ಸಾರಾಂಶ
ಚಿಕ್ಕಮಗಳೂರು : ಜನತೆ ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಪಡಿತರದಾರರ ಖಾತೆಗೆ ಈವರೆಗೆ ಸುಮಾರು ₹126 ಕೋಟಿಯನ್ನು ಜಮಾ ಮಾಡಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.
ಜಿಲ್ಲಾ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2.59 ಲಕ್ಷ ಕಾರ್ಡ್‌ಗಳಿಗೆ ಮಾಹೆಯಾನ ₹13 ಕೋಟಿ ಅನ್ನಭಾಗ್ಯದ ಮೊತ್ತವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ ಎಂದರು.
ಕಳೆದ ಸಾಲಿನ ಜುಲೈ ತಿಂಗಳಿನಿಂದ ಆರಂಭಗೊಂಡ ಅನ್ನಭಾಗ್ಯ ಯೋಜನೆ ಜಿಲ್ಲೆಯ ಲಕ್ಷಾಂತರ ಮಂದಿಗೆ ₹126 ಕೋಟಿ ಯನ್ನು ಬಡಕುಟುಂಬಗಳಿಗೆ ಆಹಾರ ಖರೀದಿಸಲು ಹಣ ಸಂದಾಯಗೊಳಿಸಿದೆ. ಇಂತಹ ಮಹಾತ್ವಕಾಂಕ್ಷೆ ಯೋಜನೆಯನ್ನು ಜನತೆ ಸದುಪ ಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಪ್ರಸ್ತುತ ಅನ್ನಭಾಗ್ಯ ಯೋಜನೆ ಸೌಲಭ್ಯಗಳು ಯಾವ ಕುಟುಂಬಕ್ಕೆ ತಲುಪಿಲ್ಲ, ಅಂತಹ ಕುಟುಂಬಗಳು ಅರ್ಹತೆ ಹೊಂದಿದ್ದಲ್ಲಿ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು. ಮುಂಬರುವ ದಿನಗಳಲ್ಲಿ ಸೌಲಭ್ಯದಿಂದ ವಂಚಿತವಾಗದೆ ಸಮರ್ಪಕವಾಗಿ ರಾಜ್ಯ ಸರ್ಕಾರದ ಐದು ಯೋಜನೆಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಆಹಾರ ಪಡಿತರ ವಿತರಣೆ ವೇಳೆಯಲ್ಲಿ ಅರ್ಜಿ ಸಲ್ಲಿಸುವುದು ಆನ್‌ಲೈನ್ ಮೂಲಕವೇ ಇರುವುದರಿಂದ ಗ್ರಾಮ- 1 ವ್ಯವಸ್ಥೆ ತಾಂತ್ರಿಕ ಕಾರಣದಿಂದ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಿಲ್ಲ. ಹಾಗಾಗಿ ಜಿಲ್ಲೆಯ ಸುಮಾರು 4 ಸಾವಿರ ಮಂದಿ ಈ ಯೋಜನೆಯಿಂದ ವಂಚಿತರಾಗಿದ್ದು ಮುಂದೆ ಅವರಿಗೆ ಯೋಜನೆ ಸವಲತ್ತು ಒದಗಿಸ ಲಾಗುವುದು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಹಸಿವು ಮುಕ್ತ ರಾಜ್ಯ ವನ್ನಾಗಿಸುವ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ. ಪ್ರತಿ ಬಡವರ ಮನೆಗಳಿಗೆ ಪ್ರತಿದಿನವೂ ಹಸಿವು ನೀಗಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಸುಬ್ರಹ್ಮಣ್ಯ, ಜಿಲ್ಲಾ ಪ್ರಾಧಿಕಾರ ಉಪಾಧ್ಯಕ್ಷೆ ಹೇಮಾವತಿ, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಮಲ್ಲೇಶಸ್ವಾಮಿ, ಎನ್.ಆರ್.ಪುರ ಅಧ್ಯಕ್ಷೆ ಚಂದ್ರಮ್ಮ, ಶೃಂಗೇರಿ, ಅಧ್ಯಕ್ಷೆ ರಾಜು, ಸದಸ್ಯರಾದ ಜೇಮ್ಸ್ ಡಿಸೋ ಜಾ, ಬಸವರಾಜ್, ಶಫಿವುಲ್ಲಾ ಹಾಗೂ ಆಹಾರ ನಿರೀಕ್ಷಕ ಎಸ್.ಪ್ರಕಾಶ್ ಇದ್ದರು.
4 ಕೆಸಿಕೆಎಂ2ಜಿಲ್ಲಾ ಆಹಾರ, ನಾಗರೀಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಮಲ್ಲೇಶ್‌ಸ್ವಾಮಿ, ಜೇಮ್ಸ್, ಸುಬ್ರಹ್ಮಣ್ಯ ಇದ್ದರು.