ಸಾರಾಂಶ
ಕೃಷಿ ಇಲಾಖೆಯಲ್ಲಿ ರೈತರೊಂದಿಗೆ ಫೋನ್ ಇನ್ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕರ್ನಾಟಕ ರೈತ ಸುರಕ್ಷಾ ಭೀಮಾ ಯೋಜನೆಯಡಿ ಭತ್ತ, ರಾಗಿ, ಮುಸುಕಿನ ಜೋಳ ಬೆಳೆಗಳ ನೋಂದಣಿಯನ್ನು ಆ. 16 ರೊಳಗೆ ಎಲ್ಲಾ ರೈತರು ಮಾಡಿಕೊಳ್ಳಬೇಕು ಎಂದು ಚಿಕ್ಕಮಗಳೂರು ಸಹಾಯಕ ಕೃಷಿ ನಿರ್ದೇಶಕಿ ಸುಜಾತ ಹೇಳಿದ್ದಾರೆ.ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳೆ ವಿವರಗಳನ್ನು ಅಪ್‌ಲೋಡ್ ಮಾಡದಿದ್ದಲ್ಲಿ ತಾಂತ್ರಿಕ ತೊಂದರೆಯುಂಟಾಗುತ್ತದೆ. ಇಲಾಖೆಯಿಂದ ದೊರೆಯುವ ಸವಲತ್ತುಗಳಿಂದ ವಂಚಿತರಾಗುತ್ತೀರಿ. ಹಾಗಾಗಿ ರೈತರು ಖಾಸಗಿ ನಿವಾಸಿಗಳ ಸಹಯೋಗದೊಂದಿಗೆ ತಮ್ಮ ಜಮೀನು ಗಳಲ್ಲಿ ಬೆಳೆದ ಬೆಳೆಗಳ ಛಾಯಾಚಿತ್ರವನ್ನು ಬೆಳೆ ಸಮೀಕ್ಷೆ ಬೆಳೆ ಆಪ್ ನಲ್ಲಿ ನಿಗಧಿತ ಸಮಯದಲ್ಲಿ ಅಪ್‌ಲೋಡ್ ಮಾಡ ಬೇಕು., ಅಲ್ಲದೇ ಅಪ್‌ಲೋಡ್ ಮಾಡಲು ಇಲಾಖಾಧಿಕಾರಿಗಳ ಸಹಾಯ ಪಡೆಯಬಹುದು ಎಂದು ಫೋನೀ ಗ್ರೂಫ್ ಟಾಕ್ ಮೂಲಕ ರೈತರಿಗೆ ತಿಳಿಸಿದರು.ಪ್ರಸಕ್ತ ಸಾಲಿನ ಕೃಷಿ ಯಾಂತ್ರೀಕರಣ ಯೋಜನೆಯಡಿ ಉಳುಮೆಯಿಂದ ಕೊಯ್ಲಿನವರೆಗೆ ಉಪಯುಕ್ತವಿರುವ ಮಿನಿ ಟ್ರ್ಯಾಕ್ಟರ್‌ಗಳು, ಪವರ್ ಟಿಲ್ಲರ್‌ಗಳು, ಭೂಮಿ ಸಿದ್ಧತೆ ಉಪಕರಣ, ನಾಟಿ ಮತ್ತು ಬಿತ್ತನೆ ಉಪಕರಣ, ಅಂತರ ಬೇಸಾಯ ಉಪಕರಣಗಳು, ಇಂಜಿನ್ ಚಾಲಿತ ಸಸ್ಯ ಸಂರಕ್ಷಣಾ ಉಪಕರಣ, ಬೆಳೆ, ಕಟಾವು, ಒಕ್ಕಣೆ ಯಂತ್ರಗಳನ್ನು ಸಹಾಯಧನ ದಲ್ಲಿ ನೀಡಲಾಗುತ್ತದೆ ಎಂದು ಹೇಳಿದರು.ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕಗಳನ್ನು ಶೇ. 90 ರ ರಿಯಾಯಿತಿ ದರದಲ್ಲಿ ವಿತರಿಸ ಲಾಗುವುದು ಮತ್ತು ರೈತರು ತಮ್ಮ ಹೋಬಳಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಕೃಷಿ ಅಧಿಕಾರಿ ಶರ್ಮ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಉತ್ತಮ ಭತ್ತ ಬೆಳೆದ ರೈತರಿಗೆ ಕೃಷಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಕುರಿತು ಅರ್ಜಿ ಆಹ್ವಾನಿಸಲಾಗುತ್ತದೆ. ಕೃಷಿ ಪ್ರಶಸ್ತಿಗೆ ಅರ್ಜಿಯನ್ನು ಆನ್‌ಲೈನ್ ಮೂಲಕ ಕರೆಯಲಾಗಿದ್ದು, ರೈತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಹೇಳಿದರು. ರೈತರು ತಮ್ಮ ಪಹಣಿ ಮತ್ತು ಆಧಾರ್ ಕಾರ್ಡ್‌ಗಳನ್ನು ರೈತ ಸಂಪರ್ಕ ಕೇಂದ್ರಕ್ಕೆ ತಂದು ತಂತ್ರಾಂಶದಲ್ಲಿ ನೋಂದಣಿ ಮಾಡಲಾಗುವುದು. ಕಳೆದ ವರ್ಷ ನೋಂದಾಣಿಗೆ ಶುಲ್ಕ ಪಾವತಿಸಬೇಕಿತ್ತು. ಆದರೆ ಈ ಬಾರೀ ನೋಂದಣಿಗೆ ಶುಲ್ಕ ನೀಡುವ ಅಗತ್ಯವಿಲ್ಲ. ಉಚಿತವಾಗಿ ನೋಂದಣಿ ಮಾಡಲಾಗುವುದು ಎಂದರು.ಪೋನೀ ಗ್ರೂಪ್ ಟಾಕ್‌ನಲ್ಲಿ ಉಪ ಕೃಷಿ ನಿರ್ದೇಶಕ ಮುನೇಗೌಡ, ತಾಂತ್ರಿಕ ಅಧಿಕಾರಿ ಶೈಲಾ, ಗೀತಾ ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 4 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಸುಜಾತ ಅವರು ರೈತರೊಂದಿಗೆ ಫೋನ್ ಇನ್ ಕಾರ್ಯಕ್ರಮ ನಡೆಸಿದರು. ಕೃಷಿ ಅಧಿಕಾರಿ ಶರ್ಮ, ಶೈಲಾ, ಗೀತಾ ಇದ್ದರು.