ಹಿಂದೂಸ್ತಾನದಲ್ಲಿರುವ ನಾವೆಲ್ಲರೂ ಹಿಂದೂಗಳು. ಹಿಂದೂಗಳು ಒಬ್ಬರನೊಬ್ಬರನ್ನು ಪ್ರೀತಿಸುವ ಗುಣವನ್ನು ಹೊಂದಬೇಕು.
ಮುಂಡರಗಿ: ಹಿಂದೂ ಕೊಲ್ಲುವ ಸಂಸ್ಕೃತಿಯಲ್ಲ, ಅದು ಬದುಕಿಸುವ ಸಂಸ್ಕೃತಿ. ಧರ್ಮ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಎಲ್ಲರೂ ಸ್ವಾಭಿಮಾನ, ಭಾಷಾಭಿಮಾನ, ದೇಶಾಭಿಮಾನ, ಧರ್ಮಾಭಿಮಾನ ಹೊಂದಬೇಕು. ಹಿಂದೂಗಳು ಒಂದೇ ಎನ್ನುವ ಭಾವ ಎಲ್ಲರಲ್ಲೂ ಮೂಡಬೇಕು ಎಂದು ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಶತಾಬ್ದಿ ಅಂಗವಾಗಿ ಹಿಂದೂ ಸಮ್ಮೇಳನ ಸಮಿತಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಕಾಲೇಜು ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಹಿಂದೂ ಸಮ್ಮೇಳನದ ಸಾರ್ವಜನಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಹಿಂದೂಸ್ತಾನದಲ್ಲಿರುವ ನಾವೆಲ್ಲರೂ ಹಿಂದೂಗಳು. ಹಿಂದೂಗಳು ಒಬ್ಬರನೊಬ್ಬರನ್ನು ಪ್ರೀತಿಸುವ ಗುಣವನ್ನು ಹೊಂದಬೇಕು. ಹಿಂದೂಗಳಿಂದ ಭಾರತ ರಕ್ಷಣೆಯಾಗುತ್ತದೆ. ಹಿಂದೂಗಳೆಲ್ಲ ಒಂದೇ ಎನ್ನುವ ಭಾವ ಮೂಡಬೇಕು. ಆಸೆ ಆಮಿಷಕ್ಕೆ ಒಳಗಾದರೆ ಉಳಿವಿಲ್ಲ ಎನ್ನುವುದನ್ನು ಅರಿಯಬೇಕು. ಹಿಂದೂಗಳಿಗೆ ಧರ್ಮಾಭಿಮಾನ ಇರಬೇಕು. ಅಂದಾಗ ಮಾತ್ರ ಹಿಂದೂ ಧರ್ಮ ಉಳಿಯಲು ಸಾಧ್ಯವಾಗುತ್ತದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂಥ ಪ್ರಚಾರ ವಿಭಾಗದ ಪ್ರಮುಖ ಅರುಣ್ ಕುಮಾರ ಜಿ ದಿಕ್ಸೂಚಿ ಭಾಷಣ ಮಾಡಿ, ಹಿಂದೂ ಸಮ್ಮೇಳನ ಯಾರ ವಿರುದ್ಧವೂ ಅಲ್ಲ. ನಮ್ಮ ಉಳಿವಿಗಾಗಿ ಮತ್ತು ನಮ್ಮ ಬೆಳವಣಿಗೆಗಾಗಿ. ದುಷ್ಟರು ಕೆಟ್ಟ ಕೆಲಸ ಮಾಡುವುದಕ್ಕಿಂತ ಸಜ್ಜನರು ನಿಷ್ಕ್ರಿಯವಾಗಿರುವುದು ತುಂಬಾ ಅಪಾಯಕಾರಿ ಎಂದರು.ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಶ್ರೀನಿವಾಸ ಉಪ್ಪಿನಬೆಟಗೇರಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ. ಚಂದ್ರು ಲಮಾಣಿ, ಈಶ್ವರಪ್ಪ ಹಂಚಿನಾಳ, ವೆಂಕಟೇಶ ಕುಲಕರ್ಣಿ, ಕರಬಸಪ್ಪ ಹಂಚಿನಾಳ, ಲಿಂಗರಾಜಗೌಡ ಪಾಟೀಲ, ಎಸ್.ವಿ. ಪಾಟೀಲ, ಶಿವಪ್ಪ ಚಿಕ್ಕಣ್ಣವರ, ರವೀಂದ್ರ ಉಪ್ಪಿನಬೆಟಗೇರಿ, ಆನಂದಗೌಡ ಪಾಟೀಲ, ಕೊಟ್ರೇಶ ಅಂಗಡಿ, ಅಜ್ಜಪ್ಪ ಲಿಂಬಿಕಾಯಿ, ಅನಂತ ಚಿತ್ರಗಾರ, ಯಲ್ಲಪ್ಪ ಅಕ್ಕಸಾಲಿ, ಎಸ್.ಎಸ್. ಗಡ್ಡದ, ರವಿ ಲಮಾಣಿ, ಕುಮಾರಸ್ವಾಮಿ ಹಿರೇಮಠ, ದುರರ್ಗೋಜಿ ಗಣಚಾರಿ, ಶ್ರೀನಿವಾಸ ಅಬ್ಬಿಗೇರಿ, ಅವಿನಾಶ ಗೋಟಕಿಂಡಿ, ನಾಗೇಶ ಹುಬ್ಬಳ್ಖಿ, ಯಲ್ಲಪ್ಪ ಗಣಚಾರಿ, ಭರಮಗೌಡ ನಾಡಗೌಡ, ಎನ್.ವಿ. ಹಿರೇಮಠ, ಸಂಜೀವ ಲದ್ದಿ, ಅಶೋಕ ಹಂದ್ರಾಳ, ಗುರುರಾಜ ಜೋಶಿ, ಸಿದ್ದಲಿಂಗಪ್ಪ ದೇಸಾಯಿ, ಪ್ರಕಾಶ ಕುಂಬಾರ, ದೇವಪ್ಪ ರಾಮೇನಹಳ್ಳಿ, ನಾಗರಾಜ ಹೊಸಮನಿ, ವೀರಣ್ಣ ತುಪ್ಪದ, ಪಾಂಡುರಂಗ ಮುಖ್ಯೆ, ಸೋಮಣ್ಣ ಹಂಚಿನಾಳ, ಶರಣಪ್ಪ ಬೆಲ್ಲದ, ಎ.ಕೆ. ಹಂಚಿನಾಳ, ವೀರೇಶ ಸಜ್ಜನರ, ಕೈಲಾಸಪತಿ ಹಿರೇಮಠ, ವೀರೇಂದ್ರ ಅಂಗಡಿ, ಆಕಾಶ ಹಂಚಿನಾಳ, ಪ್ರಕಾಶ ಪಾಟೀಲ, ಪವನ ಮೇಟಿ, ಚಿನ್ನಪ್ಪ ವಡ್ಡಟ್ಟಿ, ಪರಶುರಾಮ ಕರಡಿಕೊಳ್ಳ, ಶಿವಕುಮಾರ ಕುರಿ, ಪವಿತ್ರಾ ಕಲ್ಲಕುಟಗರ್, ಜ್ಯೋತಿ ಹಾನಗಲ್ ಉಪಸ್ಥಿತರಿದ್ದರು. ಸಂಜೀವ್ ರಿತ್ತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಪ್ಪ ಇಟಗಿ ವೈಯಕ್ತಿಕ ಗೀತೆ ಮತ್ತು ಶೇಖರಗೌಡ ಪಾಟೀಲ ವಂದೇ ಮಾತರಂ ಗೀತೆ ಹಾಡಿದರು. ಮಂಜುನಾಥ ಇಟಗಿ ನಿರೂಪಿಸಿದರು. ಶ್ರೀನಿವಾಸ ಕಟ್ಟಿಮನಿ ವಂದಿಸಿದರು.