ಪ್ರತಿಭಾ ಕಾರಂಜಿಯಿಂದ ಸಾಂಸ್ಕೃತಿಕ ಸಾಕ್ಷರತೆ ಹೆಚ್ಚಿದೆ: ಶಾಸಕ ಆನಂದ

| Published : Dec 07 2024, 12:30 AM IST

ಪ್ರತಿಭಾ ಕಾರಂಜಿಯಿಂದ ಸಾಂಸ್ಕೃತಿಕ ಸಾಕ್ಷರತೆ ಹೆಚ್ಚಿದೆ: ಶಾಸಕ ಆನಂದ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಪ್ರತಿಭಾ ಕಾರಂಜಿ ಮೂಲಕ ಸರ್ವರೂ ಸಮಾನರು ಎಂಬ ಮನೋಭಾವ ಹೊಂದಿ ಮಕ್ಕಳು ಸ್ನೇಹ, ಪ್ರೀತಿ ವಿಶ್ವಾಸ ಒಗ್ಗಟ್ಟಿನ ಗುಣಗಳನ್ನು ಕಲಿಯುತ್ತಾರೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಬೀರೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಹಿರಿಯ-ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ

ಕನ್ನಡಪ್ರಭ ವಾರ್ತೆ, ಕಡೂರು

ಪ್ರತಿಭಾ ಕಾರಂಜಿ ಮೂಲಕ ಸರ್ವರೂ ಸಮಾನರು ಎಂಬ ಮನೋಭಾವ ಹೊಂದಿ ಮಕ್ಕಳು ಸ್ನೇಹ, ಪ್ರೀತಿ ವಿಶ್ವಾಸ ಒಗ್ಗಟ್ಟಿನ ಗುಣಗಳನ್ನು ಕಲಿಯುತ್ತಾರೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಶುಕ್ರವಾರ ಕಡೂರು ಪಟ್ಟಣದ ಪರಿವರ್ತನ ಇನ್ನೋವೇಟಿವ್ ಪಬ್ಲಿಕ್ ಸ್ಕೂಲ್’ನಲ್ಲಿ ನಡೆದ ಬೀರೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗಳಲ್ಲಿ ನಡೆಯುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳ ನೈಜ ಪ್ರತಿಭೆಗಳ ಅನಾವರಣದ ಜೊತೆಗೆ ಈ ನಾಡಿನ ಸಾಂಸ್ಕೃತಿಕ ಸಾಕ್ಷರತೆ ಹೆಚ್ಚುತ್ತಿದೆ. ಅಲ್ಲದೆ ಅವರಲ್ಲಿರುವ ನೈಜ ಪ್ರತಿಭೆ ಹೊರಹಾಕಲು ಉತ್ತಮ ವೇದಿಕೆಯಾಗಿದೆ. ಸರ್ಕಾರ ಇಂತಹ ಶೈಕ್ಷಣಿಕ ಕಾರ್ಯಕ್ರಮವನ್ನು ಮಕ್ಕಳು, ಪೋಷಕರು ಸದುಪಯೋಗಪಡಿಸಿಕೊಂಡರೆ ಸಾಕಾರವಾಗುತ್ತದೆ ಇದರಲ್ಲಿ ಶಿಕ್ಷಕರು, ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿಗಳ ಹೆಚ್ಚಿನ ಪರಿಶ್ರಮ ಇರುತ್ತದೆ ಎಂದರು.

ಹಾಸ್ಟೆಲ್ ವ್ಯವಸ್ಥೆಯಿಂದ ಸರ್ಕಾರದ ಮೊರಾರ್ಜಿ ವಸತಿ ಶಾಲೆಗಳು ಉತ್ತಮ ಫಲಿತಾಂಶ ನೀಡುತ್ತಿದ್ದು ಅಲ್ಲಿ ಕಲಿಯುವ ಮಕ್ಕಳಿಗೆ ಸರ್ಕಾರ ಎಲ್ಲ ರೀತಿಯ ಸೌಕರ್ಯ ನೀಡುತ್ತಿದೆ. ಉತ್ತಮ ವಸತಿ, ಶಿಕ್ಷಕರು, ಗ್ರಂಥಾಲಯ, ಆಟದ ಮೈದಾನ ಸೇರಿದಂತೆ ಉತ್ತಮ ಪರಿಸರ ಕಾಣಲು ಸಾಧ್ಯ ಇರುವುದರಿಂದ ಶೈಕ್ಷಣಿಕವಾಗಿ ಬಹಳಷ್ಟು ಬದಲಾವಣೆಯಾಗುತ್ತಿದೆ ಎಂದರು.ಬೀರೂರು ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಕಾರಂಜಿ ಯಲ್ಲಿಯೇ ಅರ್ಥ ಅಡಗಿದೆ. ಉತ್ತಮ ಪ್ರತಿಭೆ ಉಳ್ಳವರು ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಮಕ್ಕಳು ಕಲಿಕೆ ಜೊತೆಗೆ ಎ.ಪಿ.ಜೆ.ಅಬ್ದುಲ್ ಕಲಾಂ, ವಿವೇಕಾನಂದ ಇಂತವರ ಜೀವನ ಚರಿತ್ರೆ ಓದುವ ಮೂಲಕ ತಮ್ಮ ಜೀವನದಲ್ಲಿ ಅವರ ವ್ಕಕ್ತಿತ್ವ ಆಳವಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. ಶಾಲೆ ಆಡಳಿತ ಮಂಡಳಿ ಮುಖ್ಯಸ್ಥ ತೇಜಸ್ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮ ಈ ಭಾರಿ ನಮ್ಮ ಶಾಲೆಗೆ ನೀಡಿರುವುದು ಸಂತೋಷವಾಗಿದ್ದು ಯಾವುದೇ ಸಮಸ್ಯೆ ಇಲ್ಲದಂತೆ ಶಾಲೆಯಿಂದ ನಡೆಸಿಕೊಡುತ್ತಿದ್ದೇವೆ. ಮಕ್ಕಳ ಪ್ರತಿಭೆ ಯನ್ನು ತೀರ್ಪುಗಾರರು ಉತ್ತಮವಾಗಿ ನೀಡಿದ್ದು, ಮಕ್ಕಳು ಸಾಧನೆ ಮಾಡುವ ಮೂಲಕ ಯಶಸ್ವಿಯಾಗಲಿ ಎಂದರು.ಮುಖ್ಯ ಶಿಕ್ಷಕ ನವೀನ್ ಬಾಬು ಮಾತನಾಡಿ, ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಸುಮಾರು 400ಕ್ಕೂ ಹೆಚ್ಚಿನ ಮಕ್ಕಳು ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಉತ್ತಮ ಪ್ರದರ್ಶನ ನೀಡಿರುವವರನ್ನು ಆಯ್ಕೆ ಮಾಡಲಾಗಿದೆ ಎಂದರು. ಮುಖ್ಯಸ್ಥ ರಾಕೇಶ್ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರದ ಇಂತಹ ಕಾರ್ಯಕ್ರಮ ನಮ್ಮ ಸಂಸ್ಥೆಯ ಬೆಳವಣಿಗೆ ಹಾಗೂ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪೂರಕ ಎಂದರು.ಗುಮ್ಮನಹಳ್ಳಿ ಅಶೋಕ್, ಜಿಲ್ಲಾ ಶಿಕ್ಷಕ ಸಂಘದ ಬಿ.ಜಿ. ಜಗದೀಶ್, ಬೈರೇಗೌಡ ಮತ್ತು ಸಮನ್ವಯ ಅಧಿಕಾರಿ ಶೇಖರಪ್ಪ, ಶಿಕ್ಷಕ ಸಂಘಟನೆಯ ಗೀತಾ, ಕವಿತಾ, ಅನಂತಪ್ಪ, ಯಮುನಾ, ನಿಂಗಪ್ಪ ಸೇರಿದಂತೆ ಬೀರೂರು ಸೈಕ್ಷಣಿಕ ವಲಯದ 16 ಕ್ಲಸ್ಟರ್ ಗಳ ಮಕ್ಕಳು ಶಿಕ್ಷಕರು ಭಾಗವಹಿಸಿದ್ದರು.6ಕೆಕೆಡಿಯು1.

ಕಡೂರು ತಾಲೂಕು ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಬೀರೂರು ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ಉದ್ಘಾಟಿಸಿದರು. ಶಾಸಕ ಕೆ.ಎಸ್.ಆನಂದ್,ರಾಕೇಶ್,ತೇಜಸ್, ಜಗದೀಶ್, ಬೈರೇಗೌಡ ಮತ್ತಿರರು ಇದ್ದರು.