ಸಾರಾಂಶ
"ದಕ್ಷಿಣ ಕಾಶಿ " ಎಂದೇ ಪ್ರಖ್ಯಾತಿ ಹೊಂದಿರುವ ರಾಮನಾಥಪುರ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವ ಜನವರಿ 5ರಂದು ಭಾನುವಾರ ನಡೆಯುವ ಹಿನ್ನೆಲೆಯಲ್ಲಿ ರಜಾ ದಿನವಾದ ಭಾನುವಾರ ರಾಮನಾಥಪುರದಲ್ಲಿ ಎಲ್ಲೆಂದರಲ್ಲಿ ಜನಸಂದಣಿಯಿದ್ದು ಜಾತ್ರೆಮೈದಾನ, ದೇವಾಲಯಗಳು ಮತ್ತು ಸ್ನಾನಘಟ್ಟ ಭಕ್ತರಿಂದ ತುಂಬಿ ತುಳುಕಿತು. ಈ ಹಿಂದೆ ಡಿ. 7ರಂದು ಜರುಗಿದ ಪ್ರಸನ್ನ, ಶ್ರೀ ಸುಬ್ರಮಣ್ಯಸ್ವಾಮಿ ರಥೋತ್ಸವದಿಂದ ಆರಂಭವಾಗಿರುವ. ಈ ಜಾತ್ರೆಯು ತುಳು ಷಷ್ಠಿಯ ಜನವರಿ 5 ರ ವರೆಗೂ ಜರುಗಲಿದ್ದು, ಒಂದು ತಿಂಗಳಕಾಲ ಪ್ರತಿನಿತ್ಯವೂ ಸಹ ಭಕ್ತರು ಭೇಟಿ ನೀಡುತ್ತಾರೆ.
ಕನ್ನಡಪ್ರಭ ವಾರ್ತೆ ರಾಮನಾಥಪುರ
ಇಲ್ಲಿಯ ಕಾವೇರಿ ನದಿ ದಂಡೆಯು ಪ್ರಸನ್ನ ಶ್ರೀ ಸುಬ್ರಮಣ್ಯಸ್ವಾಮಿ ಜಾತ್ರೆಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ ಭಕ್ತರ ದಂಡಿನಿಂದ ತುಂಬಿತ್ತು."ದಕ್ಷಿಣ ಕಾಶಿ " ಎಂದೇ ಪ್ರಖ್ಯಾತಿ ಹೊಂದಿರುವ ರಾಮನಾಥಪುರ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವ ಜನವರಿ 5ರಂದು ಭಾನುವಾರ ನಡೆಯುವ ಹಿನ್ನೆಲೆಯಲ್ಲಿ ರಜಾ ದಿನವಾದ ಭಾನುವಾರ ರಾಮನಾಥಪುರದಲ್ಲಿ ಎಲ್ಲೆಂದರಲ್ಲಿ ಜನಸಂದಣಿಯಿದ್ದು ಜಾತ್ರೆಮೈದಾನ, ದೇವಾಲಯಗಳು ಮತ್ತು ಸ್ನಾನಘಟ್ಟ ಭಕ್ತರಿಂದ ತುಂಬಿ ತುಳುಕಿತು. ಈ ಹಿಂದೆ ಡಿ. 7ರಂದು ಜರುಗಿದ ಪ್ರಸನ್ನ, ಶ್ರೀ ಸುಬ್ರಮಣ್ಯಸ್ವಾಮಿ ರಥೋತ್ಸವದಿಂದ ಆರಂಭವಾಗಿರುವ. ಈ ಜಾತ್ರೆಯು ತುಳು ಷಷ್ಠಿಯ ಜನವರಿ 5 ರ ವರೆಗೂ ಜರುಗಲಿದ್ದು, ಒಂದು ತಿಂಗಳಕಾಲ ಪ್ರತಿನಿತ್ಯವೂ ಸಹ ಭಕ್ತರು ಭೇಟಿ ನೀಡುತ್ತಾರೆ. ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ವಿವಿಧೆಡೆಗಳಿಂದ ರಾಮನಾಥಪುರಕ್ಕೆ ಆಗಮಿಸಿದ ಸಾವಿರಾರು ಭಕ್ತರ ಸಂಖ್ಯೆಯು ಹೆಚ್ಚಿದ್ದರಿಂದ ಎಲ್ಲೆಂದರಲ್ಲಿ ಜನಜಂಗುಳಿಯಿತ್ತು.
ಭಕ್ತರು ಸುಬ್ರಮಣ್ಯಸ್ವಾಮಿ ದೇವಾಲಯಲ್ಲಿ ಹರಕೆ ತೀರಿಸಿ, ವಾಸಾಂಜನೇಯ, ಅಗಸ್ತೇಶ್ವರ, ಪಟ್ಟಾಭಿರಾಮ, ರಾಘವೇಂದ್ರಮಠ, ವರದಾನ ಬಸವೇಶ್ವರ, ಚತುರ್ಯುಗಮೂರ್ತಿ ರಾಮೇಶ್ವರ ಸೇರಿದಂತೆ ವಿವಿಧ ದೇವಾಲಯಗಳಿಗೆ ಸಾವಿರಾರು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.