ಸಚಿವ ತಂಗಡಗಿ ತಾಯಿಗೆ ಅವಮಾನಿಸಿದ ಸಿ.ಟಿ.ರವಿ ಕ್ಷಮೆ ಕೋರಲೇಬೇಕು

| Published : Mar 29 2024, 12:50 AM IST

ಸಚಿವ ತಂಗಡಗಿ ತಾಯಿಗೆ ಅವಮಾನಿಸಿದ ಸಿ.ಟಿ.ರವಿ ಕ್ಷಮೆ ಕೋರಲೇಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಅವರ ತಾಯಿ ಬಗ್ಗೆ ತುಚ್ಛವಾಗಿ ಮಾತನಾಡಿ, ಅವಮಾನಿಸಿರುವ ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ತಕ್ಷಣವೇ ಭಾರತಮಾತೆಗೆ, ಇಡೀ ಹೆಣ್ಣುಕುಲಕ್ಕೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಪ್ಪುಬಟ್ಟೆ ಪ್ರದರ್ಶಿಸಿ, ಘೇರಾವ್ ಮಾಡುವುದಾಗಿ ಭೋವಿ ಸಮಾಜ ಜಿಲ್ಲಾಧ್ಯಕ್ಷ ಎಚ್.ಜಯಣ್ಣ ದಾವಣಗೆರೆಯಲ್ಲಿ ಎಚ್ಚರಿಸಿದರು.

- ನಿರ್ಲಕ್ಷಿಸಿದರೆ ಕಪ್ಪುಬಟ್ಟೆ ಪ್ರದರ್ಶಿಸಿ, ಘೇರಾವ್‌: ಭೋವಿ ಸಮಾಜ ಎಚ್ಚರಿಕೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಅವರ ತಾಯಿ ಬಗ್ಗೆ ತುಚ್ಛವಾಗಿ ಮಾತನಾಡಿ, ಅವಮಾನಿಸಿರುವ ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ತಕ್ಷಣವೇ ಭಾರತಮಾತೆಗೆ, ಇಡೀ ಹೆಣ್ಣುಕುಲಕ್ಕೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಪ್ಪುಬಟ್ಟೆ ಪ್ರದರ್ಶಿಸಿ, ಘೇರಾವ್ ಮಾಡುವುದಾಗಿ ಭೋವಿ ಸಮಾಜ ಜಿಲ್ಲಾಧ್ಯಕ್ಷ ಎಚ್.ಜಯಣ್ಣ ಎಚ್ಚರಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಟೀಕೆ, ಪ್ರತಿ ಟೀಕೆಗಳು ಸಹಜ. ಸಂಸ್ಕೃತಿ, ಸಂಸ್ಕಾರವನ್ನೇ ಮರೆತಂತೆ ಬಿಜೆಪಿಯ ಸಿ.ಟಿ.ರವಿ ಅವರು ಶಿವರಾಜ ತಂಗಡಗಿ ತಾಯಿ ಬಗ್ಗೆ ಹೀನಾಯ ಪದ ಬಳಸಿ, ಹೀಯಾಳಿಸಿ ಅವಮಾನಿಸಿದ್ದಾರೆ. ಇದು ಭೋವಿ ಸಮಾಜ ಮಾತ್ರವಲ್ಲ, ಇಡೀ ನಾಗರಿಕ ಸಮಾಜ ತೀವ್ರ ಖಂಡಿಸುಂಥ ವಿಚಾರ ಎಂದರು.

ಬಿಜೆಪಿ ಮುಖಂಡ ಸಿ.ಟಿ.ರವಿ ದಾವಣಗೆರೆ ನಗರ, ಜಿಲ್ಲೆಗೆ ಬಂದರೆ ಕಪ್ಪುಬಾವುಟ ಪ್ರದರ್ಶಿಸಲಾಗುವುದು. ಘೇರಾವ್ ಮಾಡಲಾಗುವುದು. ರಾಜಕೀಯ ಟೀಕೆ ಮಧ್ಯೆ ಯಾರದೇ ಮುಖಂಡರ ತಾಯಿಯನ್ನು, ಕುಟುಂಬದ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡುವುದನ್ನು ಖಂಡಿಸುತ್ತೇವೆ. ಬಿಜೆಪಿ ಶಿಸ್ತಿನ ಪಕ್ಷ, ಸಂಸ್ಕಾರವಂತರ ಪಕ್ಷವೆಂದು ಹೇಳಿಕೊಳ್ಳುವ ಸಿ.ಟಿ. ರವಿಯವರ ಸಂಸ್ಕೃತಿ, ಸಂಸ್ಕಾರ ಇದೇನಾ? ರಾಷ್ಟ್ರೀಯ ಪಕ್ಷವೊಂದರ ಜವಾಬ್ದಾರಿಯುತ ಸ್ಥಾನದಲ್ಲಿರುವ, ರಾಜ್ಯದಲ್ಲೂ ಸಚಿವ ಸ್ಥಾನ ಅಲಂಕರಿಸಿದ್ದ ವ್ಯಕ್ತಿ ಸಿ.ಟಿ.ರವಿ. ಅವರ ಬಾಯಿಂದ ಹೆಣ್ಣುಮಕ್ಕಳಿಗೆ ಕೆಟ್ಟ ಮಾತುಗಳನ್ನು ಬಳಸಿದ್ದು, ರಾಜಕೀಯ ವ್ಯಕ್ತಿತ್ವಕ್ಕೂ ಶೋಭೆ ತಾರದು ಎಂದು ಕಿಡಿಕಾರಿದರು.

ಯಾರ ತಾಯಿಯನ್ನೇ ಅವಮಾನಿಸಿದರೂ ಅದು ಭಾರತಮಾತೆಯನ್ನು ಅವಮಾನಿಸಿದಂತೆ. ಭಾರತಾಂಬೆಯನ್ನೇ ಅವಮಾನಿಸಿರುವ ಹೀನ ಮನಸ್ಥಿತಿಯ, ವಿಕೃತ ಆಲೋಚನೆಯ ಸಿ.ಟಿ.ರವಿ ಅವರನ್ನು ರಾಜ್ಯದಿಂದಷ್ಟೇ ಅಲ್ಲ, ದೇಶದಿಂದಲೇ ಗಡಿಪಾರು ಮಾಡುವುದು ಉತ್ತಮ ಎಂದು ಎಚ್.ಜಯಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭೋವಿ ಸಮಾಜ ಮುಖಂಡರಾದ ಡಿ.ವಿ.ಮಲ್ಲಿಕಾರ್ಜುನ ಸ್ವಾಮಿ, ಮಹಿಳಾ ಘಟಕದ ಉಮಾ ಕುಮಾರ, ಜಿ.ಸಿ.ಮಂಜಪ್ಪ, ಎ.ಬಿ.ನಾಗರಾಜ, ಜಗಳೂರು ಅರ್ಜುನ, ರಾಮಾಂಜನೇಯ ಇತರರು ಇದ್ದರು.

- - -

-28ಕೆಡಿವಿಜಿ63:

ದಾವಣಗೆರೆಯಲ್ಲಿ ಗುರುವಾರ ಭೋವಿ ಸಮಾಜ ಜಿಲ್ಲಾಧ್ಯಕ್ಷ ಎಚ್.ಜಯಣ್ಣ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.