ಸಾರಾಂಶ
ಭಾರತದ ಜನರು ಜಗಳಗಂಟರು, ಅಪ್ರಾಮಾಣಿಕರು, ಅವಿದ್ಯಾವಂತರು, ಬುದ್ಧಿಹೀನರು ಎಂದು ವಿದೇಶದಲ್ಲಿ ಪ್ರಚಾರ ಮಾಡಲು ಕೇಂದ್ರ ವಿಪಕ್ಷ ನಾಯಕ ರಾಹುಲ್‌ಗಾಂಧಿ ಹೊರಟಿದ್ದಾರೆ. ದೇಶದ ಪ್ರಗತಿ ದ್ವೇಷಿಸುವವರು ಮಾತ್ರ ಇಂತಹ ಹೇಳಿಕೆ ನೀಡಲು ಸಾಧ್ಯ.
ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತದ ಜನರು ಜಗಳಗಂಟರು, ಅಪ್ರಾಮಾಣಿಕರು, ಅವಿದ್ಯಾವಂತರು, ಬುದ್ಧಿಹೀನರು ಎಂದು ವಿದೇಶದಲ್ಲಿ ಪ್ರಚಾರ ಮಾಡಲು ಕೇಂದ್ರ ವಿಪಕ್ಷ ನಾಯಕ ರಾಹುಲ್‌ಗಾಂಧಿ ಹೊರಟಿದ್ದಾರೆ. ದೇಶದ ಪ್ರಗತಿ ದ್ವೇಷಿಸುವವರು ಮಾತ್ರ ಇಂತಹ ಹೇಳಿಕೆ ನೀಡಲು ಸಾಧ್ಯ ಎಂದು ಬಿಜಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ತಿರುಗೇಟು ನೀಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಅಮೆರಿಕಾ ಮತ್ತು ಯೂರೋಪ್ ರಾಷ್ಟ್ರಗಳು ಸಹಾಯಕ್ಕೆ ಬರಬೇಕೆಂದು ಕರೆ ನೀಡಿದ್ದಾರೆ. 1975ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿ ದೇಶ ಭಕ್ತರನ್ನು ಜೈಲಿಗೆ ಕಳುಹಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅವಮಾನ ಎಸಗಿದ್ದ ಅಜ್ಜಿಯ ಹಾದಿಯಲ್ಲಿ ರಾಹುಲ್‌ಗಾಂಧಿ ಸಾಗುತ್ತಿದ್ದು, ಇದು ವಿಪಕ್ಷ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಭಾರತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಕೆಲವರು ಪ್ರಧಾನ ಮಂತ್ರಿಯೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎಂದು ರಾಹುಲ್ ಗಾಂಧಿ, ಕೊಲಂಬಿಯಾದ ನೆಲದಲ್ಲಿ ನಿಂತು ಆರೋಪಿಸಿದ್ದಾರೆ. ವಿದೇಶಕ್ಕೆ ಹೋಗಿ ಸ್ವದೇಶವನ್ನು ದೂಷಿಸುವುದು ರಾಹುಲ್ ಗಾಂಧಿಯವರ ಕಾಯಕವಾಗಿದೆ ಎಂದು ಟೀಕಿಸಿದ್ದಾರೆ.ಬಸವಣ್ಣನವರ ಪ್ರಜಾಪ್ರಭುತ್ವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಲ್ಲಿ ಮಾತಾಡಿ ದೇಶದ ಗೌರವ ಹೆಚ್ಚಿಸುತ್ತಾರೆ. ಆದರೆ, ರಾಹುಲ್ ಗಾಂಧಿ ಅದೇ ಲಂಡನ್‌ಗೆ ಹೋಗಿ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿ ಟೀಕಿಸಿದ್ದಾರೆ. ರಾಹುಲ್ ಗಾಂಧಿ ನಿಜವಾದ ಭಾರತೀಯರೇ ಆಗಿದ್ದರೆ ಈ ಮಾತುಗಳನ್ನು ಹೇಳುತ್ತಿರಲಿಲ್ಲ ಎಂದು ದೂರಿದ್ದಾರೆ.
ರಾಹುಲ್ ಗಾಂಧಿ ಅವರು ಯಾವುದೇ ದಾಖಲೆಗಳು ಇಲ್ಲದೇ ಈ ರೀತಿಯ ಹೇಳಿಕೆಯನ್ನು ವಿದೇಶಿ ನೆಲದಲ್ಲಿ ನಿಂತು ಹೇಳುವುದು ಎಷ್ಟು ಸರಿಯಲ್ಲ. ದೇಶದ ಆಂತರಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಈ ದೇಶದ ಸಂವಿಧಾನ ಅವರಿಗೆ ಹಕ್ಕನ್ನು ನೀಡಿದೆ. ವಿಪಕ್ಷ ಸ್ಥಾನವನ್ನು ನೀಡಿದೆ. ಅವರ ಆರೋಪಕ್ಕೆ ಪೂರವೇ ಇದ್ದರೆ ಸಂಸತ್ತಿನಲ್ಲಿ ಚರ್ಚಿಸುವ ಧೈರ್ಯ ತೋರಬೇಕು ಎಂದು ಆಗ್ರಹಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))