ಸಂಸ್ಕಾರಯುತ ಜೀವನ ಪಾಲನೆ ಇಂದಿನ ಅಗತ್ಯ: ಅಶೋಕ್ ಹಾರ್ನಳ್ಳಿ

| Published : May 20 2024, 01:30 AM IST

ಸಂಸ್ಕಾರಯುತ ಜೀವನ ಪಾಲನೆ ಇಂದಿನ ಅಗತ್ಯ: ಅಶೋಕ್ ಹಾರ್ನಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ನಗರ ಪ್ರದೇಶಕ್ಕೆ ವಲಸೆ ಹೋಗುವ ಯುವ ಜನತೆ ಗ್ರಾಮಾಂತರ ಪ್ರದೇಶದಲ್ಲಿ ವಾಸ ಮಾಡುತ್ತಿರುವ ನಮ್ಮ ಹೆತ್ತವರನ್ನೇ ಮರೆಯುತ್ತಿದ್ದಾರೆ. ತಂದೆ-ತಾಯಿಯ ವೃದ್ಧಾಪ್ಯ ಸಮಯದಲ್ಲಿ, ಮರಣ ಕಾಲದಲ್ಲಿ ಹತ್ತಿರ ಇರದೆ ದೂರದ ಊರಿನಲ್ಲಿ, ಹೊರ ದೇಶದಲ್ಲಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಸಂಸ್ಕಾರಯುತ ಜೀವನ ಹಾಗೂ ನಮ್ಮ ಧರ್ಮದ ಸಂದೇಶ ಪಾಲನೆ ಮಾಡುವುದು ಕರ್ತವ್ಯವಾಗಿದೆ.

ಕನ್ನಡಪ್ರಭ ವಾರ್ತೆ ಸಾಗರ

ಹಿಂದೂ ಧರ್ಮದಲ್ಲಿ ಪೂರ್ವಜರಿಗೆ ನೀಡುವಷ್ಟು ಗೌರವ ಇನ್ಯಾವ ಧರ್ಮದಲ್ಲೂ ಕಾಣಲು ಸಿಗುವುದಿಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ಅಭಿಪ್ರಾಯಪಟ್ಟರು.

ತಾಲೂಕಿನ ಇಕ್ಕೇರಿಯಲ್ಲಿ ರಾಮಭಟ್ಟರ ನೆನಪಿನ ಗ್ರಂಥ "ಕಾಯಕ ಯೋಗಿ''ಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಅಘೋರೇಶ್ವರ ಸನ್ನಿಧಿಯಲ್ಲಿ ಪೂಜೆ ಮಾಡಿ ತಮ್ಮ ವೃತ್ತಿ ಜೊತೆಗೆ ಕೃಷಿಯಲ್ಲಿ ತೊಡಗಿಸಿಕೊಂಡು ಕಾಯಕಯೋಗಿಯಂತೆ ಶ್ರಮಿಸಿದವರು ಇಕ್ಕೇರಿ ರಾಮಭಟ್ಟರು ಎಂದು ಹೇಳಿದರು.

ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವ ಪಾಠ ಕಲಿಸಿಕೊಟ್ಟ ರಾಮಭಟ್ಟರ ನೆನಪಿನ ಗ್ರಂಥ `ಕಾಯಕ ಯೋಗಿ''''''''ಯನ್ನು ಅವರ ಮಕ್ಕಳು ಹಾಗೂ ಕುಟುಂಬದವರು ಲೋಕಕ್ಕೆ ಪರಿಚಯಿಸುತ್ತಿರುವುದು ಮಾದರಿಯಾದುದು. ತಮ್ಮ ಪೂರ್ವಜರು ಹಾಗೂ ಹಿರಿಯರು ಮಾಡಿರುವ ಕೆಲಸವನ್ನು ನೆನಪಿಸಿಕೊಳ್ಳುವುದು ಯುವಜನರ ಆದ್ಯ ಕರ್ತವ್ಯ ಎಂದರು.

ಇತ್ತೀಚೆಗೆ ನಗರ ಪ್ರದೇಶಕ್ಕೆ ವಲಸೆ ಹೋಗುವ ಯುವ ಜನತೆ ಗ್ರಾಮಾಂತರ ಪ್ರದೇಶದಲ್ಲಿ ವಾಸ ಮಾಡುತ್ತಿರುವ ನಮ್ಮ ಹೆತ್ತವರನ್ನೇ ಮರೆಯುತ್ತಿದ್ದಾರೆ. ತಂದೆ-ತಾಯಿಯ ವೃದ್ಧಾಪ್ಯ ಸಮಯದಲ್ಲಿ, ಮರಣ ಕಾಲದಲ್ಲಿ ಹತ್ತಿರ ಇರದೆ ದೂರದ ಊರಿನಲ್ಲಿ, ಹೊರ ದೇಶದಲ್ಲಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಸಂಸ್ಕಾರಯುತ ಜೀವನ ಹಾಗೂ ನಮ್ಮ ಧರ್ಮದ ಸಂದೇಶ ಪಾಲನೆ ಮಾಡುವುದು ಕರ್ತವ್ಯವಾಗಿದೆ ಎಂದು ಹೇಳಿದರು.ಗ್ರಂಥದ ಕುರಿತು ವಿದ್ವಾನ್ ಗಜಾನನ ಭಟ್ ರೇವಣಕಟ್ಟ ಮಾತನಾಡಿದರು. ಡಾ.ಗಜಾನನ ಶರ್ಮಾ ಹಾಗೂ ಗ್ರಂಥದ ಸಂಪಾದಕ ತಿರುಮಲ ಮಾವಿನಕುಳಿ ಮಾತನಾಡಿದರು. ಡಾ.ಎಂ.ಆರ್.ಹೆಗಡೆ, ಹೈಕೋರ್ಟ್ ನ್ಯಾಯವಾದಿ ಆರ್.ಗೋಪಾಲ ಭಟ್, ನಾಗೇಂದ್ರ ಭಟ್ ಉಪಸ್ಥಿತರಿದ್ದರು. ಮಾಜಿ ಸಚಿವ ಎಚ್.ಹಾಲಪ್ಪ, ಎಂ.ಹರನಾಥರಾವ್, ನ್ಯಾಯವಾದಿ ಶ್ರೀಪಾದ್, ಬಿ.ಆರ್.ಜಯಂತ್ ಇನ್ನಿತರರಿದ್ದರು.