ಸಾರಾಂಶ
ಸೇವೆಯ ಬಳಿಕ ಮಹಾಪೂಜೆಯಲ್ಲಿ ದಂಪತಿ ಪಾಲ್ಗೊಂಡು ಸುಬ್ರಹ್ಮಣ್ಯ ದೇವರ ಪ್ರಸಾದ ಸ್ವೀಕರಿಸಿದರು.
ಸುಬ್ರಹ್ಮಣ್ಯ: ಐಪಿಎಲ್ ಆಟಗಾರ ಮಯಾಂಕ್ ಅಗರ್ವಾಲ್ ದಂಪತಿ ಬುಧವಾರ ಕುಕ್ಕೆ ಸುಬ್ರಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ ಪೂರ್ಣಗೊಳಿಸಿದರು.
ಮಂಗಳವಾರ ಕ್ಷೇತ್ರಕ್ಕೆ ಆಗಮಿಸಿ ಸೇವೆ ಆರಂಭಿಸಿದ್ದರು. ಬುಧವಾರ ಮಧ್ಯಾಹ್ನ ನಾಗಪ್ರತಿಷ್ಠೆ ನೆರವೇರಿಸುವ ಮೂಲಕ ಮುಕ್ತಾಯವಾಯಿತು. ಜೊತೆಗೆ ಮುಂಜಾನೆ ಆಶ್ಲೇಷ ಬಲಿ ಸೇವೆಯನ್ನು ಕೂಡ ನೆರವೇರಿಸಿದರು. ಸೇವೆಯ ಬಳಿಕ ಮಹಾಪೂಜೆಯಲ್ಲಿ ದಂಪತಿ ಪಾಲ್ಗೊಂಡು ಸುಬ್ರಹ್ಮಣ್ಯ ದೇವರ ಪ್ರಸಾದ ಸ್ವೀಕರಿಸಿದರು.