ಸಾರಾಂಶ
ಕೊಪ್ಪಳ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ತಿಂಥಣಿಯಲ್ಲಿ ಹಾಲುಮತದ ಸಂಸ್ಕೃತಿ ವೈಭವ ಜ.12ರಿಂದ 14ರವರೆಗೆ ಸಂಭ್ರಮದಿಂದ ನಡೆಯಲಿದೆ ಎಂದು ಜಿಲ್ಲೆಯ ಹಾಲುಮತ ಸಮಾಜದ ಮುಖಂಡ ಹಾಗೂ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಹೇಳಿದರು.
ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಾಹಿತಿ ನೀಡಿದರು.ಜ.11ರಂದು ಸಂಜೆ 7.30ಕ್ಕೆ ಭಂಡಾರ, ಡೊಳ್ಳು, ಕಂಬಳಿ ಪೂಜೆ ನಡೆಯಲಿದೆ. ಹಾಲುಮತ ಸಾಹಿತ್ಯ ಪ್ರಥಮ ಕಮ್ಮಟ ನಡೆಯಲಿದೆ. ಜ.12ರಂದು ಬೆಳಗ್ಗೆ 7ಕ್ಕೆ ಹೊಳೆಪೂಜೆ, ಪಲ್ಲಕ್ಕಿಯಲ್ಲಿ ಮೆರವಣಿಗೆ, ಅಭಿಷೇಕ, 11 ಗಂಟೆಗೆ ಹಾಲುಮತ ಧರ್ಮ ಧ್ವಜಾರೋಹಣ, ಸಾವಯವ ಕೃಷಿ ಉತ್ಪನ್ನ ಮಳಿಗೆ, ಉಣ್ಣೆ ಉತ್ಪನ್ನ ಮಳಿಗೆ, ಹಾಲುಮತ ಸಾಹಿತ್ಯ ಮಳಿಗೆ, ಉಚಿತ ನೇತ್ರ ತಪಾಸಣೆ, ಚಿಕತ್ಸಾ ಶಿಬಿರ ನಡೆಯಲಿದೆ.
ಮಧ್ಯಾಹ್ನ 12ಕ್ಕೆ ಯುವಜನ ಸಮಾವೇಶ ನಡೆಯಲಿದೆ.ಜ.13ರಂದು ಸಹಸ್ರ ಹೊನ್ನವರೆ ಪುಷ್ಪಾರ್ಚನೆ, ಭಕ್ತರಿಂದ ಭಂಡಾರ, ಮಡಿ ಉಣ್ಣೆ ಅರ್ಪಣೆ, ಪ್ರಶಸ್ತಿ ಪುರಸ್ಕಾರ, ಟಗರುಗಳ ಕಾಳಗ ನಡೆಯಲಿದೆ. ವಿವಿಧ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದಾರೆ. ಜ.13ರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಸತೀಶ ಜಾರಕಿಹೊಳೆ ಸೇರಿದಂತೆ ವಿವಿಧ ಸಚಿವದ್ವರಯರು ವಿವಿಧ ಪಕ್ಷಗಳ ಮುಖಂಡರು ಮಾಜಿ ಸಚಿವರುಗಳು, ಶಾಸಕರುಗಳು ಪಾಲ್ಗೊಳ್ಳಲಿದ್ದಾರೆ.
ಇದೊಂದು ಪಕ್ಷಾತೀತ, ಸರ್ವಧರ್ಮಗಳ ಒಳಗೊಂಡ ಉತ್ಸವ ಇದಾಗಿರಲಿದೆ.ಹಾಲುಮತ ಸಮಾಜದ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಸಂಸ್ಕೃತಿ ಉಳಿಸಿ, ಬೆಳೆಸುವ ಉತ್ಸವವಾಗಿದೆ. ಇಲ್ಲಿ ಕೇವಲ ಒಂದೇ ಸಮಾಜದ ಮುಖಂಡರು ಇರುವುದಿಲ್ಲ. ಸರ್ವರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಕೊಪ್ಪಳ ಜಿಲ್ಲೆಯಿಂದ 10-15 ಸಾವಿರ ಜನರು ಭಾಗವಹಿಸಲಿದ್ದಾರೆ.
ಹಾಲಮತ ಸಂಸ್ಕೃತಿ ವೈಭವದ ಮೂರು ದಿನಗಳ ಕಾಲವೂ ಹೊರಗಿನಿಂದ ಬರುವವರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಉಚಿತವಾಗಿಯೇ ಇರುತ್ತದೆ. ಹಾಗೆಯೇ ಪ್ರಸಾದ ವ್ಯವಸ್ಥೆಯೂ ಇರುತ್ತದೆ.ಸಮಾಜದ ಮುಖಂಡರಾದ ಜಡಿಯಪ್ಪ ಬಂಗಾಳಿ, ವೀರನಗೌಡ ಬಳೋಟಗಿ, ವಿರುಪಾಕ್ಷಪ್ಪ ಮೋರನಾಳ, ರಾಮಣ್ಣ ಹದ್ದಿನ್ ಸೇರಿ ಇತರರು ಇದ್ದರು.