ಲಬೇಕೆಂದು ಬೋಗಸ್ ಮತದಾರರನ್ನು ಸೃಷ್ಟಿಸಿ ಅನ್ಯಾಯ ಮಾಡುತ್ತಿದ್ದು, ಇದನ್ನು ಖಂಡಿಸುವುದಾಗಿ ಬ್ಯಾಂಕ್‌ನ ಸದಸ್ಯ ಹಾಗೂ ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವೆಂಕನಗೌಡ ಪಾಟೀಲ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಟ್ಟಣದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲೊಂದಾದ ದಿ ಕರ್ನಾಟಕ ಕೋ ಆಪ್ ಬ್ಯಾಂಕ್‌ ಚುನಾವಣೆಯಲ್ಲಿ ಹಾಲಿ ಪೆನಲ್‌ದವರು ಅಧಿಕಾರಕ್ಕಾಗಿ ತಾವೇ ಗೆಲ್ಲಬೇಕೆಂದು ಬೋಗಸ್ ಮತದಾರರನ್ನು ಸೃಷ್ಟಿಸಿ ಅನ್ಯಾಯ ಮಾಡುತ್ತಿದ್ದು, ಇದನ್ನು ಖಂಡಿಸುವುದಾಗಿ ಬ್ಯಾಂಕ್‌ನ ಸದಸ್ಯ ಹಾಗೂ ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವೆಂಕನಗೌಡ ಪಾಟೀಲ ಕಿಡಿಕಾರಿದರು.

ಹುಡ್ಕೋ ಬಡಾವಣೆಯ ಹನುಮಾನ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ ಕರ್ನಾಟಕ ಬ್ಯಾಂಕ್‌ ಲಿಮಿಟೆಡ್‌ ಇಷ್ಟು ಎತ್ತರಕ್ಕೆ ಬೆಳೆಯಲು ಬ್ಯಾಂಕ್‌ ಸದಸ್ಯರು, ಶೇರುದಾರರು ಜೊತೆಗೆ ಠೇವಣಿದಾರರು ಕಾರಣ. ಬ್ಯಾಂಕ್‌ ಶ್ರೇಯೋಭಿವೃದ್ಧಿಗೆ ನಾನು ಸಾಕಷ್ಟು ಶ್ರಮಿಸಿದ್ದೇನೆ. ಆದರೆ, ಈ ಬಾರಿ ಕೆಲ ಹಿರಿಯರ ಸಮ್ಮುಖದಲ್ಲಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದರೂ ಹಳೆ ಪೆನಲ್, ಹೊಸ ಪೆನಲ್ ಎನ್ನದೇ ಅವಿರೋಧ ಆಯ್ಕೆ ಮಾಡುವ ಮೂಲಕ ಸಮಾನತೆ ತೋರುತ್ತಾರೆ ಎಂದುಕೊಂಡು ಸಲ್ಲಿಸಿದ ನಾಮಪತ್ರವನ್ನು ಹಿಂಪಡೆದು ಹಿರಿಯರ ಕೈಯಲ್ಲಿ ಒಪ್ಪಿಸಿದ್ದೆವು. ಕೆಲ ಹಳೆ ಪೆನಲ್‌ದವರ ಅಣತೆಯಂತೆ ಕೆಲ ಹಿರಿಯರ ತಲೆ ಬಾಗಿ ನಮಗೆ ಅನ್ಯಾಯ ಮಾಡಿದರು. ಚುನಾವಣೆ ಕಣದಲ್ಲಿ ಉಳಿದು ಚುನಾವಣೆ ಎದುರಿಸುವುದು ಅನಿವಾರ್ಯವಾಗಿರುವುದನ್ನು ಮುದ್ದೇಬಿಹಾಳ ತಾಲೂಕಿನ ಜನ ಅರ್ಥೈಸಿಕೊಳ್ಳಬೇಕಿದೆ. ಅಧಿಕಾರ ದಾಹದವರನ್ನು ಗೆಲ್ಲಿಸದೇ ಬ್ಯಾಂಕ್‌ ಹಿತ ಬಯಸುವವರನ್ನು ಆಶೀರ್ವದಿಸಬೇಕು ಎಂದು ಹೇಳಿದರು.

ಅಭ್ಯರ್ಥಿ ವಿಜಯ ಬಡಿಗೇರ ಮಾತನಾಡಿ, ಬ್ಯಾಂಕ್‌ ಹಿಂದುಳಿದ ವರ್ಗ 2ಎ ಮೀಸಲಾತಿ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾದರೆ, ಹಿರಿಯರ ಮಾತಿಗೆ ಬೆಲೆಕೊಟ್ಟು ಮೌನವಾಗಿದ್ದೆವು. ಆದರೆ, ಹಳೆ ಹಾಲಿ ಪೆನಲ್‌ದವರು ನಮಗೆ ಮೋಸ ಮಾಡಿದರು. ಎಲ್ಲಿ ತಮ್ಮ ಬಣದವರಿಗೆ ಅನ್ಯಾಯವಾಗುತ್ತೆ ಎಂದು ಚುನಾವಣಾ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಮ್ಮ ನಾಮಪತ್ರ ತಿರಸ್ಕೃತವಾಗುವಂತೆ ಪ್ರಯತ್ನಿಸಿದರು. ಆಗ ಶಿವಕುಮಾರ ಭೋಜರಾಜ ಬಿರಾದಾರ ಮತ್ತು ನಾನು ಸ್ನೇಹಿತರು ಚುನಾವಣೆ ಅಕ್ರಮವನ್ನು ಬಲವಾಗಿ ವಿರೋಧಿಸಿದೆವು. ಇದರಿಂದ ತಪ್ಪು ಒಪ್ಪಿಕೊಂಡ ಚುನಾವಣಾಧಿಕಾರಿಗಳು ನಮ್ಮ ಬಣದವರು ಕಣದಲ್ಲಿ ಉಳಿಯುವಂತೆ ಮಾಡಿದ್ದಾರೆ ಎಂದರು.

ಹೀಗಾಗಿ, ನಾನು ಕಣದಿಂದ ಹಿಂದೆ ಸರಿದು ಹಿಂದುಳಿದ ವರ್ಗದ 2ಎ ಮೀಸಲಾತಿಯಲ್ಲಿ ಸ್ಪರ್ಧಿಸಿರುವ ರವೀಂದ್ರ ಬಿರಾದಾರ ಬೆಂಬಲಿಸಿದ್ದೇನೆ. ಮತದಾರರು ನಮ್ಮ ಬಣದ ಸಾಮಾನ್ಯ ಮೀಸಲಾತಿಯಲ್ಲಿ ಸ್ಪರ್ಧಿಸಿದ ವೆಂಕನಗೌಡ ಪಾಟೀಲ, ಸಂಗಪ್ಪ ಬಸಪ್ಪ ನಾಶಿ, ಮಹಾಂತಗೌಡ ದ್ಯಾವನಗೌಡ ಪಾಟೀಲ, ಸೇರಿ ಎಲ್ಲರಿಗೂ ಮತ ನೀಡುವಂತೆ ಮನವಿ ಮಾಡಿದರು.

ಈ ವೇಳೆ ರಾಜು ಬಳ್ಳೊಳ್ಳಿ, ಹಣಮಂತ ನಲವಡೆ, ಮಹಾಂತಗೌಡ ಕಾಶಿನಕುಂಟಿ, ಸಂಜು ಬಾಗೇವಾಡಿ, ಅಶೋಕ ರಾಠೋಡ, ಶಿವರಾಜ ರಾಠೋಡ, ಅನಿಲ ರಾಠೋಡ, ಪುನಿತ ಹಿಪ್ಪರಗಿ, ಸಂತೋಷ ಬಾದರಬಂಡಿ, ಸಂಗನಗೌಡ ಹೊಸಗೌಡರ, ಬಸನಗೌಡ ಪಾಟೀಲ ಸೇರಿದಂತೆ ಹಲವರು ಇದ್ದರು.