ಬೆಳೆ ವಿಮೆ ಕಂಪನಿಯವರು ನಿಯಮಗಳ ಪಾಲಿಸಲಿ-ಪರಶುರಾಮ

| Published : Sep 08 2025, 01:01 AM IST

ಸಾರಾಂಶ

ನರಗುಂದ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ ಎಲ್ಲಾ ಬೆಳೆಗಳು ಅತಿವೃಷ್ಟಿಯಿಂದ ಸಂರ್ಪೂಣ ಹಾನಿಯಾಗಿವೆ. ಆದ್ದರಿಂದ ಬೆಳೆ ವಿಮೆ ಕಂಪನಿಯವರು ನಿಯಮಗಳನ್ನು ಪಾಲಿಸಿ ರೈತರಿಗೆ ಬೆಳೆ ವಿಮೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕೆಂದು ರೈತ ಸೇನಾ ಸಂಘಟನೆ ಮುಖಂಡ ಪರಶುರಾಮ ಜಂಬಗಿ ಆಗ್ರಹಿಸಿದರು.

ನರಗುಂದ: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ ಎಲ್ಲಾ ಬೆಳೆಗಳು ಅತಿವೃಷ್ಟಿಯಿಂದ ಸಂರ್ಪೂಣ ಹಾನಿಯಾಗಿವೆ. ಆದ್ದರಿಂದ ಬೆಳೆ ವಿಮೆ ಕಂಪನಿಯವರು ನಿಯಮಗಳನ್ನು ಪಾಲಿಸಿ ರೈತರಿಗೆ ಬೆಳೆ ವಿಮೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕೆಂದು ರೈತ ಸೇನಾ ಸಂಘಟನೆ ಮುಖಂಡ ಪರಶುರಾಮ ಜಂಬಗಿ ಆಗ್ರಹಿಸಿದರು.

ಅವರು 3603ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ಸರ್ಕಾರದ ನಿಯಮದ ಪ್ರಕಾರ ರೈತರು ಬಿತ್ತನೆ ಮಾಡಿದ ಬೆಳೆಗಳು 20 ದಿನ ಗತಿಸಿದ ನಂತರ ಅತೀವೃಷ್ಟಿ ಹಾಗೂ ಅನಾವೃಷ್ಟಿಯಿಂದ ಹಾನಿಯಾದರೆ ಬೆಳೆ ವಿಮೆ ಹಾನಿ ಪರಿಹಾರ ಕೊಡಬೇಕೆಂದು ನಿಯಮವಿದೆ. ಆದರೆ ತಾಲೂಕಿನ ರೈತರು ಮುಂಗಾರು ಹಂಗಾಮಿನಲ್ಲಿ ವಾಣಿಜ್ಯ ಬೆಳೆಗಾಳದ ಹೆಸರು, ಗೋವಿನ ಜೊಳ, ಬಿ.ಟಿ. ಹತ್ತಿ, ಸೂರ್ಯಕಾಂತಿ, ಈರುಳ್ಳಿ ಸೇರಿದಂತೆ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ ಎಲ್ಲಾ ರೈತರು ಬೆಳೆಗಳಗೆ ವಿಮೆ ತುಂಬಿದ್ದಾರೆ. ಆದರೆ ಖಾಸಗಿ ಬೆಳೆ ವಿಮೆ ಕಂಪನಿಯವರು ರೈತರು ಬೆಳೆ ಹಾನಿ ಮಾಡಿಕೊಂಡು 1 ತಿಂಗಳ ಗತಿಸಿದರೂ ಕೂಡ ವಿಮೆ ಕಂಪನಿಯವರು ರೈತರಿಗೆ ಬೆಳೆ ವಿಮೆ ಹಾನಿ ಪರಿಹಾರ ಬಿಡುಗಡೆ ಮಾಡಿದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದರು.

ಬೆಳೆ ವಿಮೆ ಕಂಪನಿಯವರು ಸೆ. 20ರೊಳಗೆ ಬೆಳೆ ಹಾನಿ ಮಾಡಿಕೊಂಡ ಎಲ್ಲಾ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ಬಿಡುಗಡೆ ಮಾಡದಿದ್ದರೆ ತಾಲೂಕಿನ ರೈತ ಸಮುದಾಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸರ್ಕಾರ ಮತ್ತು ಬೆಳೆ ವಿಮೆ ಕಂಪನಿಯ ವಿರುದ್ಧ ಅಹೋರಾತ್ರಿ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವೀರಭಸಪ್ಪ ಹೂಗಾರ, ಎಸ್.ಬಿ. ಜೋಗಣ್ಣವರ, ಸಿ.ಎಸ್. ಪಾಟೀಲ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಶಿವಪ್ಪ ಸಾತಣ್ಣವರ, ಮಲ್ಲೇಶ ಅಣ್ಣಿಗೇರಿ, ಅರ್ಜುನ ಮಾನೆ, ಫಕೀರಪ್ಪ ಅಣ್ಣಿಗೇರಿ, ಶಂಕ್ರಪ್ಪ ಜಾಧವ, ಸೋಮಲಿಂಗಪ್ಪ ಆಯಿಟ್ಟಿ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವಾಣ, ವಿಜಯಕುಮಾರ ಹೂಗಾರ, ಇದ್ದರು.