ಶಿಕ್ಷಣದ ಜತೆ ಸೇವಾಮನೋಭಾವ ಬೆಳೆಸಿಕೊಳ್ಳಿ

| Published : Jan 12 2025, 11:45 PM IST

ಸಾರಾಂಶ

ಕೋಲಾರ ಜಿಲ್ಲೆ ಬರಪೀಡಿತ ಜಿಲ್ಲೆಯಾಗಿದೆ, ಆದರೆ ಇಲ್ಲಿನ ಜನರು ಸಮಸ್ಯೆಗಳನ್ನು ಎದುರಿಸುವಂತಹ ಹಾಗೂ ಶ್ರಮದ ಮೇಲೆ ನಂಬಿಕೆ ಉಳ್ಳವರಾಗಿದ್ದಾರೆ, ಹಾಗಾಗಿ ಏನೇ ಕಷ್ಟ ಬಂದರೂ ಅದನ್ನು ನಿಭಾಯಿಸುವ ಶಕ್ತಿ ಉಳ್ಳವರಾಗಿದ್ದಾರೆ, ಯುವಕರು ತಂತ್ರಜ್ಞಾನ ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದರೆ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಬಹುದು

ಕನ್ನಡಪ್ರಭ ವಾರ್ತೆ ಕೋಲಾರಯುವಜನತೆ ಉತ್ತಮ ಶಿಕ್ಷಣದ ಜೊತೆಗೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಎಡಿಸಿ ಎಸ್.ಎಂ.ಮಂಗಳ ಕರೆ ನೀಡಿದರು.ನಗರದ ಹೊರವಲಯದ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಕ್ರಿಸ್ತು ಜಯಂತಿ ಕಾಲೇಜು ವಿದ್ಯಾರ್ಥಿಗಳಿಗೆ ಸೌಹಾರ್ದಗಿರಿ-ಗ್ರಾಮೀಣ ಮಾನ್ಯತೆ ಶಿಬಿರ ಉದ್ಘಾಟಿಸಿ ಮಾತನಾಡಿದರು.ಸೇವಾ ಮನೋಭಾವನೆ

ಒಳ್ಳೆಯ ಅಧಿಕಾರಿಗಳಾಗಲು ಸೇವಾ ಮನೋಭಾವನೆ ಇರಬೇಕು. ಸಹಾಯ ಮಾಡುವ ಹಾಗೂ ಜನಸಾಮಾನ್ಯರಿಗೆ ಸ್ಪಂದಿಸುವ ಮನಸ್ಸಿರಬೇಕು, ಕೋಲಾರ ಜಿಲ್ಲೆ ಬರಪೀಡಿತ ಹಾಗು ಸತತ ಪ್ರಕೃತಿ ವಿಕೋಪಕ್ಕೆ ಒಳಗಾಗುವ ಜಿಲ್ಲೆಯಾಗಿದೆ, ಆದರೆ ಇಲ್ಲಿನ ಜನರು ಸಮಸ್ಯೆಗಳನ್ನು ಎದುರಿಸುವಂತಹ ಹಾಗೂ ಶ್ರಮದ ಮೇಲೆ ನಂಬಿಕೆ ಉಳ್ಳವರಾಗಿದ್ದಾರೆ, ಹಾಗಾಗಿ ಏನೇ ಕಷ್ಟ ಬಂದರೂ ಅದನ್ನು ನಿಭಾಯಿಸುವ ಶಕ್ತಿ ಉಳ್ಳವರಾಗಿದ್ದಾರೆ, ಯುವಕರು ತಂತ್ರಜ್ಞಾನ ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದರೆ ಸಮಾಜದಲ್ಲಿ ಉತ್ತಮ ಸೇವೆಸಲ್ಲಿಸಲು ಸಹಾಯವಾಗುತ್ತದೆ ಎಂದರು.ತಾವು ಜಿಲ್ಲೆಯ ಪ್ರತಿಷ್ಠಿತ ಕುಡಿಯುವ ನೀರಿನ ಯೋಜನೆಯಾದ ಯರಗೋಳ್ ಯೋಜನೆಗೆ ಪೂರಕವಾದ ಕೆಲಸ ಮಾಡಿದ್ದು, ವೇಮಗಲ್ ಕೈಗಾರಿಕಾ ಪ್ರದೇಶಕ್ಕೆ ಭೂಮಿ ಗುರುತಿಸಿಕೊಡಲಾಗಿದೆ. ರೈತರಿಗೆ ಬೆಳೆ ಪರಿಹಾರ ನೀಡುವಲ್ಲಿ ಕೈಗೊಂಡ ಕ್ರಮ ಆತ್ಮತೃಪ್ತಿ ನೀಡಿದೆ ಎಂದರು.ಸಹಜ ಬದುಕು ರೂಪಿಸಿಕೊಳ್ಳಿಆದಿಮ ಸಂಸ್ಥೆಯ ಹ.ಮಾ.ರಾಮಚಂದ್ರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಅಂಕುಡೊಂಕುಗಳನ್ನು ಸರಿಮಾಡುವುದು ನಮ್ಮ ಕರ್ತವ್ಯ. ಆದಿಮ ನಿಸರ್ಗ ಸಹಜವಾಗಿ ಬದುಕುವುದನ್ನು ಕಲಿಸುತ್ತದೆ. ಇಂದಿನ ವ್ಯಾಟ್ಸಾಫ್ ಯೂನಿವರ್ಸಿಟಿಯ ಅಬ್ಬರದ ನಡುವೆಯೂ ನಿಸರ್ಗ ಸಹಜವಾದ ಬದಕು ರೂಪಿಸುವ ಜೀವಪರ ಜನೋಪಯೋಗಿ ಕಲಿಕೆಯತ್ತ ಸಾಗಲು ನಾವು ಪ್ರಯತ್ನಿಸಬೇಕು ಎಂದು ತಿಳಿಸಿದರು. ತಂತ್ರಜ್ಞಾನ ಸದ್ಬಳೆಯಾಗಬೇಕು

ಇಂದಿನ ಯುವ ಪೀಳಿಗೆಯು ನಡೆಯುತ್ತಿರುವ ರೀತಿಯನ್ನು ಗಮನಿಸಿದರೆ ಭವಿಷ್ಯದ ಬಗ್ಗೆ ಆತಂಕ ಆಗುತ್ತದೆ. ತಂದೆ -ತಾಯಿ ತಮ್ಮ ಮಕ್ಕಳು ಒಳ್ಳೆಯ ಸಾಧನೆ ಮಾಡಿ ಒಳ್ಳೆಯ ಸತ್ಪ್ರಜೆಗಳಾಗಬೇಕು ಎಂದು ಕನಸು ಕಾಣುತ್ತಾರೆ. ಅಂತಹ ಕನಸುಗಳನ್ನು ನೀವು ಸಾಕಾರಗೊಳಿಸುವಂತೆ ಒಳ್ಳೆಯ ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣ ಪಡೆಯಿರಿ, ತಂತ್ರಜ್ಞಾನ ಸದ್ವಿನಿಯೋಗಿಸಿಕೊಂಡು ನೀವೂ ಈ ನೆಲದ ಭಾರತರತ್ನಗಳಾಗಿರಿ ಎಂದು ಹಾರೈಸಿದರು.ಮುಖಂಡ ವೆಂಕಟಸ್ವಾಮಿ, ಗ್ರಾಪಂ ಅಧ್ಯಕ್ಷ ಮುನಿರಾಜು, ಕಲ್ಲೂರು ಚಲಪತಿ, ಸಮಾಜ ಸೇವಕ ಬೆಳಗಾನಹಳ್ಳಿ ಮುನಿವೆಂಕಟಪ್ಪ ಕ್ರಿಸ್ತು ಜಯಂತಿ ಕಾಲೇಜು ಉಪನ್ಯಾಸಕರಾದ ಕುಪ್ಪನಹಳ್ಳಿ ಡಾ.ಬೈರಪ್ಪ, ಡಾ.ಎಸ್.ಅರುಣ್ ಕುಮಾರ್, ಶಶಿಕುಮಾರ್, ದೀಕ್ಷಿತ್ ಕುಮಾರ್, ರೇಚಲ್, ಸರಸ್ವತಿ, ಜನನಿ, ಅಂಕಿತಾ ಕೃಷ್ಣನ್, ಅಶೋಕ್, ಆಸ್ಟಿನ್ ರಿಚರ್ಡ್ ಇದ್ದರು.