ಹೊಸಕೋಟೆ: ಮಕರ ಸಂಕ್ರಾಂತಿ ನಮ್ಮ ಸಂಸ್ಕೃತಿ ಸಂಪ್ರದಾಯ ಅನಾವರಣದ ಪ್ರತೀಕವಾಗಿದ್ದು ಸಂಭ್ರಮ ಸಡಗರದಿಂದ ಆಚರಿಸುವುದು ವಾಡಿಕೆ. ನಗರದಲ್ಲಿ ಸುಮರು 30 ವರ್ಷಗಳಿಂದ ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಡಾ.ಜಯರಾಜ್ ಸಾವಿರಾರು ರಾಸುಗಳಿಗೆ ಪಶು ಆಹಾರ ವಿತರಿಸಿ ವಿಭಿನ್ನವಾಗಿ ಆಚರಿಸುವ ಸಂಪ್ರದಾಯ ರೂಢಿಸಿಕೊಂಡು ಬಂದಿರುವುದು ಪ್ರಂಶಸನೀಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಚನ್ನಭೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ಜನನಿ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ 30ನೇ ವರ್ಷದ ಸಂಕ್ರಾಂತಿ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಜನನಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಯರಾಜ್ ಮಾತನಾಡಿ, ನಾನು ಬಾಲ್ಯದಿಂದಲೂ ಗೋವುಗಳನ್ನು ಪ್ರೀತಿಸುತ್ತೇನೆ. ನನ್ನ ತಾಯಿ ಗೋವುಗಳನ್ನು ಸಾಕುತ್ತಿದ್ದರು. ಅವರ ಹೆಸರಿನಲ್ಲಿ ಪ್ರತಿ ವರ್ಷ ಸಾವಿರಾರು ರಾಸುಗಳಿಗೆ ಬೂಸ ಮೂಟೆ, ಕಬ್ಬು ವಿತರಣೆ ಜೊತೆಗೆ ಉತ್ತಮ ರಾಸಗುಳಿಗೆ ಬಹುಮಾನ ವಿತರಿಸುತ್ತಿದ್ದೇನೆ ಎಂದರು.

ತಾರಾ ಮೆರುಗು: ಸಂಕ್ರಾಂತಿ ಸಂಭ್ರಮಕ್ಕೆ “ಸು ಫ್ರಮ್ ಸೋ” ಚಿತ್ರದ ನಾಯಕ ರವಿ, ನಿರ್ದೇಶಕ ಜೆ.ಪಿ.ತುಮಿನಾಡ್ ಆಗಮಿಸಿದ್ದರು. ಯಜಮಾನ ಚಿತ್ರದ ಲಕ್ಷ್ಮೀ ಸೇರಿದಂತೆ ವಿವಿಧ ಕಲಾವಿದರನ್ನು ಹಾಗೂ ಯೋಗ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹೊಸಕೋಟೆ ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಭೈರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯರಾದ ಸುಬ್ಬರಾಜು, ಕೊರಳೂರು ಸುರೇಶ್, ಮಾಜಿ ಅಧ್ಯಕ ವಿಜಯ್ ಕುಮಾರ್, ಸಮಾಜ ಸೇವಕ ವಿ.ವಿ.ಸದಾನಂದ, ಟೌನ್ ಬ್ಯಾಂಕ್ ಅಧ್ಯಕ್ಷ ಬಲ್ಬ್ ಮಂಜು, ಯುವ ಮುಖಂಡ ಸಂದೀಪ್ ಹಾಜರಿದ್ದರು.

(ಚೆಂದದ ಒಂದು ಫೋಟೋ ಮಾತ್ರ ಬಳಸಿ)

ಫೋಟೋ: 16 ಹೆಚ್‌ಎಸ್‌ಕೆ 2 ಮತ್ತು 3

2: ಹೊಸಕೋಟೆಯ ಚನ್ನಭೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ಜನನಿ ಚಾರಿಟಬಲ್ ಟ್ರಸ್ಟ್‌ ಹಮ್ಮಿಕೊಂಡಿದ್ದ ಸಂಕ್ರಾಂತಿ ಹಬ್ಬದ ಕಾರ್ಯಕ್ರಮದಲ್ಲಿ ಉತ್ತಮ ರಾಸುಗಳಿಗೆ ಶಾಸಕ ಶರತ್ ಬಚ್ಚೇಗೌಡ ಬಹುಮಾನ ವಿತರಿಸಿದರು.

3: ಹೊಸಕೋಟೆಯ ಚನ್ನಭೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಡಾ.ಸಿ.ಜಯರಾಜ್ ಅವರ ಸಂಕ್ರಾಂತಿ ಹಬ್ಬದ ಕಾರ್ಯಕ್ರಮದಲ್ಲಿ ರಾಸುಗಳಿಗೆ ಬೂಸಾ ಮೂಟೆಗಳನ್ನು ಶಾಸಕ ಶರತ್ ಬಚ್ಚೇಗೌಡ ವಿತರಿಸಿದರು.