ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ: ಡಾ.ಕೆ.ಜಿ.ಚವ್ಹಾಣ

| Published : Aug 27 2025, 01:00 AM IST

ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ: ಡಾ.ಕೆ.ಜಿ.ಚವ್ಹಾಣ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ, ಮೊಬೈಲನ್ನು ಹಿತಮಿತವಾಗಿ ಬಳಸಿ ನಿರಂತರವಾಗಿ ವ್ಯಾಸಂಗ ಮಾಡುವ ಜೊತೆಗೆ ಸಾಮಾನ್ಯ ಜ್ಞಾನ ಬೆಳಸಿಕೊಳ್ಳಿ ಎಂದು ಪಟ್ಟಣದ ಎಸ್.ಜೆಎಂ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯರು ಡಾ.ಕೆ.ಜಿ.ಚವ್ಹಾಣ ಹೇಳಿದ್ದಾರೆ.

ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ಕನ್ನಡಪ್ರಭವಾರ್ತೆ, ತರೀಕೆರೆ

ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ, ಮೊಬೈಲನ್ನು ಹಿತಮಿತವಾಗಿ ಬಳಸಿ ನಿರಂತರವಾಗಿ ವ್ಯಾಸಂಗ ಮಾಡುವ ಜೊತೆಗೆ ಸಾಮಾನ್ಯ ಜ್ಞಾನ ಬೆಳಸಿಕೊಳ್ಳಿ ಎಂದು ಪಟ್ಟಣದ ಎಸ್.ಜೆಎಂ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯರು ಡಾ.ಕೆ.ಜಿ.ಚವ್ಹಾಣ ಹೇಳಿದ್ದಾರೆ.ಎಸ್.ಜೆಎಂ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ದಿಂದ ಕಾಲೇಜು ಸಭಾಂಗಣದಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಡೆದ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಾಳೆಗಿಡಕ್ಕೊಂದು ಗೊನೆ ಇರುವಂತೆ ಬಾಳಿಗೊಂದು ಗುರಿಇರಲಿ. ವ್ಯಕ್ತಿತ್ವ ವಿಕಸನಕ್ಕಾಗಿ ಮಹಾವಿದ್ಯಾಲಯದಲ್ಲಿ ನಡೆಯುವ ಎಲ್ಲಾಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ. ತಮಗೆ ಆಸಕ್ತಿಇರುವ ಕ್ಷೇತ್ರ ಗುರುತಿಸಿ ಆ ಕ್ಷೇತ್ರದಲ್ಲಿ ಈಗಿನಿಂದಲೇ ನಿರಂತರ ಪರಿಶ್ರಮಪಟ್ಟರೆ ನಿರ್ಧಿಷ್ಟ ಗುರಿ ತಲುಪಲು ಸಾಧ್ಯ. ಪರಿಸರದ ಕಾಳಜಿ, ಸಾಮಾಜಿಕ ಕಳಕಳಿ, ನಿರಂತರವಾಗಿ ವ್ಯಾಸಂಗ ಮಾಡುವ ಜೊತೆಗೆ ಸಾಮಾನ್ಯಜ್ಞಾನ ಬೆಳಸಿಕೊಳ್ಳಬೇಕು ಎಂದು ಹೇಳಿದರು.ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ, ಇದೇ ಅಂತರಂಗಶುದ್ಧಿ, ಇದೇ ಬಹಿರಂಗ ಶುದ್ಧಿ ಎಂಬ ಬಸವಣ್ಣನವರ ಸಪ್ತಶೀಲಗಳನ್ನು ತಮ್ಮ ಜೀವನದಲ್ಲಿ ಬೆಳೆಸಿ ಕೊಳ್ಳಿರಿ ಮತ್ತು ಶಿಸ್ತು, ಸಮಯ ಪ್ರಜ್ಞೆ ರೂಢಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ, ನಾಡಿಗೆ ಕೀರ್ತಿತರುವಂತಾಗಿ ಎಂದು ತಿಳಿಸಿದರು.ತರೀಕೆರೆ ಸಾರ್ವಜನಿಕ ಆಸ್ಪತ್ರೆ ಮುಖ್ಯಆಡಳಿತ ವೈದ್ಯಾಧಿಕಾರಿ ಎಂ.ಜೆ.ಚನ್ನಬಸಪ್ಪ ಮಾತನಾಡಿ, ಕ್ರೀಡೆ, ಸಾಂಸ್ಕೃತಿಕ, ರೆಡ್‌ ಕ್ರಾಸ್‌ ಮತ್ತು ಎನ್.ಎಸ್‌.ಎಸ್. ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು, ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಆದ್ದರಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಯಾಶೀಲರಾಗಿರಿ ಸದಾ ಚಟುವಟಿಕೆಯಿಂದ ಇದ್ದು ಉತ್ತಮ ಆರೋಗ್ಯ ವನ್ನು ಹೊಂದಲು ತಿಳಿಸಿದರು. ಮಹಾವಿದ್ಯಾಲಯದಲ್ಲಿ ಉತ್ತಮ ಗ್ರಂಥಾಲಯವಿದ್ದು ಅದರ ಸದುಪಯೋಗ ಪಡೆದುಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ತಯಾರಿ ನಡೆಸಿ ತಮ್ಮ ಜೀವನದ ಗುರಿ ಸಾಧಿಸಲು ಮಹಾವಿದ್ಯಾಲಯದ ಅನುಭವಿ ಪ್ರಾಧ್ಯಾಪಕ ವರ್ಗದ ಮಾರ್ಗದರ್ಶನಪಡೆಯಲು ಸಲಹೆನೀಡಿದರು.ವಿದ್ಯಾರ್ಥಿ ಒಕ್ಕೂಟದ ಚೇರಮನ್‌ ಶಿವರಾಜಕುಮಾರ.ಕೆ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿ ಕಳೆದ 46 ವರ್ಷಗಳಿಂದ ಈ ಕಾಲೇಜು ತರೀಕೆರೆ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಆಕಾಂಕ್ಷೆಗೆ ಒತ್ತಾಸೆಯಾಗಿ ನಿಂತಿದೆ. ಈ ಮಹಾವಿದ್ಯಾಲಯದಲ್ಲಿ ವರ್ಷದುದ್ದಕ್ಕೂ ವಿದ್ಯಾರ್ಥಿಒಕ್ಕೂಟದಡಿ ಅನೇಕ ಕಾರ್ಯಕ್ರಮ ನಡೆಯುತ್ತವೆ. ಕ್ರೀಡೆ, ಎನ್.ಎಸ್.ಎಸ್.‌ ಯುವ ರೆಡ್‌ಕ್ರಾಸ್‌ ಹಾಗೂ ಸಾಂಸ್ಕೃತಿ ಕಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆ ಮತ್ತು ನಾಯಕತ್ವದ ಗುಣ ಬೆಳಸಿಕೊಳ್ಳಲು ಸಲಹೆ ನೀಡಿದರು.ಪತ್ರಕರ್ತ ಅನಂತ ನಾಡಿಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ .ಜೆ.ರಘು (ಎನ್.ಎಸ್.ಎಸ್.‌)ಪ್ರತಿಜ್ಞಾವಿಧಿ ಬೋಧಿಸಿದರು. .ಪ್ರಥಮ ವರ್ಷದ ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ಸ್ವಾಗತಿಸಲಾಯಿತು.ಮಹಾ ವಿದ್ಯಾಲಯದ ಐಕ್ಯೂಎಸಿ ಕೋಆರ್ಡಿನೇಟರ್ ಡಾ.ಸದಾಶಿವನಾಯ್ಕ, ಎ. ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಸ್ವಾಮಿಜಿ. ಬಿಎ 5ನೇ. ಸೆಮ್ ಸಹಕಾರ್ಯದರ್ಶಿ ಶಶಿಕಲಾ ಟಿ.ಎಸೇಸ ರೂಪಕೆ. ವಾಣಿಶ್ರೀ ಅರುಣಪಿ. .ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.--25ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಜೆ.ಎಂ.ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯರು ಡಾ.ಕೆ.ಜಿ.ಚವ್ಹಾಣ ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಚೆನ್ನಬಸಪ್ಪ, ವಿದ್ಯಾರ್ಥಿ ಒಕ್ಕೂಟದ ಚೇರಮನ್‌ ಶಿವರಾಜಕುಮಾರ.ಕೆ ದೈಹಿಕ ಶಿಕ್ಷಣ ನಿರ್ದೇಶಕ ಜೆ.ರಘು, ಮಹಾ ವಿದ್ಯಾಲಯದ ಡಾ.ಸದಾಶಿವನಾಯ್ಕ, ಎ. ಮತ್ತಿತರರು ಭಾಗವಹಿಸಿದ್ದರು.