ದೇಶಕ್ಕಾಗಿ ದುಡಿಯುವ ಮನೋಭಾವನೆ ಬೆಳೆಸಿಕೊಳ್ಳಿ

| Published : Aug 17 2024, 12:54 AM IST

ಸಾರಾಂಶ

ರಾಷ್ಟ್ರನಾಯಕರು ಸ್ವಾತಂತ್ರ್ಯ ಹೋರಾಟಗಾರರು, ವೀರಯೋಧರನ್ನು ಗೌರವಿಸಿ ನಿತ್ಯವು ದೇಶಕ್ಕಾಗಿ ದುಡಿಯುವ ಮನೋಭಾವನೆ ಬೆಳೆಸಿಕೊಳ್ಳುವಂತೆ ಅರಿಹಂತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾವೀರ ಬ.ಸಗರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೆಬಿಹಾಳ

ರಾಷ್ಟ್ರನಾಯಕರು ಸ್ವಾತಂತ್ರ್ಯ ಹೋರಾಟಗಾರರು, ವೀರಯೋಧರನ್ನು ಗೌರವಿಸಿ ನಿತ್ಯವು ದೇಶಕ್ಕಾಗಿ ದುಡಿಯುವ ಮನೋಭಾವನೆ ಬೆಳೆಸಿಕೊಳ್ಳುವಂತೆ ಅರಿಹಂತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾವೀರ ಬ.ಸಗರಿ ಹೇಳಿದರು.

ಪಟ್ಟಣದ ಅರಿಹಂತ ಪಿಯು ಹಾಗೂ ಪದವಿ ಮಹಾವಿದ್ಯಾಲಯದಲ್ಲಿ 78ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವದಲ್ಲಿ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದ ಅವರು, ದೇಶ ನಿನಗೇನು ಮಾಡಿದೆ ಎನ್ನುವುದಕ್ಕಿಂತ, ದೇಶಕ್ಕಾಗಿ ನೀನೇನು ಮಾಡಿದಿಯಾ ಎಂಬುವುದು ಮುಖ್ಯ ಎಂದರು.ಕಾಲೇಜಿನ ಪ್ರಾಚಾರ್ಯ ಪ್ರೊ.ವಿ.ಎಂ.ಸಗರಿ, ಉಪನ್ಯಾಸಕರಾದ ಪ್ರೊ.ಹನಮಗೌಡಗೌಡರ ಮತ್ತು ಪ್ರೊ.ರಾಜನಾರಾಯಣ ನಲವಡೆ ಅವರು, ಭಾರತಕ್ಕೆ ಹೇಗೆ ಸ್ವಾತಂತ್ರ್ಯಬಂತು, ಇತಿಹಾಸವನ್ನು ಮೆಲಕು ಹಾಕಿ ವಿದ್ಯಾರ್ಥಿಗಳಿಗೆ ಮನ ಮಟ್ಟುವಂತೆ ತಿಳಿಸಿ ದೇಶಪ್ರೇಮ ಎಲ್ಲರಲ್ಲಿಯೂ ಬಿತ್ತರಿಸಲಿ ಎಂದು ಸಲಹೆ ನೀಡಿದರು.ಉಪನ್ಯಾಸಕರಾದ ಜಿ.ಡಿ.ಬಡಿಗೇರ, ಅಶೋಕ ಹಡಪದ, ಶರೀಫ್ ನದಾಫ್, ಸಮೀರ್‌ ಬಾಗವಾನ, ರವಿ ಮರೋಳ, ಬಸವರಾಜ ಕತ್ತಿ, ಅಕ್ಷತಾ ಕಟ್ಟೆ, ರೋಹಿನಿ ನಾಯ್ಕೋಡಿ ಉಪಸ್ಥಿತರಿದ್ದರು.

1999 ರಿಂದ 2024ರವರೆಗೆ ಸತತ 25ನೇ ಬಾರಿಗೆ ಧ್ವಜಾರೋಹಣ ನೆರೆವೇರಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಹೀಗೆ ತಾಯಿ ಭಾರತಾಂಬೆಯ ಸೇವೆಗೈಯುವ ಅವಕಾಶ ವಿದ್ಯಾರ್ಥಿಗಳಿಗೂ ಸಿಗಲಿ ಮತ್ತು ಈಗ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡುವ ಶಕ್ತಿ ಪ್ರತಿಯೊಬ್ಬ ಭಾರತೀಯನಲ್ಲಿಯೂ ಇದೆ. ರಾಷ್ಟ್ರಗೀತೆ, ರಾಷ್ಟ್ರಧ್ವಜ ನಮ್ಮ ರಾಷ್ಟ್ರಾಭಿಮಾನದ ಸಂಕೇತ.

-ಮಹಾವೀರ ಬ.ಸಗರಿ,

ಅರಿಹಂತ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು.