ನಿಸ್ವಾರ್ಥ ಸೇವೆ ಮನೋಭಾವನೆ ಬೆಳೆಸಿಕೊಳ್ಳಿ

| Published : Oct 07 2024, 01:32 AM IST

ಸಾರಾಂಶ

ಸಮಾಜದಲ್ಲಿ ಸೌಹಾರ್ದ ಮನೋಭಾವದಿಂದ ಬಾಳುವಂತೆ ಮಾಡಿದಾಗ ಬಲಿಷ್ಠ ದೇಶ ಕಟ್ಟಲು ಸಾಧ್ಯ

ಮುಳಗುಂದ: ಸಂಘ, ಸಂಘಟನೆಗಳು ಜಾತಿ, ಧರ್ಮ ಬೇಧ-ಭಾವ ಮಾಡದೇ ಎಲ್ಲ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಂತಹ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅಂತಹ ಒಂದು ಸಂಘ ವಿಎಸ್ಎಸ್ ಆಗಬೇಕು‌. ಸಂಘದ ಪದಾಧಿಕಾರಿಗಳು ನಿಸ್ವಾರ್ಥ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ ಹೇಳಿದರು.

ಪಟ್ಟಣದ ಅಂಜುಮನ್ ಶಾದಿ ಮಹಲ್‌ನಲ್ಲಿ ಭಾನುವಾರ ನಡೆದ ವಿಕಾಸ ಸಾಮಾಜಿಕ ಸಂಘದ ಉದ್ಘಾಟನಾ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಜಾತಿ ಬೇಧ ಮಾಡದೆ ಸಂಘದಿಂದ ಸಾಮಾಜಿಕ ಕೆಲಸ ಮಾಡಿಕೊಂಡು ಸಂಘವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡು ಹೋಗಬೇಕು ಎಂದರು.

ಭೂ ದಾನಿ, ಪಪಂ ಸದಸ್ಯ ಎನ್.ಆರ್. ದೇಶಪಾಂಡೆ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕಾರ, ಧರ್ಮ ಬೋಧನೆ ಕೊಡಿಸಿ, ಸಮಾಜದಲ್ಲಿ ಸೌಹಾರ್ದ ಮನೋಭಾವದಿಂದ ಬಾಳುವಂತೆ ಮಾಡಿದಾಗ ಬಲಿಷ್ಠ ದೇಶ ಕಟ್ಟಲು ಸಾಧ್ಯ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕಗಳಲ್ಲೂ ಮಕ್ಕಳು ಭಾಗವಹಿಸಲು ಉತ್ತೇಜಿಸಿದಾಗ ಸದೃಢ ಮನಸ್ಸಿನೊಂದಿಗೆ ಸದೃಢ ದೇಹ ಹೊಂದಲು ಸಾಧ್ಯ. ಇದರಿಂದ ದೇಶವು ಬದಲಾವಣೆ ಮಾರ್ಗದಲ್ಲಿ ನಡೆಯುತ್ತದೆ. ಈ ಒಂದು ಉದ್ದೇಶ ಇಟ್ಟುಕೊಂಡು ನಡೆಯುವ ವಿಎಸ್ಎಸ್ ಸಂಘ ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸಿದರು.

ಈ ವೇಳೆ ವಿಎಸ್‌ಎಸ್‌ ಸಂಘದ ಕಾರ್ಯದರ್ಶಿ ಕಾಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದಲ್ಲಿ ಪಿಎಚ್‌ಡಿ ಪದವಿ ಪಡೆದ ಡಾ.ದಾವಲಸಾಬ್‌ ನರಗುಂದ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಖುರಾನ ಪಠಣ(ಹದಿಯಾ)ಕಾರ್ಯಕ್ರಮ ಜರುಗಿತು.

ಸಾನ್ನಿಧ್ಯವನ್ನು ಮಹ್ಮದಇಸ್ಮಾಯಿಲ್‌ ಖಾಜಿ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಹುಸೇನಸಾಬ್‌ ಕಲೇಗಾರ, ಅಧ್ಯಕ್ಷ ಮುಸ್ತಾಕಅಹ್ಮದ ಅಕ್ಕಿ, ಪಪಂ ಅಧ್ಯಕ್ಷೆ ಯಲ್ಲವ್ವ ಕವಲೂರ, ಉಪಾಧ್ಯಕ್ಷೆ ಅನುಸೂಯಾ ಸೋಮಗಿರಿ, ಪಪಂ ಆಶ್ರಯ ಸಮಿತಿ ಸದಸ್ಯರಾದ ಬಸವರಾಜ ಸುಂಕಾಪುರ, ಮಮತಾಜ ಶೇಖ, ಮಾಬಣ್ಣ ಯರೇವಟ್ಟರ, ಸ್ಥಾಯಿ ಸಮಿತಿ ಅಧ್ಯಕ್ಷ ಇಮಾಮಸಾಬ ಶೇಖ, ಧ್ಯಾಮಣ್ಣ ನೀಲಗುಂದ, ಮಹಾಂತೇಶ ಕಣವಿ, ಪೀರಸಾಬ ಶೇಖ, ಡಾ. ಪ್ರವೀಣ ತುಪ್ಪದ, ಕಾಶಿಮ ಜಮಾಲಸಾಬನವರ, ಸಂಘದ ಉಪಾಧ್ಯಕ್ಷ ಇಸ್ಮಾಯಿಲ್‌ ಸುಂಕದ, ನೂರಅಹ್ಮದ ಸಿಕ್ಕಲದಾರ, ದಾದಾಖಲಂದರ ಮುಜಾವರ, ಅಬ್ದುಲ್‌ಖಾದರ ಶೇಖ್‌, ಮಹ್ಮದಜಾಫರ ಭದ್ರಾಪೂರ, ಇಮ್ರಾನ ಸುಂಕದ, ಇಸ್ಮಾಯಿಲ್‌ ಮುಜಾವರ, ದಾವಲಸಾಬ ರಾಮಗೇರಿ, ಫಾರೂಖ ಢಾಲಾಯತ, ಮಹ್ಮದಗೌಸ ದೊಡ್ಡಮನಿ, ಗೌಸ ಖಲಿಫನವರ, ಜಮಾಲಸಾಬ ದುರ್ಗಿಗುಡಿ, ಅಸ್ಪಾಕ ಲಾಡಸಾಬನವರ, ಮಹ್ಮದಖಯೂಮ್‌ ಹುಯಿಲಗೋಳ ಇದ್ದರು.