ಓದಿನ ಜೊತೆಗೆ ಸೇವಾಗುಣ ಬೆಳೆಸಿಕೊಳ್ಳಿ

| Published : May 12 2025, 12:16 AM IST

ಸಾರಾಂಶ

ಶಿಕಾರಿಪುರ: ಭಾರತದ ಯುವಕರು ಜ್ಞಾನಶಕ್ತಿಯಿಂದಾಗಿ ವಿಶ್ವಕ್ಕೆ ಮಾದರಿಯಾಗಿದ್ದು, ಯುವಶಕ್ತಿ ಓದಿನ ಜೊತೆಗೆ ಸೇವಾಗುಣವನ್ನು ಬೆಳೆಸಿಕೊಂಡು ಸಮಾಜದ ಪರಿವರ್ತನೆಗೆ ನೆರವಾಗಬೇಕು. ಹೊಸ ತಲೆಮಾರಿನವರು ಹೊಸ ವ್ಯವಸ್ಥೆಯ ಪ್ರತಿಬಿಂಬ. ಹೊಸ ವಿಚಾರಧಾರೆಯುಳ್ಳವರು, ದೊಡ್ಡ ಕನಸಿನೊಂದಿಗೆ ಸ್ಪರ್ಧಾತ್ಮಕ ಜಗತ್ತಿನ ಕಡೆ ಪೂರ್ಣ ಸಿದ್ಧತೆಯೊಂದಿಗೆ ಹೆಜ್ಜೆಯಿಟ್ಟಲ್ಲಿ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಇಲ್ಲಿನ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಹೇಳಿದರು.

ಶಿಕಾರಿಪುರ: ಭಾರತದ ಯುವಕರು ಜ್ಞಾನಶಕ್ತಿಯಿಂದಾಗಿ ವಿಶ್ವಕ್ಕೆ ಮಾದರಿಯಾಗಿದ್ದು, ಯುವಶಕ್ತಿ ಓದಿನ ಜೊತೆಗೆ ಸೇವಾಗುಣವನ್ನು ಬೆಳೆಸಿಕೊಂಡು ಸಮಾಜದ ಪರಿವರ್ತನೆಗೆ ನೆರವಾಗಬೇಕು. ಹೊಸ ತಲೆಮಾರಿನವರು ಹೊಸ ವ್ಯವಸ್ಥೆಯ ಪ್ರತಿಬಿಂಬ. ಹೊಸ ವಿಚಾರಧಾರೆಯುಳ್ಳವರು, ದೊಡ್ಡ ಕನಸಿನೊಂದಿಗೆ ಸ್ಪರ್ಧಾತ್ಮಕ ಜಗತ್ತಿನ ಕಡೆ ಪೂರ್ಣ ಸಿದ್ಧತೆಯೊಂದಿಗೆ ಹೆಜ್ಜೆಯಿಟ್ಟಲ್ಲಿ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಇಲ್ಲಿನ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಹೇಳಿದರು.ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ಕುಮದ್ವತಿ ವಾಣಿಜ್ಯ ಸ್ನಾತಕ್ಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ, ಪದವಿ ಪ್ರದಾನ ಹಾಗೂ ಸಾಂಪ್ರಾದಾಯಿಕ ಉಡುಗೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ಭಾರತಕ್ಕೆ ಭವಿಷ್ಯದಲ್ಲಿ ಮಹತ್ವದ ಸ್ಥಾನ ದೊರೆಯಲಿದೆ. ಕುರಿಗಾಹಿ ಕುಟುಂಬದ ನಾನು ಇಂದು ಉನ್ನತ ಹುದ್ದೆಗೇರಲು ಹೊಂದಿದ ಗುರಿ, ಬದ್ಧತೆಯೇ ಕಾರಣ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಡಾ.ರವೀಂದ್ರ, ಶಕ್ತಿ ಮತ್ತು ಚೈತನ್ಯದಿಂದ ಮಿಡಿಯುತ್ತಿರುವ ರಾಷ್ಟ್ರದಲ್ಲಿ, ಯುವಕರು ನಾಳೆಯ ಭರವಸೆಯನ್ನು ಸಾಕಾರಗೊಳಿಸುವ ಹಾಗೂ ಪರಿವರ್ತಕ ಶಕ್ತಿಯನ್ನು ಚಲಾಯಿಸುವವರು ಆಗಿದ್ದಾರೆ. ವಿದ್ಯಾರ್ಥಿಗಳು ಕೇವಲ ಅಂಕಗಳ ಹಿಂದೆ ಬೀಳದೆ ಪರಿಪೂರ್ಣ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಒತ್ತು ನೀಡುತ್ತಾ ಬಂದಿದೆ ಎಂದರು.ವೇದಿಕೆಯಲ್ಲಿ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ಪ್ರಾಂಶುಪಾಲ ಸಿದ್ಧೇಶ್ವರ.ಎಚ್.ಜಿ, ಪ್ರಾಧ್ಯಾಪಕ ಕೋಟೋಜಿರಾವ್.ಆರ್ ಸೇರಿದಂತೆ ಉಪನ್ಯಾಸಕ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು,

ಉಪನ್ಯಾಸಕಿ ಹಂಸ ವರದಿ ವಾಚಿಸಿ ಸ್ವಾಗತಿಸಿದರು. ಪ್ರಜ್ಞಾ ಪ್ರಾರ್ಥಿಸಿದರು. ಧಾನೇಶ್ವರಿ ನಿರೂಪಿಸಿದರು. ಅಶ್ವಿನಿ ವಂದಿಸಿದರು.

ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.