ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಲೆನಾಡು ತಮಿಳು ಯುವ ಸಂಘ ಜ.10 ಮತ್ತು 11ರಂದು ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಕುಮರೇಶ್ ತಿಳಿಸಿದರು.

ಶಿವಮೊಗ್ಗ: ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಲೆನಾಡು ತಮಿಳು ಯುವ ಸಂಘ ಜ.10 ಮತ್ತು 11ರಂದು ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಕುಮರೇಶ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.10ರಂದು ಬೆಳಗ್ಗೆ 7 ಗಂಟೆಯಿಂದ ನಗರದ ಎನ್‌ಇಎಸ್ ಮೈದಾನದಲ್ಲಿ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಜ.11ರಂದು ಬೆಳಗ್ಗೆ 8 ರಿಂದ ಆಲ್ಕೊಳದ ಶ್ರೀ ಅಗಮುಡಿ ಸಮುದಾಯ ಭವನದಲ್ಲಿ ಸಾಮೂಹಿಕ ಪೊಂಗಲ್ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ರಂಗೋಲಿ ಸ್ಪರ್ಧೆ, 10 ಗಂಟೆಯಿಂದ ಮಕ್ಕಳಿಗೆ ಆಟದ ಸ್ಪರ್ಧೆಗಳು ನಡೆಯಲಿವೆ. 11 ಗಂಟೆಯಿಂದ ಯುವಕ-ಯುವತಿಯರಿಗೆ ಮಡಿಕೆ ಒಡೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.ಜ.11ರಂದು ಸಂಜೆ 5 ಗಂಟೆಗೆ ಮಕ್ಕಳಿಂದ ನೃತ್ಯ ಪ್ರದರ್ಶನ ಬಳಿಕ ವಿದುಷಿ ಬಿ.ಕೆ.ವಿಜಯಲಕ್ಷ್ಮೀ ಮತ್ತು ವೃಂದದವರಿಂದ ನೃತ್ಯ ಪ್ರದರ್ಶನ ಹಾಗೂ ಪಂಚವೀಣಾವಾದನ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 7ಕ್ಕೆ ನಟನಂ ಬಾಲ್ಯನಾಟ್ಯ ಕೇಂದ್ರದ ವಿದುಷಿ ಜೀವಿತ ಶಿವಕುಮಾರ್, ಪ್ರೀತಿ ತನ್ನೆರಸು, ವಿಶಾರದೆ ಕೆ.ಕೆ.ಮಧುಮಿತಾ, ಕು.ಕೃತಿಕಾ, ಕೃಷ್ಣಮೂರ್ತಿ ಅವರ ತಂಡದಿಂದ ನೃತ್ಯ ಕಾರ್ಯಕ್ರಮವಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ ಅಲ್ಲದೆ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮೊದಲಾದ ಗಣ್ಯರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಮನೋಹರ್, ಎಸ್.ಕೃಷ್ಣಮೂರ್ತಿ, ಅಧ್ಯಕ್ಷ ಸಂದೀಪ್.ಎಸ್.ಆರ್, ಪ್ರಮುಖರಾದ ಆರ್.ಶಿವಕುಮಾರ್, ಸಿ.ರಮೇಶ್, ಎಸ್.ಶಬರೀಶ್, ಕೆ.ಎಸ್.ಮಹೇಶ್ , ರಮೇಶ್.ಆರ್, ಎಸ್.ನಟರಾಜ್, ಸುರೇಶ್, ನಿತಿನ್ ಮೊದಲಾದವರಿದ್ದರು.