ಕಡೂರುಮಕ್ಕಳಿಗೆ ದೇಶ ಪ್ರೇಮವನ್ನು ಪ್ರಾಥಮಿಕ ಹಂತದಲ್ಲಿಯೇ ಶಾಲೆಗಳಲ್ಲಿ ಕಲಿಸಬೇಕು ಈ ನಿಟ್ಟಿನಲ್ಲಿ ಕಡೂರಿನ ವಿಶ್ವಭಾರತಿ ಶಾಲೆ ಮುಂಚೂಣಿಯಲ್ಲಿದೆ ಎಂದು ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.

ವಿಶ್ವಭಾರತಿ ವಿದ್ಯಾಲಯದಲ್ಲಿ 42 ನೇ ಸಂವತ್ಸರೋತ್ಸವ, ಸೇವಾದಿನ, ರೂವಾರಿಗಳ ಸಂಸ್ಮರಣೆ

ಕನ್ನಡಪ್ರಭ ವಾರ್ತೆ, ಕಡೂರು

ಮಕ್ಕಳಿಗೆ ದೇಶ ಪ್ರೇಮವನ್ನು ಪ್ರಾಥಮಿಕ ಹಂತದಲ್ಲಿಯೇ ಶಾಲೆಗಳಲ್ಲಿ ಕಲಿಸಬೇಕು ಈ ನಿಟ್ಟಿನಲ್ಲಿ ಕಡೂರಿನ ವಿಶ್ವಭಾರತಿ ಶಾಲೆ ಮುಂಚೂಣಿಯಲ್ಲಿದೆ ಎಂದು ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು. ಪಟ್ಟಣದ ಕಿರಾಣಿ ಲಿಂಗಪ್ಪ ವಿಶ್ವನಾಥ್ ವಿದ್ಯಾಸಂಸ್ಥೆ ವಿಶ್ವಭಾರತಿ ವಿದ್ಯಾಲಯದಲ್ಲಿ ಆಯೋಜಿಸಿದ್ದ 42 ನೇ ಸಂವತ್ಸ ರೋತ್ಸವ ಹಾಗೂ ಸೇವಾದಿನ ಮತ್ತು ರೂವಾರಿಗಳ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.ದೇಶವನ್ನು ಸುರಕ್ಷಿತವಾಗಿ ಕಾಪಾಡಲು ಸೇನೆ ಬೇಕು. ಸೇನೆಗೆ ಸೇರಬೇಕೆಂಬ ಪ್ರೇರಣೆ ಮಕ್ಕಳಲ್ಲಿ ಬರಬೇಕು. ದೇಶಾಭಿಮಾನ, ದೇಶಪ್ರೇಮ ಇದ್ದವರು ಸೇನೆಗೆ ಸೇರ್ಪಡೆಯಾಗುತ್ತಾರೆ. ದೇಶ ಸೇವೆ ಮಾಡುವುದರಿಂದ ಭದ್ರವಾದ ದೇಶ ಕಟ್ಟಲು ಸಾಧ್ಯವಿದೆ. ಇದಕ್ಕೆ ಯುವಕರ ಪಾತ್ರ ಮುಖ್ಯವಾಗಿದೆ. ದೇಶಕ್ಕಾಗಿ ತ್ಯಾಗ ಮಾಡಿದವರು ಸಾವಿರಾರು ಜನರ ಜೀವನ ಚರಿತ್ರೆಯನ್ನು ಓದಿದ್ದೇವೆ ಅವರ ಆದರ್ಶಗಳು ನಮಗೆಲ್ಲಾ ಪ್ರೇರಣೆಯಾಗಬೇಕು ಎಂದರು. ವಿಶ್ವಭಾರತಿ ಶಾಲೆ ಅನೇಕರ ಶ್ರಮದಿಂದ ಕಟ್ಟಲ್ಪಟ್ಟಿದೆ.ಈ ಶಾಲೆ ಸಮಗ್ರ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ಶ್ರಮಿಸಲಿದ್ದು, ತಾವು ಸಹ ಕೈಜೊಡಿಸುತ್ತೇವೆ ಎಂದರು. ಈ ಶಾಲೆಯಲ್ಲಿ ಕಲಿತು ಅತ್ಯುತ್ತಮ ಸೇವೆ ನೀಡುತ್ತಿರುವ ಅನೇಕರು ಇದ್ದಾರೆ ಅವರನ್ನು ಸಂಸ್ಥೆ ಗುರುತಿಸಿ ಇಂದು ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ಭೂ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ರಾಜು ಮಾತನಾಡಿ, 39 ವರ್ಷಗಳ ಕಾಲ ಭಾರತದ ಸೇನೆಯಲ್ಲಿ ಕಾರ್ಯನಿರ್ವಹಿಸಿ ದೇಶ ಕಾಪಾಡಿದ್ದೇನೆ. ಪ್ರತಿಯೊಬ್ಬ ಭಾರತೀಯ ನಿಗೂ ದೇಶದ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು, ವಿದ್ಯಾ ಸಂಸ್ಥೆಗಳು ಶಾಲಾ- ಕಾಲೇಜುಗಳ ಪಾತ್ರ ಮುಖ್ಯವಾಗಿದೆ. ಶಿಕ್ಷಕರು ಮಕ್ಕಳಿಗೆ ದೇಶದ, ಸೈನಿಕರ ಬಗ್ಗೆ ಮಾಹಿತಿ ನೀಡುತ್ತಿರಬೇಕು ‘ಅಗ್ನಿವೀರ’ಯೋಜನೆಯನ್ನು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಿ ಎಂದು ಕರೆ ನೀಡಿದರು.

ಬೆಂಗಳೂರಿನ ಹಿಂದೂ ಸೇವಾ ಪ್ರತಿಷ್ಠಾನ ನಿರ್ದೇಶಕ ಸುರೇಶ್ ಜೀ ಸೇವಾದಿನದ ಮಹತ್ವ ಕುರಿತು ಮಾತನಾಡಿದರು. ಹಿಂದೂ ಸೇವಾ ಪ್ರತಿಷ್ಠಾನ ಬೆಂಗಳೂರು ನಿಕಟ ಪೂರ್ವ ನಿರ್ದೇಶಕ ಶ್ರೀಧರ್ ಸಾಗರಜಿ ಮತ್ತು ಶಿವಮೊಗ್ಗ ಯೋಗ ವಿಸ್ಮಯ ಟ್ರಸ್ಟ್ನಿನ ಸಂಸ್ಥಾಪಕ ಅನಂತಜಿ ರಾಷ್ಟ್ರೀ ಯ ಹಿಂದೂ ಸೇವಾ ಪ್ರತಿಷ್ಠಾನದ ಅಜಿತ್ಜಿ ಜೀವನ ಕುರಿತು ಮಾತನಾಡಿದರು.

ಸೇವಾ ದಿನದ ಪ್ರಯುಕ್ತ ಬೆಳಗ್ಗೆ ಶಾಲೆ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು ಡಾ.ಉಮೇಶ್ ಕೀಲು ಮೂಳೆ ತಜ್ಞರು ಹಾಸನ ಮತ್ತು ಡಾ.ಎಂ.ಎಸ್.ರಾಕೇಶ್ ಹೃದಯ ಮತ್ತು ಮಧುಮೇಹ ತಜ್ಞರು ಎಂ.ಆರ್.ಹೆಲ್ತ್ ಕೇರ್ ಕಡೂರು ಇವರಿಂದ ರೋಗಿಗಳ ತಪಾಸಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷೆ ಕವಿತಾ ಬೆಳ್ಳಿಪ್ರಕಾಶ್ ವಹಿಸಿ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ಭೀಮಪ್ಪ, ಸನ್ಮಾನಿತರಾದ ಬೆಂಕಿ ಶೇಖರಪ್ಪ, ನಿವೃತ್ತ ಶಿಕ್ಷಕ ಯಗಟಿ ನಾಗರಾಜಪ್ಪ, ಡಾ.ಪ್ರದೀಪ್,ಅಭಿಷೇಕ್ ಮತ್ತಿತರರು ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್, ನಿರ್ದೇಶಕರಾದ ನಿರಂಜನ ಚಂದ್ರಶೇಖರ್, ಅಡಕೆ ಚಂದ್ರು, ಹರಿಪ್ರಸಾದ್, ಆರ್ ಎಸ್ಎಸ್ ಮಂಜಣ್ಣ, ಸತ್ಯವತಿ ಮತ್ತು ಶಿಕ್ಷಕರಾದ ಪ್ರದೀಪ್, ಶಶಿಧರ್, ಇಂದ್ರಮ್ಮ ಪೋಷಕರು ಹಾಗು ಮಕ್ಕಳು ಇದ್ದರು.31ಕೆಕೆಡಿಯು1.ಕಡೂರು ವಿಶ್ವಭಾರತಿ ವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಸ್ಮರಣೆ, 42 ನೇ ಸಂವತ್ಸರೋತ್ಸವ ಮತ್ತು ಸೇವಾದಿನದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬೆಳ್ಳಿಪ್ರಕಾಶ್ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿದರು.ಕವಿತಾಬೆಳ್ಳಿಪ್ರಕಾಶ್ ಸುರೇಶ್ ಜಿ,ರಾಜು ಮತ್ತಿತರರು ಇದ್ದರು.