ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸೋತವರಿಗೆ ಮಾತ್ರ ಗೆಲುವಿನ ಅವಕಾಶವಿರುವುದರಿಂದ ಛಲ ಬಿಡದೇ ಗೆಲುವಿನ ದಡ ಸೇರುವ ತವಕದಲ್ಲಿ ಶ್ರಮವಹಿಸಬೇಕೆಂದು ಕ್ರೀಡಾಪಟುಗಳಿಗೆ ಕೊಣ್ಣೂರ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಬಸವರಾಜ ಕೊಣ್ಣೂರ ಕಿವಿಮಾತು ಹೇಳಿದರು.ಶನಿವಾರ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಲಯನ್ಸ್ ಕ್ಲಬ್ ಆಫ್ ಗ್ರೀನ್ ಬೇಸಿನ್ ವತಿಯಿಂದ ಶನಿವಾರ ಆಯೋಜಿಸಿರುವ ರೀಜನ್ ಮಟ್ಟದ 6ನೇ ಲೈಟ್ ವೇಟ್ ಟೆನಿಸ್ ಬಾಲ್ ಪಂದ್ಯಾವಳಿಗೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಪಂದ್ಯಾವಳಿಗಳಲ್ಲಿ ಎಲ್ಲರೂ ಭಾಗವಹಿಸುವುದು ಮುಖ್ಯವಾಗಿದೆ. ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ. ಪ್ರತಿಯೊಬ್ಬ ಆರೋಗ್ಯವಂತನು ಕ್ರೀಡೆ, ವ್ಯಾಯಾಮ ಮತ್ತು ಪರಿಶ್ರಮದ ಕೆಲಸವನ್ನು ಮೈಗೂಡಿಸಿಕ್ಕೊಂಡಿರುತ್ತಾನೆ. ಇದ್ದಕ್ಕೆ ಪೂರಕ ಎಂಬಂತೆ ಊರಿಗೊಂದು ಮೈದಾನವಿರಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣುವ ಉತ್ತಮ ಮೈದಾನ ಮಹಾಲಿಂಗಪುರ ಪಟ್ಟಣದಲ್ಲಿ ಕಾಣುತ್ತಿದ್ದೇನೆ. ಇದಕ್ಕೆ ಶಿಸ್ತು ಬದ್ಧ ಪಂದ್ಯಾವಳಿ ಆಯೋಜಿಸಲು ಶ್ರಮಿಸಿದ ಸ್ಥಳೀಯ ಎಲ್ಲ ಲೈನ್ಸ್ ಸದಸ್ಯರಿಗೆ ಅಭಿನಂದನೆಗಳು ಎಂದರು.
ಪ್ರಾಸ್ತಾವಿಕವಾಗಿ ಸ್ಥಳೀಯ ಲೈನ್ಸ್ ಕ್ಲಬ್ ಅಧ್ಯಕ್ಷ ಡಾ.ಮಾರುತಿ ಮೇದಾರ ಮಾತನಾಡಿ, ಪ್ರತಿಯೊಂದು ಯಶಸ್ವಿ ಕಾರ್ಯದ ಹಿಂದೆ ಸಾಂಘಿಕ ಸಹಕಾರ ಅಡಗಿರುತ್ತದೆ. ಈ ಯಶಸ್ವಿ ಪಂದ್ಯಾವಳಿಗೆ ನಮ್ಮ ಲೈನ್ಸ್ ಸಂಸ್ಥೆಯ ಮತ್ತು ಸ್ಥಳೀಯ ಹಿರಿಯ ಕಿರಿಯ ಕ್ರೀಡಾಪಟುಗಳಾದಿಯಾಗಿ ಪ್ರತಿಯೊಬ್ಬರೂ ಹಗಲಿರುಳೆನ್ನದೆ ಶ್ರಮ ವಹಿಸಿದ್ದು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ ಪಂದ್ಯಾವಳಿಯಲ್ಲಿ ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳ 10 ಕ್ಲಬ್‌ಗಳ ಪ್ರತಿಷ್ಠಿತ ತಂಡಗಳು ಭಾಗವಹಿಸಿವೆ ಎಂದರು.ನಂತರ ಮಾತನಾಡಿದ ಖ್ಯಾತ ಹೃದಯರೋಗ ತಜ್ಞ ಡಾ ವಿಜಯ ಹಂಚಿನಾಳ ಲೈನ್ಸ್ ಕ್ಲಬ್ ಸದಸ್ಯರಲ್ಲಿ ಹೆಚ್ಚಿನವರು ಉದ್ಯೋಗದಲ್ಲಿಯೇ ಹೆಚ್ಚು ಬ್ಯುಸಿಯಾಗಿರುವುದರಿಂದ ಇಂಥ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರೂ ಅದರಲ್ಲಿ ತೋಡಗಿಕೊಳ್ಳಲು ಅವಕಾಶ ನೀಡಿರುವ ಲೈನ್ಸ್ ಸಂಸ್ಥೆಯ ಈ ಕಾರ್ಯ ಶ್ಲಾಘನೀಯ. ಬಿಡುವಿಲ್ಲದ ಈ ಜೀವನ ಜಂಚಾಟದಲ್ಲಿ ಇಂಥ ಆಟಗಳಲ್ಲಿ ತೊಡಗಿ ಸಂತೋಷ ಅನುಭವಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
ಇದೇ ಸಮಯದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಮಹನೀಯರನ್ನು ಸನ್ಮಾನಿಸಿ, ಲೈನ್ಸ್ ಸಂಸ್ಥೆಗೆ ನೂತನವಾಗಿ ಆಗಮಿಸುತ್ತಿರುವ ನೂತನ ಸದಸ್ಯರನ್ನು ಸ್ವಾಗತಿಸಿಕ್ಕೊಳ್ಳಲಾಯಿತು.ವೇದಿಕೆ ಮೇಲೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ರೀಜನ್ ಚೇರ್ ಪರ್ಸನ್ ಶಶಿಕಾಂತ ಜೋಶಿ, ಝೋನ್ ಚೇರ್ ಪರ್ಸನ್ ಅಡಿವೆಪ್ಪ ಮಳಗಲಿ, ಡಾ.ಎ.ಆರ್.ಬೆಳಗಲಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಕಾನಿಪ ಸಂಘದ ಅಧ್ಯಕ್ಷ ಮಹೇಶ ಆರಿ, ಸಂಜು ರಾಠೋಡ, ಡಾ. ಎಂ ಎಸ್. ಚನ್ನಾಳ, ಡಾ.ರಮೇಶ ಪತ್ತಾರ, ಶಂಕರ ಗುಜ್ಜರ, ಶ್ರೀಶೈಲ ಭಜಂತ್ರಿ, ಶಿವಶಂಕರ ಗುಜ್ಜರ, ಮಹಾದೇವ ಕಡಬಲ್ಲವರ, ಶಿವನಗೌಡ ಪಾಟೀಲ, ಬಾಳು ಮಾಳವದೆ, ಮಲ್ಲಪ್ಪ ಯರಡ್ಡಿ, ಮಹೇಶ ದರ್ಬಾರ್, ಡಾ.ಆರ್ ಎನ್ ಸೋನವಾಲ್ಕರ, ರೂಪಾಲಿ ಅಂಗಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪಟ್ಟಣದ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಪಥಸಂಚಲನ ನಡೆಸಿದರು. ಸಂಘಟನಾ ಅಧ್ಯಕ್ಷ ಡಾ.ವಿಶ್ವನಾಥ ಗುಂಡಾ, ಕಾರ್ಯದರ್ಶಿ ಡಾ.ಅಶೋಕ ದಿನ್ನಿಮನಿ ಸ್ವಾಗತಿಸಿದರು. ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು. ಉಪಾಧ್ಯಕ್ಷ ರಾಜು ತಾಳಿಕೋಟಿ ವಂದಿಸಿದರು. ಡಾ.ಶಕುಂತಲಾ ಸಂಶಿ, ಡಾ. ರಮೇಶ ಶೆಟ್ಟರ, ಉಪಾಧ್ಯಕ್ಷ ಸಿದ್ದು ನಕಾತಿ, ವಿಷ್ಣುಗೌಡ ಪಾಟೀಲ, ಖಜಾಂಚಿ ರಾಜು ಡಾಂಗೆ, ಸೋಮು ಸಂಶಿ, ಹುಚ್ಚೇಶ ವಡ್ಡರ, ಸೋಮು ಸಂಶಿ ಇತರರಿದ್ದರು.