ಮಕ್ಕಳಲ್ಲಿ ಸಾಂಸ್ಕೃತಿಕ ಮೌಲ್ಯ ಬೆಳೆಸಿ: ಡಾ. ಆನಂದ ಪಾಟೀಲ

| Published : Dec 03 2024, 12:31 AM IST

ಮಕ್ಕಳಲ್ಲಿ ಸಾಂಸ್ಕೃತಿಕ ಮೌಲ್ಯ ಬೆಳೆಸಿ: ಡಾ. ಆನಂದ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಲ್ಲಿ ಸೃಜನಶೀಲತೆ ಮತ್ತು ಹೊಸ ವಿಚಾರ ಅಳವಡಿಸಿ ಪ್ರೋತ್ಸಾಹಿಸಿದರೆ ಅವರು ಅದಕ್ಕೆ ತಕ್ಕಂತೆ ಸ್ಪಂದಿಸುತ್ತಾರೆ. ಭವಿಷ್ಯದಲ್ಲಿ ಉತ್ತಮ ಕಲಾಕಾರರಾಗಿ ಬೆಳೆಯುತ್ತಾರೆ.

ಧಾರವಾಡ:

ಇಂದಿನ ಎಲ್ಲ ಮಕ್ಕಳು ಪ್ರತಿಭಾವಂತರು. ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ತರಬೇತಿ ನೀಡಿದರೆ ಒಳ್ಳೆಯ ಮಕ್ಕಳಾಗಿ ಬೆಳೆಯುತ್ತಾರೆ. ಅದರೊಂದಿಗೆ ಮಕ್ಕಳಲ್ಲಿ ಪಾಲಕರು ಸಾಂಸ್ಕೃತಿಕ ಮೌಲ್ಯ ತುಂಬಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಆನಂದ ಪಾಟೀಲ್ ಹೇಳಿದರು.

ಮಕ್ಕಳ ಅಕಾಡೆಮಿ ಆರ್.ಕೆ. ಫೌಂಡೇಶನ್, ರೋಟರಿ ಕ್ಲಬ್ ಸೆಂಟ್ರಲ್ ಮತ್ತು ಐಎಎಂಎ ಮಹಿಳಾ ವೈದ್ಯ ವಿಭಾಗದ ಪರವಾಗಿ ಆಲೂರು ವೆಂಕಟರಾವ್ ಭವನದಲ್ಲಿ ಸೋಮವಾರ ಏರ್ಪಡಿಸಿದ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಮಕ್ಕಳೋತ್ಸವದಲ್ಲಿ ಅವರು, ಗ್ರಾಮೀಣ ಮಕ್ಕಳ ಸಲುವಾಗಿ ಇಂತಹ ಮಕ್ಕಳೋತ್ಸವ ಸಂಘಟಿಸಿ ಪ್ರೋತ್ಸಾಹಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ ಮಕ್ಕಳ ವೈದ್ಯ ಡಾ. ರಾಜನ್ ದೇಶಪಾಂಡೆ, ಮಕ್ಕಳಲ್ಲಿ ಸೃಜನಶೀಲತೆ ಮತ್ತು ಹೊಸ ವಿಚಾರ ಅಳವಡಿಸಿ ಪ್ರೋತ್ಸಾಹಿಸಿದರೆ ಅವರು ಅದಕ್ಕೆ ತಕ್ಕಂತೆ ಸ್ಪಂದಿಸುತ್ತಾರೆ. ಭವಿಷ್ಯದಲ್ಲಿ ಉತ್ತಮ ಕಲಾಕಾರರಾಗಿ ಬೆಳೆಯುತ್ತಾರೆ. ಎಂದರು.

ಡಾ. ಎಂ.ವೈ. ಸಾವಂತ್ ಸ್ವಾಗತಿಸಿದರು. ಸಿ.ಯು. ಬೆಳಕ್ಕಿ ಪರಿಚಯಿಸಿದರು. ಡಾ. ನಲತವಾಡ. ಎನ್.ಬಿ. ನಿರೂಪಿಸಿದರು. ಕರಣ್ ದೊಡವಾಡ ವಂದಿಸಿದರು. 50ಕ್ಕೂ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ಸ್ವೀಕರಿಸಿದರು. ಡಾ. ಶ್ರೀಧರ್ ಕುಲಕರ್ಣಿ, ಶ್ರುತಿ ಕುಲಕರ್ಣಿ, ಮಂಜುನಾಥ ಹಿರೇಮಠ, ನಿರ್ಮಲಾ ಹಿರೇಮಠ, ಡಾ. ಕಾವ್ಯ ಛೆಬ್ಬಿ, ಡಾ. ರಾಧಿಕಾ ಅಭೇಕರ ನಿರ್ಣಾಯಕರಾಗಿದ್ದರು.