ಕ್ರಿಕೆಟ್ ಟೂರ್ನಿ: ಸಿಗೇನಹಳ್ಳಿ ಸ್ನೇಹ ಬಳಗ ತಂಡಕ್ಕೆ ಗೆಲುವು

| Published : Jan 23 2025, 12:45 AM IST

ಕ್ರಿಕೆಟ್ ಟೂರ್ನಿ: ಸಿಗೇನಹಳ್ಳಿ ಸ್ನೇಹ ಬಳಗ ತಂಡಕ್ಕೆ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ಹಬೊಹಳ್ಳಿ ತಾಲೂಕಿನಲ್ಲಿ ಅತ್ಯಂತ ಯಶಸ್ವಿ ಟೂರ್ನಿಮೆಂಟ್ ಇದಾಗಿದೆ.

ಹಗರಿಬೊಮ್ಮನಹಳ್ಳಿ: ಪಟ್ಟಣದ ಕೆಎಸ್‌ಆರ್‌ಟಿಸಿ ಡಿಪೋ ಬಳಿಯ ಮೈದಾನದಲ್ಲಿ ಪಟ್ಟಣದ ಎಸ್‌ಸಿಸಿ ಕ್ರಿಕೆಟ್ ತಂಡ ಆಯೋಜಿಸಿದ್ದ ಟಿ-ಟೆನ್ ಲೆಜೆಂಡ್ ಲೀಗ್ 35 ವರ್ಷ ಮೇಲ್ಪಟ್ಟ ಆಟಗಾರರ ಕ್ರಿಕೆಟ್ ಟೂರ್ನಿಯಲ್ಲಿ ತಾಲೂಕಿನ ಸಿಗೇನಹಳ್ಳಿ-1 ಗ್ರಾಮದ ಸ್ನೇಹಬಳಗ ತಂಡ ಪೈನಲ್ ಪಂದ್ಯದಲ್ಲಿ ವಿಜೇತರಾಗಿ ಗೆಲುವಿನ ನಗೆ ಬೀರಿದರು.ಆಯೋಜಕರು ಪ್ರಥಮ ಬಹುಮಾನ ಪಡೆದ ತಂಡಕ್ಕೆ ₹35 ಸಾವಿರ ಬಹುಮಾನ, ಆಕರ್ಷಕ ಟ್ರೋಫಿ ನೀಡಿದರು. ದ್ವಿತೀಯ ಸ್ಥಾನವನ್ನು ಎಸ್‌ಸಿಸಿ ಕ್ರಿಕೆಟ್ ತಂಡ ತನ್ನದಾಗಿಸಿಕೊಂಡು ₹15 ಸಾವಿರ, ಆಕರ್ಷಕ ಟ್ರೋಫಿ ಪಡೆದುಕೊಂಡಿತು.

ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದ ಸ್ನೇಹಬಳಗ ತಂಡದ ಕೆ.ಹನುಮಂತ ಟೂರ್ನಿ ಕುರಿತು ಮಾತನಾಡಿ, ಹಬೊಹಳ್ಳಿ ತಾಲೂಕಿನಲ್ಲಿ ಅತ್ಯಂತ ಯಶಸ್ವಿ ಟೂರ್ನಿಮೆಂಟ್ ಇದಾಗಿದೆ. ಯುವಕರು ಮೊಬೈಲ್ ಗೀಳನ್ನು ಬಿಟ್ಟು ಕ್ರೀಡೆಯತ್ತ ಚಿತ್ತಹರಿಸಬೇಕಿದೆ. ನಮ್ಮ ತಂಡದ ಸಂಘಟಿತ ಹೋರಾಟದಿಂದ ಗೆಲುವು ನಮ್ಮದಾಗಿದೆ ಎಂದರು. ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದಕ್ಕೆ ಆಯೋಜಕರು ಹನುಮಂತನಿಗೆ ಎಲ್‌ಇಡಿ ಟಿವಿ ನೀಡಿ ಗೌರವಿಸಿದರು.

ಪೈನಲ್ ಪಂದ್ಯದ ವಿಜೇತ ಆಟಗಾರರಾದ ಬಸವರಾಜ, ಸುಭಾಷ್, ನಬೀಸಾಬ್, ಸೈಯದ್, ಸುಭಾಶ್‌ಚಂದ್ರ, ರಂಗಪ್ಪ, ಕಿರಣ್, ಸಂದೀಪ್, ಜಗನ್ನಾಥ, ಬಂಗಾಳಿ ಸುರೇಶ, ರಾಮನಮಲಿ, ಕಲಂದರ್, ಸುಬಾನ್‌ಸಾಬ್ ಇದ್ದರು.

ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಸಿಗೇನಹಳ್ಳಿ-1 ಗ್ರಾಮದ ಸ್ನೇಹಬಳಗ ತಂಡ ಪ್ರಥಮ ವಿಜೇತರಾಗಿ ಗೆಲುವಿನ ನಗೆ ಬೀರಿತು.