ತರೀಕೆರೆಮಕ್ಕಳು ಶಿಸ್ತಿನ ಜೀವನ ರೂಢಿಸಿಕೊಂಡು ತೃಪ್ತಿಕರ ಜೀವನ ನಡೆಸಲು ಮುಂದಾಗಬೇಕು ಎಂದು ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಶಿಕ್ಷಕಿ ಸವಿತಮ್ಮ ಬಿ.ಹೇಳಿದ್ದಾರೆ.

- ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಮಕ್ಕಳ ಪೋಷಕರ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳು ಶಿಸ್ತಿನ ಜೀವನ ರೂಢಿಸಿಕೊಂಡು ತೃಪ್ತಿಕರ ಜೀವನ ನಡೆಸಲು ಮುಂದಾಗಬೇಕು ಎಂದು ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಶಿಕ್ಷಕಿ ಸವಿತಮ್ಮ ಬಿ.ಹೇಳಿದ್ದಾರೆ.

ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಿಂದ ಶಾಲೆಯಲ್ಲಿ ನಡೆದ 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಮಕ್ಕಳ ''''''''''''''''ಪೋಷಕರ ಸಭೆಯಲ್ಲಿ ಮಾತನಾಡಿದರು. ಶಿಸ್ತಿದ್ದಲ್ಲಿ ಖಂಡಿತವಾಗಿಯೂ ಶಿಕ್ಷಣ ಇರುತ್ತದೆ. ಅಂತಹ ಶಿಸ್ತಿನ ಶಿಕ್ಷಣ ಪಡೆಯು ವಂತಾಗಲಿ. ಮಕ್ಕಳು ಕೇವಲ ಅಂಕ ಗಳಿಸುವುದಷ್ಟೇ ಜೀವನದ ಪರಮ ಗುರಿ ಎಂದು ಭಾವಿಸದೆ, ಸುಸಂಸ್ಕೃತ ಜೀವನ ನಡೆಸುವ ಕಡೆಯೂ ಗಮನ ನೀಡಬೇಕು. ಅಲ್ಲದೇ ಶಿಸ್ತನ್ನು ರೂಢಿಸಿಕೊಂಡು, ತೃಪ್ತಿಕರ ಜೀವನ ನಡೆಸಲು ಮುಂದಾಗಬೇಕು ಎಂದು ಹೇಳಿದರು.

ಮಕ್ಕಳು ಚೆನ್ನಾಗಿ ಓದಿ, ಶಾಲೆಗೆ ಈ ವರ್ಷವೂ ಉತ್ತಮ ಫಲಿತಾಂಶ ನೀಡಬೇಕು. ಚೆನ್ನಾಗಿ ಓದಿ, ತಮ್ಮ ಭವ್ಯ ಭವಿಷ್ಯ ರೂಪಿಸಿ ಕೊಳ್ಳಬೇಕು. ತಮ್ಮ ಭಾವಿ ಜೀವನ ಉತ್ತಮವಾಗಿ ನಿರ್ಮಿಸಿಕೊಳ್ಳಬೇಕೆಂದರೆ ನಿಷ್ಟೆಯ ಓದಿನಿಂದ ಮಾತ್ರ ಸಾಧ್ಯ. ಹಾಗಾದಾಗ ಮಾತ್ರ ಉತ್ತಮ ವೃತ್ತಿ ಪಡೆದು, ನಿರಾತoಕ ಜೀವನ ನಡೆಸಬಹುದೆಂದು ತಿಳಿಸಿದರು.ಮಕ್ಕಳು ಹೆಚ್ಚು ಹೆಚ್ಚು ಓದಿನ ಕಡೆ ಗಮನ ಕೊಡಬೇಕು. ಓದಿದ್ದನ್ನು ಚೆನ್ನಾಗಿ ಮನನ ಮಾಡಿಕೊಳ್ಳಬೇಕು. ಮನನ ಮಾಡಿ ಕೊಂಡಿದ್ದನ್ನು ಪುನರ್ ಮನನ ಮಾಡಿಕೊಂಡಾಗ ಮಾತ್ರ ಓದಿದ್ದು ನೆನಪಿನಲ್ಲಿ ಉಳಿಯುತ್ತದೆ. ಅರ್ಥಪೂರ್ಣ ಕಲಿಕೆ ಎಲ್ಲ ಮಕ್ಕಳದ್ದಾಗಬೇಕು. ಈ ಬಾರಿ ಶೇ.100 ರಷ್ಟು ಫಲಿತಾಂಶ ನೀಡಬೇಕು. ಉತ್ತಮವಾಗಿ ಓದುವ ಜೊತೆ ಉತ್ತಮ ನಡವಳಿಕೆ ಕೂಡ ಅಳವಡಿಸಿಕೊಂಡು, ದೇಶದ ಸತ್ಪ್ರಜೆಗಳಾಗಿ ಬಾಳಬೇಕೆಂದು ಹೇಳಿದರು. ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ ಟಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆ ದಾಖಲಾತಿ ನಿಂತಿರುವುದೇ ನೀವು ನೀಡುವ ಫಲಿತಾಂಶದ ಆಧಾರದ ಮೇಲೆ. ಹಾಗಾಗಿ ಎಲ್ಲ ಮಕ್ಕಳು ಈ ವರ್ಷವೂ ಉತ್ತಮ ಫಲಿತಾಂಶ ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕು. ಹಾಗೆಯೇ ಮುಂದಿನ ತಮ್ಮ ವಿದ್ಯಾಭ್ಯಾಸ ಚೆನ್ನಾಗಿಮಾಡಿ, ಸಮಾಜದಲ್ಲಿ ಉತ್ತಮ ಸ್ಥಾನ ಪಡೆದು, ಸುಸಂಸ್ಕೃತ ಜೀವನ ನಡೆಸಬೇಕು ಎಂದು ಹೇಳಿದರು.ಈ ಪೋಷಕರ ಸಭೆಯಲ್ಲಿ ಹಾಜರಿದ್ದ ಹಲವಾರು ಪೋಷಕರು ಕೂಡ ಮಾತನಾಡಿದರು ಈ ಪೋಷಕರ ಸಭೆಯಲ್ಲಿ ಎಲ್ಲ ಶಿಕ್ಷಕರು, ಅವರವರು ಬೋಧಿಸುವ ವಿಷಯದಲ್ಲಿ ಉತ್ತಮ ಫಲಿತಾoಶ ನೀಡುವ ವಾಗ್ದಾನ ಮಾಡಿದರು. ಶಾಲೆಯ ಶಿಕ್ಷಕರು, ನಿಲಯ ಪಾಲಕಿ, ಮಕ್ಕಳು ಹಾಜರಿದ್ದರು.

--

8ಕೆಟಿಆರ್.ಕೆ.1ಃ

ತರೀಕೆರೆ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ.ಮಕ್ಕಳ .ಫೋಷಕರ ಸಭೆಯಲ್ಲಿ ಶಿಕ್ಷಕಿ ಸವಿತಮ್ಮ, ಬಿ. ಮುಖ್ಯ ಶಿಕ್ಷಕ ಹಾಲೇಶ್ ಕೆ.ಟಿ.ಮತ್ತಿತರರು ಭಾಗವಹಿಸಿದ್ದರು.