ಮಹಿಳೆ ಶಕ್ತಿವಂತಳಾದರೆ ಕುಟುಂಬಕ್ಕೆ ಶ್ರೇಯಸ್ಸು: ಪಿಎಸ್‌ಐ

| Published : Mar 27 2024, 01:04 AM IST

ಮಹಿಳೆ ಶಕ್ತಿವಂತಳಾದರೆ ಕುಟುಂಬಕ್ಕೆ ಶ್ರೇಯಸ್ಸು: ಪಿಎಸ್‌ಐ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ: ಕುಟುಂಬದ ಪ್ರತಿ ಹೆಣ್ಣು ಮಗು ಕಲಿಯಬೇಕು. ಒಂದು ಹೆಣ್ಣು ಯಾವ ಸಾಧನೆ ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಕುಟುಂಬದ ಮಹಿಳೆ ಶಕ್ತಿಯುತಳಾದರೆ ಪ್ರತಿ ಕುಟುಂಬವೂ ಶೈಕ್ಷಣಿಕವಾಗಿ ಶ್ರೇಯಸ್ಸನ್ನು ಪಡೆಯುತ್ತದೆ ಎಂದು ದಾಬಸ್‌ಪೇಟೆ ಠಾಣೆ ಪಿಎಸ್‌ಐ ಸಿದ್ದಪ್ಪ ತಿಳಿಸಿದರು.

ದಾಬಸ್‌ಪೇಟೆ: ಕುಟುಂಬದ ಪ್ರತಿ ಹೆಣ್ಣು ಮಗು ಕಲಿಯಬೇಕು. ಒಂದು ಹೆಣ್ಣು ಯಾವ ಸಾಧನೆ ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಕುಟುಂಬದ ಮಹಿಳೆ ಶಕ್ತಿಯುತಳಾದರೆ ಪ್ರತಿ ಕುಟುಂಬವೂ ಶೈಕ್ಷಣಿಕವಾಗಿ ಶ್ರೇಯಸ್ಸನ್ನು ಪಡೆಯುತ್ತದೆ ಎಂದು ದಾಬಸ್‌ಪೇಟೆ ಠಾಣೆ ಪಿಎಸ್‌ಐ ಸಿದ್ದಪ್ಪ ತಿಳಿಸಿದರು. ಸೋಂಪುರ ಹೋಬಳಿಯ ಕೆಂಗಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೇಟಿ ಬಚಾವೋ ಬೇಟಿ ಫಡಾವೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭೀವೃದ್ಧಿ ಇಲಾಖೆ ಹಿರಿಯ ಮೇಲ್ವಿಚಾರಕಿ ವಿಜಯಲಕ್ಷ್ಮೀ ಮಾತನಾಡಿ, ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿ ಈಗಲೂ ಜಾರಿಯಲ್ಲಿದೆ. ದಿನನಿತ್ಯ ಅಲ್ಲಲ್ಲಿ ಬಾಲ್ಯವಿವಾಹ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಈ ಅನಿಷ್ಠ ಪದ್ಧತಿಯಿಂದ ರಕ್ಷಣೆ ಮಾಡಬೇಕೆನ್ನುವುದೇ ಕಾರ್ಯಕ್ರಮದ ಉದ್ದೇಶ ಎಂದರು. ಗ್ರಾಪಂ ಸದಸ್ಯರಾದ ಮಂಜಮ್ಮ, ಸುಮಿತ್ರಾ, ಪೊಲೀಸ್ ಸಿಬ್ಬಂದಿ ರೋಜಾ, ಅಂಗನವಾಡಿ ಶಿಕ್ಷಕಿಯರಾದ ಸುಜಾತ, ನಾಗರತ್ನ, ಸಾವಿತ್ರಮ್ಮ, ಭೀಮಕ್ಕ, ಪೋಷಕರು ಭಾಗವಹಿಸಿದ್ದರು.