ರಾಮನಗರ: ರಾಮನೂರಿನಲ್ಲಿ ಇದೇ ಮೊದಲ ಬಾರಿಗೆ ವಿಜೃಂಭಣೆಯಿಂದ ಆಚರಿಸುತ್ತಿರುವ ರಾಮೋತ್ಸವ ಕೇವಲ ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತಗೊಂಡಿಲ್ಲ. ಬದಲಿಗೆ ಸಾಂಸ್ಕೃತಿಕ ಮತ್ತು ಕ್ರೀಡಾಹಬ್ಬಗಳಿಗೂ ಅವಕಾಶ ಕಲ್ಪಿಸಲಿದೆ.ಸಾಂಸ್ಕೃತಿಕ ಮತ್ತು ವಿವಿಧ ಕ್ರೀಡೆಗಳಲ್ಲಿ ಮಕ್ಕಳು, ಯುವಜನತೆ, ಮಹಿಳೆ-ಪುರುಷರು ಹಾಗೂ ವಯೋವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಪಾಲ್ಗೊಳ್ಳಬಹುದು.
ರಾಮನಗರ: ರಾಮನೂರಿನಲ್ಲಿ ಇದೇ ಮೊದಲ ಬಾರಿಗೆ ವಿಜೃಂಭಣೆಯಿಂದ ಆಚರಿಸುತ್ತಿರುವ ರಾಮೋತ್ಸವ ಕೇವಲ ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತಗೊಂಡಿಲ್ಲ. ಬದಲಿಗೆ ಸಾಂಸ್ಕೃತಿಕ ಮತ್ತು ಕ್ರೀಡಾಹಬ್ಬಗಳಿಗೂ ಅವಕಾಶ ಕಲ್ಪಿಸಲಿದೆ.
ಸಾಂಸ್ಕೃತಿಕ ಮತ್ತು ವಿವಿಧ ಕ್ರೀಡೆಗಳಲ್ಲಿ ಮಕ್ಕಳು, ಯುವಜನತೆ, ಮಹಿಳೆ-ಪುರುಷರು ಹಾಗೂ ವಯೋವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಪಾಲ್ಗೊಳ್ಳಬಹುದು.ಪ್ರತಿಯೊಂದು ಸ್ಪರ್ಧೆಗೂ ಪ್ರತ್ಯೇಕ ಸಮಿತಿ ರಚಿಸಿ ಜವಾಬ್ದಾರಿ ಹಂಚಲಾಗಿದೆ. ಸ್ಪರ್ಧಿಗಳ ನೋಂದಣಿ ಕಡ್ಡಾಯ. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಉಡುಗೊರೆ ನೀಡಿದರೆ, ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ಸಾಂಸ್ಕೃತಿಕ ಮತ್ತು ಕ್ರೀಡೆಗಳಲ್ಲಿ ಸಹಸ್ರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಹೋಬಳಿ ಮಟ್ಟದ ವಿಜೇತರು ರಾಮನಗರದಲ್ಲಿ ನಡೆಯುವ ಕ್ಷೇತ್ರ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವರು. ಇಲ್ಲಿ ಗೆದ್ದವರು ಕನಕೋತ್ಸವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಯೋಗಾಸನ:ಜ.15ರಂದು ಬೆಳಗ್ಗೆ 5.30ರಿಂದ 7.30ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಹರಿಹರ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ ಮಾರ್ಗದರ್ಶನದ ಯೋಗಾಸನದಲ್ಲಿ 2 ಸಾವಿರ ಜನ ಭಾಗಿಯಾಗುವರು. ಅದೇ ದಿನ ಮನೆಗೊಂದು ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ವಾರ್ಡುಗಳಲ್ಲಿ ಮಹಿಳೆಯರು ಮನೆಗಳ ಮುಂದೆ ರಂಗೋಲಿ ಬಿಡಿಸಲಿದ್ದಾರೆ.
ಜ.16ರಂದು ಬೆಳಗ್ಗೆ 10ರಿಂದ 12 ಗಂಟೆವರೆಗೆ ರಂಗ ಗೀತೆಗಳ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12ರಿಂದ 3 ಗಂಟೆವರೆಗೆ ವಾಯ್ಸ್ ಆಫ್ ರಾಮನಗರ ಸ್ಪರ್ಧೆಗಳು ನಡೆಯಲಿವೆ. ಜ.17ರಂದು ಚಲನಚೀತ್ರಗೀತೆ, ದೇಶಭಕ್ತಿ ಗೀತೆ, ಜನಪದ ನೃತ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಜ.18ರಂದು ಮಹಿಳೆಯರಿಗೆ ಮೆಹಂದಿ ಸ್ಪರ್ಧೆ, ಸಂಜೆ ಅರ್ಜುನ್ ಜನ್ಯ ಮತ್ತು ತಂಡದ ಸಂಗೀತ ರಸೆ ಸಂಜೆ ಜನಮನ ತಣಿಸಲಿದೆ.ಸ್ಥಳದಲ್ಲೇ ಚಿತ್ರ ಬಿಡುವ ಸ್ಪರ್ಧೆ:
ಜ.16ರಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಚಿತ್ರ ಬಡಿಸುವ ಸ್ಪರ್ಧೆ ನಡೆಯಲಿದೆ. 1ರಿಂದ 10ನೇ ತರಗತಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಾಥಮಿಕ ಮತ್ತು ಪ್ರೌಢಶಾಲಾ ಪ್ರತ್ಯೇಕ ವಿಭಾಗಗಳಿದ್ದು, ಸ್ಪರ್ಧೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ 3 ಸಾವಿರ ಜನ ನೋಂದಾಯಿಸಿದ್ದಾರೆ.ಮ್ಯಾರಥಾನ್ ಸ್ಪರ್ಧೆ:
ಜ.17ರಂದು ಪುರುಷರು-ಮಹಿಳೆಯರಿಗೆ ಮ್ಯಾರಥಾನ್ ಸ್ಪರ್ಧೆಗೆ ಶಾಸಕ ಯೋಗೇಶ್ವರ್ ರಾಮನಗರದ ಶ್ರೀ ಆಂಜನೇಯಸ್ವಾಮಿ ಆರ್ಚ್ ಮುಂದೆ ಹಸಿರು ನಿಶಾನೆ ತೋರಿಸುವರು.16 ವರ್ಷ ಮೇಲ್ಪಟ್ಟ ಪುರುಷರು (10 ಕಿಮೀ) ಹಳೇ ಬೆಂ-ಮೈ ಹೆದ್ದಾರಿ ಮಾರ್ಗವಾಗಿ ಐಜೂರು ವೃತ್ತ, ಅರ್ಚಕರಹಳ್ಳಿ ಬಳಿ ಯೂಟರ್ನ್ ಪಡೆದು ನ್ಯಾಯಾಲಯದ ರಸ್ತೆ, ಎಂ.ಜಿ.ರಸ್ತೆ, ವಾಟರ್ ಟ್ಯಾಂಕ್ ವೃತ್ತದ ಮೂಲಕ ಆಂಜನೇಯ ಆರ್ಚ್‌ನಲ್ಲಿ ಕೊನೆಗೊಳ್ಳಲಿದೆ. ಮಹಿಳೆಯರು (5 ಕಿಮೀ) ಹಳೇ ಬೆಂ-ಮೈ ಹೆದ್ದಾರಿ ಮಾರ್ಗವಾಗಿ ಐಜೂರು ವೃತ್ತ ತಲುಪಿ ಅಲ್ಲಿಂದ ಕೆಂಗಲ್ ಹನುಮಂತಯ್ಯ ವೃತ್ತದಿಂದ ಎಂ.ಜಿ.ರಸ್ತೆ, ವಾಟರ್ ಟ್ಯಾಂಕ್ ವೃತ್ತದ ಮೂಲಕ ಆಂಜನೇಯ ಆರ್ಚ್ ನಲ್ಲಿ ಕೊನೆಗೊಳ್ಳಲಿದೆ. ಮ್ಯಾರಥಾನ್ ನಲ್ಲಿ 2 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ.ಬಾಕ್ಸ್...........
ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಜ.18ರಂದು ರಾಮನಗರದ ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಕ್ಲಬ್ ನಲ್ಲಿ 13 ವರ್ಷ ಒಳಪಟ್ಟ ಬಾಲಕ ಮತ್ತು ಬಾಲಕಿಯರ ಡಬಲ್ಸ್, 19 ವರ್ಷ ಮೇಲ್ಪಟ್ಟ ಪುರುಷ-ಮಹಿಳೆಯರ ಡಬಲ್ಸ್, ಪುರುಷರು ಮತ್ತು ಮಹಿಳೆಯರ ಓಪನ್ಸ್ ಡಬಲ್ಸ್, 45 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ ಪಂದ್ಯಾವಳಿ ನಡೆಯಲಿದೆ. ಪ್ರತ್ಯೇಕ ವಿಭಾಗಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು.
ಈಜು ಸ್ಪರ್ಧೆ:16 ವರ್ಷ ಒಳಪಟ್ಟ ಮಕ್ಕಳಿಗೆ ಜ.18ರಂದು ರಾಮನಗರದ ಶಾಂತಿನಗರ ಬಡಾವಣೆಯಲ್ಲಿರುವ ಈಜುಕೊಳದಲ್ಲಿ ಈಜು ಸ್ಪರ್ಧೆಗಳು ನಡೆಯಲಿವೆ. 1ನೇ ಗುಂಪಿನಲ್ಲಿ 16 ವರ್ಷ, 2ನೇ ಗುಂಪಿನಲ್ಲಿ 14 ವರ್ಷ ಹಾಗೂ 3ನೇ ಗುಂಪಿನಲ್ಲಿ 12 ವರ್ಷ ವಯಸ್ಸಿನವರಿಗೆ ಫ್ರೀ ಸ್ಟೈಲ್, ಕಿಕ್ ಬೋರ್ಡ್, ಬೈಸ್ಟ್ ಸ್ಟ್ರೋಕ್, ಬಟರ್ ಫ್ಲೈ, ಬ್ಯಾಕ್ ಸ್ಟ್ರೋಕ್ 100 ಮೀ., ಫ್ರೀ ಸ್ಟೈಲ್ ರಿಲೇ 4 - 100, ಮಿಡ್ಲ್ ರಿಲೇ 200 ಮೀ ಸ್ಪರ್ಧೆ ಇರಲಿದೆ. 4ನೇ ಗುಂಪಿನಲ್ಲಿ 10 ವರ್ಷ, 5ನೇ ಗಂಪಿನಲ್ಲಿ 8 ವರ್ಷ ವಯಸ್ಸಿನವರಿಗೆ ಫ್ರೀ ಸ್ಟೈಲ್, ಕಿಕ್ ಬೋರ್ಡ್, ಬೈಸ್ಟ್ ಸ್ಟ್ರೋಕ್, ಬಟರ್ ಫ್ಲೈ, ಬ್ಯಾಕ್ ಸ್ಟ್ರೋಕ್ 50 ಮೀ., ಫ್ರೀ ಸ್ಟೈಲ್ ರಿಲೇ 4 -50 ಮೀ. ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ, ಭಾಗವಹಿಸಿದವರೆಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಗುತ್ತದೆ.
ಫ್ಯಾನ್ಸಿ ಡ್ರೆಸ್ ಸ್ಪರ್ಧೆ:ಜ.18ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಎಲ್‌ಕೆಜಿ ಮತ್ತು ಯುಕೆಜಿ ಹಾಗೂ ಮಧ್ಯಾಹ್ನ 2 ಗಂಟೆಗೆ 1ರಿಂದ 4ನೇ ತರಗತಿ ಮಕ್ಕಳಿಗೆ ಸ್ಪರ್ಧೆ ನಡೆಯಲಿದೆ. ಸಂಜೆ 4 ಗಂಟೆಗೆ ದಂಪತಿಗಳ ಫ್ಯಾಷನ್ ಶೋ ಜರುಗಲಿದ್ದು, ಭಾರತೀಯ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಿಜೇತರಿಗೆ ಬಹುಮಾನ ಮತ್ತು ಭಾಗವಹಿಸಿದವರೆಲ್ಲರಿಗೂ ಉಡುಗೊರೆ ನೀಡಲಾಗುತ್ತದೆ.
ಕೋಟ್......ರಾಮೋತ್ಸವ ಸಮಾಜದಲ್ಲಿ ಆರೋಗ್ಯ, ಸಹಕಾರ, ಬಾಂಧವ್ಯ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸಲಿದೆ. ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಸಾಂಸ್ಕೃತಿಕ ಮತ್ತು ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಮಕ್ಕಳ ಆದಿಯಾಗಿ ವಯೋವೃದ್ಧರಿಗೂ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಕಲ್ಪಿಸಿಸುತ್ತಿದ್ದೇವೆ.
-ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರಕೋಟ್ .............
ಕ್ರೀಡೆಗಳು ಯುವಕರಲ್ಲಿ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ವೃದ್ಧಿಸುವುದರೊಂದಿಗೆ ಶಿಸ್ತು ಹಾಗೂ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಇಂತಹ ಕ್ರೀಡೆಗಳನ್ನು ವಿಶೇಷವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಲ್ಲಿ ಕ್ರೀಡೆಗಳ ಬಗ್ಗೆ ಆಸಕ್ತಿ ಹೆಚ್ಚಿಸಲು ಕ್ರೀಡಾ ಪ್ರತಿಭೆಗಳನ್ನು ಹೊರತರಲು ವೇದಿಕೆಯಾಗಲಿವೆ.- ಕೆ.ರಾಜು, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
12ಕೆಆರ್ ಎಂಎನ್ 1,2,3,4,5,6,7.ಜೆಪಿಜಿ1.ಯೋಗಾಸನ
2.ಸ್ಥಳದಲ್ಲೇ ಚಿತ್ರ ಬಿಡುವ ಸ್ಪರ್ಧೆ3.ಮ್ಯಾರಥಾನ್
4.ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ5.ಈಜು ಸ್ಪರ್ಧೆ
6.ಫ್ಯಾನ್ಸಿ ಡ್ರೆಸ್ ಸ್ಪರ್ಧೆ7.ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.
8.ಕೆ.ರಾಜು, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ