ಸಾರಾಂಶ
ಕನ್ನಡಪ್ರಭ ವಾರ್ತೆ ನೆಲಮಂಗಲ
ಸಂಸ್ಕೃತಿ ಮತ್ತು ಸಂಸ್ಕಾರ ಇದ್ದರೇ ಮಾತ್ರ ಮಾನವನಾಗಲು ಸಾಧ್ಯ. ಆಕೃತಿಯಲ್ಲಿ ಮಾವನನಾದರೇ ಸಾಲದು ಕೃತಿಯಲ್ಲಿ ಮಾನವನಾಗಬೇಕು. ನಾಡಿನಲ್ಲಿ ಜೀವನ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ಸಂಸ್ಕೃತಿ ಪ್ರತಿರೂಪವಾಗಿರಬೇಕು ಎಂದು ಶಿವಗಂಗೆಯ ಮೇಲಣಗವಿ ಮಠದ ಶ್ರೀ ಡಾ.ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಕನ್ನಡ ಸಾಂಸ್ಕೃತಿಕ ರಂಗ ಆಯೋಜಿಸಿದ್ದ ದಶಮಾನೋತ್ಸವ, ಸಾಂಸ್ಕೃತಿಕ ಸೌರಭ, ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಂಸ್ಕೃತಿ ಮನುಷ್ಯನ ಒಂದು ಅವಿಭಾಜ್ಯ ಅಂಗ. ಪುಷ್ಪದ ಪರಿಮಳ ಬಾಡುವವರೆಗೂ ಇರುತ್ತದೆ. ಸಂಸ್ಕೃತಿಯ ಪರಿಮಳ ಮನುಕುಲ ಇರುವವರೆಗೂ ಶಾಶ್ವತವಾಗಿರುತ್ತದೆ. ಮೌಲ್ಯಗಳನ್ನು ತಿಳಿದುಕೊಳ್ಳಬೇಕಿದೆ ಎಂದರು.
ಸಾಹಿತಿ ಡಾ.ಬೈಲಮಂಗಲ ರಾಮೇಗೌಡ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಬಹಳಷ್ಟು ಇತಿಹಾಸವಿದೆ. ಕನ್ನಡ ಭಾಷೆಗೆ ವಿಶೇಷ ಸ್ಥಾನವಿದ್ದು, ಅದನ್ನು ರಕ್ಷಣೆ ಮಾಡುವ ಕಾರ್ಯ ಪ್ರತಿಯೊಬ್ಬರು ಮಾಡಬೇಕಿದೆ. ಕನ್ನಡ ಎಂದರೆ ಕೇವಲ ಭಾಷೆಯಲ್ಲ, ಕನ್ನಡಿಗರ ಮಾತೃ ಸ್ವರೂಪವಾಗಿದೆ. ಕನ್ನಡದ ನಾಮಫಲಕ ಅಳವಡಿಸಿದರೆ ಕನ್ನಡ ಪ್ರೀತಿ ಹುಟ್ಟುವುದಿಲ್ಲ, ಮನದಲ್ಲಿ ನಿತ್ಯ ಕನ್ನಡಮಾತೆಯನ್ನು ಪೂಜಿಸಬೇಕು. ಯುವ ಜನತೆ ಎಚ್ಚೆತ್ತುಕೊಂಡು ಕನ್ನಡ ನಾಡು, ನುಡಿ, ಸಂಸ್ಕೃತಿ ಸೇರಿದಂತೆ ಆಚಾರ ವಿಚಾರಗಳನ್ನು ರಕ್ಷಣೆ ಮಾಡಲು ಮುಂದಾಗಬೇಕಿದೆ ಎಂದರು.ಇದೇ ವೇಳೆ ಸಾಂಸ್ಕೃತಿಕ ಸೌರಭ ಸ್ಮರಣ ಸಂಚಿಕೆಯನ್ನು ಸಾಹಿತಿ ಡಾ.ಬೈಲಮಂಗಲ ರಾಮೇಗೌಡರು, ಕವಿ ಬ್ಯಾಡನೂರು ವೀರಭದ್ರಪ್ಪ ಶಿವಶರಣ ರಚಿತ ಭಾವಸುಗ್ಗಿ ಕವನ ಸಂಕಲನವನ್ನು ಸಾಹಿತಿ ಡಾ.ಚೌಡಯ್ಯ ಬಿಡುಗಡೆ ಮಾಡಿದರು.
ಸಾಹಿತ್ಯ ಕ್ಷೇತ್ರದ ಎಂ.ವಿ.ನೆಗಳೂರು, ದಾಸಸಾಹಿತ್ಯ ಅನಂತರಾವ್, ರಂಗಕಲೆ ಎನ್.ಸಂಪತ್, ಸಹಕಾರ ಕ್ಷೇತ್ರ ಜಿ.ಲೋಕೇಶ್, ಕನ್ನಡ ಪರ ಹೋರಾಟ ಬಿ.ನರಸಿಂಹಯ್ಯ, ಶಿಕ್ಷಣ ಕೇಂದ್ರ ಗೌಹರ್‌ಜಾನ್, ಸಾಮಾಜಿಕ ಕ್ಷೇತ್ರ ಮಂಗಳಮ್ಮ, ಪೌರಕಾರ್ಮಿಕ ಮಹಿಳೆ ಕೃಷ್ಣಮ್ಮ, ವಿದ್ಯಾರ್ಥಿ ಹೆಚ್.ಮನು, ಮೋನಿಕಾ ಅವರಿಗೆ ಕನ್ನಡ ಕಟ್ಟಾಳು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ.ಸಿದ್ದರಾಜು, ಬಿಇಒ ಎಂ.ಹೆಚ್.ತಿಮ್ಮಯ್ಯ, ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷೆ ಬಂಗ್ಲೆ ಮಲ್ಲಿಕಾರ್ಜುನ್, ಸಾಹಿತಿ ಡಾ.ಚೌಡಯ್ಯ, ವೆಂಕಟೇಶ್ ಚೌಥಾಯಿ, ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌದರಿ, ನಗರಸಭೆ ಸದಸ್ಯ ಶಿವಕುಮಾರ್, ಹೆಚ್ಚುವರಿ ಸದಸ್ಯ ರಾಮಮೂರ್ತಿ, ಕನಕ ಬ್ಯಾಂಕ್ ಅಧ್ಯಕ್ಷ ಭಕ್ತನಪಾಳ್ಯ ಲೋಕೇಶ್, ಉಪಾಧ್ಯಕ್ಷ ಲೋಕೇಶ್, ಕನ್ನಡ ಸಾಂಸ್ಕೃತಿ ರಂಗದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಕಾರ್ಯದರ್ಶಿ ಪಿ.ಗಿರಿಧರ್, ವಿಜಯ್ ವೀಳ್ಯದೆಲೆ, ಖಜಾಂಚಿ ಶರಣಬಸಪ್ಪಗೌಡ, ಸಲಹೆಗಾರ ಚಿಕ್ಕರಾಮಯ್ಯ, ನಾಗೇಶ್, ಸೌಮ್ಯ, ಸಂಚಾಲಕ ಸಂಪತ್, ಶೋಭಾಶಿವಲಿಂಗಯ್ಯ, ಸುಮಿತ್ರಾ, ರಾಜೇಶ್ವರಿ, ಹೇಮಚಂದ್ರ, ಸದಸ್ಯ ಬಾಲಾಜಿ, ಹನುಮಂತು, ಶಶಿಕಲಾ, ಪವಿತ್ರ ಇತರರು ಉಪಸ್ಥಿತರಿದರು.