ಕ್ರೂಸರ್‌, ಕೆಎಸ್‌ಆರ್‌ಟಿಸಿ ಬಸ್ಸ್ ಡಿಕ್ಕಿ : ಒರ್ವ ಸಾವು

| Published : Mar 24 2024, 01:30 AM IST

ಸಾರಾಂಶ

ಕಡೂರು-ಬೀರೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬ್ರೈಟ್ ಪ್ಯೂಚರ್ ಶಾಲೆಯ ಬಳಿ ಕ್ರೂಸರ್‌ (ಅಶೋಕ ಲೈಲ್ಯಾಂಡ್ ) ಮತ್ತು ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ಸ್ ನಡುವೆ ಮುಖಾಮುಖಿ ಡಿಕ್ಕಿಯಿಂದ ಚಾಲಕ ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ, ಬೀರೂರು ಕಡೂರು-ಬೀರೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬ್ರೈಟ್ ಪ್ಯೂಚರ್ ಶಾಲೆಯ ಬಳಿ ಕ್ರೂಸರ್‌ (ಅಶೋಕ ಲೈಲ್ಯಾಂಡ್ ) ಮತ್ತು ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ಸ್ ನಡುವೆ ಮುಖಾಮುಖಿ ಡಿಕ್ಕಿಯಿಂದ ಚಾಲಕ ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಕೋಡಿರಂಗವನಹಳ್ಳಿ ವಡ್ಡರಹಟ್ಟಿ ಗ್ರಾಮದ ಕ್ರೂಸರ್‌ ಚಾಲಕ ಚಂದ್ರಪ್ಪ(೩೧) ಮೃತ ದುರ್ದೈವಿ. ಕಳೆದ ೬ ತಿಂಗಳ ಹಿಂದೆ ಧರ್ಮಸ್ಥಳ ಬಳಿಯ ನಿಂತಿಕಲ್ ಗ್ರಾಮದ ಬಳಿ ಅಡಕೆ ತೋಟದ ಕೆಲಸಕ್ಕೆಂದು ತೆರಳಿದ್ದ ವಡ್ಡರಹಟ್ಟಿ ಗ್ರಾಮದ ಅಕ್ಕಪಕ್ಕದ ಗ್ರಾಮಗಳ ಊರಿನ ಸುಮಾರು ೧೦ಕ್ಕೂ ಹೆಚ್ಚು ಗ್ರಾಮಸ್ಥರು ಕಡೂರು ಮಾರ್ಗ ದಿಂದ ಊರಿಗೆ ತೆರಳುವಾಗ ಎದುರುಗಡೆಯಿಂದ ಕಾರನ್ನು ಓವರ್‌ಟೆಕ್ ಮಾಡಿಕೊಂಡು ಬಂದ ಕೆಎಸ್‌ಆರ್‌ಟಿಸಿ ಬಸ್ ಕ್ರೂಸರ್‌ ಗಾಡಿಗೆ ಡಿಕ್ಕಿಹೊಡೆದಿದೆ.

ಕ್ರೂಸರ್‌ ಗಾಡಿಯಲ್ಲಿದ್ದ ೧೧ ಜನ ಗಾಯಗೊಂಡು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೆಲವರು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಈ ಕುರಿತು ಸಾರಿಗೆ ಬಸ್ ಚಾಲಕನ ವಿರುದ್ದ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.