ಸಾಮರಸ್ಯದಿಂದ ಬದುಕನ್ನು ಕಲಿಸುವುದೇ ಸಂಸ್ಕೃತಿ: ಪ್ರೊ. ಜಯದೇವ್‌

| Published : May 22 2024, 12:52 AM IST

ಸಾಮರಸ್ಯದಿಂದ ಬದುಕನ್ನು ಕಲಿಸುವುದೇ ಸಂಸ್ಕೃತಿ: ಪ್ರೊ. ಜಯದೇವ್‌
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನಲ್ಲಿ ಘನತೆಯನ್ನು ಹೆಚ್ಚಿಸಿ ಮನುಷ್ಯನನ್ನು ಮನುಷ್ಯನ್ನಾಗಿಸಿ, ಒಂದಾಗಿ ಸಾಮರಸ್ಯದಿಂದ ಬದುಕಿನ ಹಕ್ಕನ್ನು ಎತ್ತಿ ಹಿಡಿಯುವ ಮನೋಧರ್ಮವೇ ಸಂಸ್ಕೃತಿ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ. ಎಸ್. ಜಯದೇವ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮನುಷ್ಯನಲ್ಲಿ ಘನತೆಯನ್ನು ಹೆಚ್ಚಿಸಿ ಮನುಷ್ಯನನ್ನು ಮನುಷ್ಯನ್ನಾಗಿಸಿ, ಒಂದಾಗಿ ಸಾಮರಸ್ಯದಿಂದ ಬದುಕಿನ ಹಕ್ಕನ್ನು ಎತ್ತಿ ಹಿಡಿಯುವ ಮನೋಧರ್ಮವೇ ಸಂಸ್ಕೃತಿ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ. ಎಸ್. ಜಯದೇವ್ ಹೇಳಿದರು.ಜೆಎಸ್‌ಎಸ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಭಾರತ ದೇಶ ವೈವಿಧ್ಯತೆಯಲ್ಲಿ ಏಕತೆ ಹೊಂದಿದ್ದು, ನಾನಾ ಭಾಷೆಗಳು, ವಿಭಿನ್ನ ಸಂಸ್ಕೃತಿ ಹಾಸುಹೊಕ್ಕಾಗಿದೆ. ಇಂಥ ವಿಭಿನ್ನತೆಯಲ್ಲಿ ನಮ್ಮನ್ನು ಒಟ್ಟುಗೂಡಿಸಿ ಒಂದಾಗಿ ಜೀವನ ನಡೆಸುವುದನ್ನು ನಮ್ಮ ಸಂಸ್ಕೃತಿ ಕಲಿಸುತ್ತದೆ ಎಂದರು.ಪ್ರಸ್ತುತ ಸನ್ನಿವೇಶದಲ್ಲಿ ಸುಶಿಕ್ಷತರಿಂದಲೇ ಅಪಾಯಗಳು ಹೆಚ್ಚಾಗುತ್ತಿವೆ ಗ್ಯಾಟ್ ಒಪ್ಪಂದ, ಪರಿಸರ ಕಲುಷಿತ, ಯುದ್ಧಗಳು ಹೆಚ್ಚಾಗಿರುವುದೇ ಸುಶಿಕ್ಷತರಿಂದ ಇಂದು ಎಲ್ಲಾ ಶಿಕ್ಷಣ ಸಂಸ್ಥೆಗಳು ಮನಸ್ಸಿಗೆ ಬೇಕಾದ ಶಿಕ್ಷಣವನ್ನು ಕೊಡುತ್ತಿಲ್ಲ, ಇದರಿಂದಾಗಿಯೇ ಜಗತ್ತಿನಲ್ಲಿ ಅಣುಬಾಂಬ್ ತಯಾರಿಸಿ, ನಾಶಮಾಡುವಂತಹ ಅಪಾಯಗಳು ಹೆಚ್ಚುತ್ತಿವೆ ಇದು ಹೀನ ಸಂಸ್ಕ್ಥತಿಯಾಗಿದೆ. ಶಿಕ್ಷಣ ಪಡೆದ ನಾಗರೀಕರಾಗಿ:

ನನ್ನ ಬದುಕು ಎಷ್ಟು ಮುಖ್ಯವೋ ಇನ್ನೊಬ್ಬರ ಬದುಕು ಅಷ್ಟೇ ಮುಖ್ಯ ಎಂಬ ಅರಿವನ್ನು ಮೂಡಿಸುವ ಶಿಕ್ಷಣ ಅತ್ಯಗತ್ಯವಾಗಿದೆ, ಒಳಿತಗಳು ಹೆಚ್ಚಾದಾಗ ಮಾತ್ರ ಸಮಾಜ ಆರೋಗ್ಯಕರವಾಗಿರುತ್ತದೆ, ಇಲ್ಲದಿದ್ದರೆ ಕೆಡಕುಗಳು ಹೆಚ್ಚಾಗುತ್ತದೆ, ಆದ್ದರಿಂದ ಜೆಎಸ್‌ಎಸ್‌ನಂತಹ ಸಂಸ್ಥೆಗಳು ನೀಡುವಂತಹ ಒಳ್ಳೆಯ ಸಂಸ್ಕೃತಿಯ ಶಿಕ್ಷಣವನ್ನು ಪಡೆದು ಒಳ್ಳೆಯ ನಾಗರೀಕರಾಗಿ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.ಬಾಯಿ ಮಾತಿನಲ್ಲಿ ನಮ್ಮ ಸಂಸ್ಕ್ಥತಿಯ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯನ್ನು ಆಚರಿಸುವುದು ಯಾವ ಸಂಸ್ಕೃತಿ, ಸ್ವಂತಿಕೆಯಿಂದ ವಿಚಾರಗಳಿಂದ, ದೊಡ್ಡತನ, ಘನತೆ ತೆರೆದ ಮನಸ್ಸಿನಿಂದ ಬರುತ್ತದೆ, ಬಹು ಸಂಸ್ಕೃತಿಯನ್ನು ಪ್ರೀತಿಸಿದಾಗ ಮಾತ್ರ ಸಾಮರಸ್ಯದಿಂದಾಗಿ ಒಂದಾಗಿ ಬಾಳಲು ಸಾಧ್ಯ.ಭಾರತೀಯ ಸಂಸ್ಕೃತಿಗೆ ಒಳಪಟ್ಟವರೆಲ್ಲಾ ಈ ಸಂಸ್ಕೃತಿಯ ವಾರಸುದಾರರು, ವೈವಿಧ್ಯಮಯ ಸಂಸ್ಕೃತಿ ಇದ್ದಾಗ ವಿಚಾರಗಳು ವಿನಿಮಯವಾಗುತ್ತವೆ, ಬಹುತ್ವದ ಸಂಸ್ಕ್ಥತಿಯನ್ನು ಪೋಷಿಸಿ, ಅದರ ಅಂತರಾಳವನ್ನು ಅರಿತುಕೊಳ್ಳುವ ಶಿಕ್ಷಣವನ್ನು ಪಡೆಯಬೇಕಾಗಿದೆ ಎಂದರು.ಕೇವಲ ವಿದ್ಯಾವಂತರಾದರೆ ಸಾಲದು, ದಾರ್ಶನಿಕರು ಜಗತ್ತಿಗೆ ನೀಡಿರುವ ಶುಭಸಂದೇಶಗಳನ್ನು ಅರಿತಾಗ ಮಾತ್ರ ಭಾರತೀಯ ಸಂಸ್ಕೃತಿಗೆ ಅರ್ಥ ಬರಲಿದೆ, ಕ್ರೀಡಾ ಮನೋಧರ್ಮವನ್ನು ಬೆಳೆಸಿಕೊಂಡು, ಒಳ್ಳೆಯ ಸಂಸ್ಕೃತಿಯ ವಾರಸುದಾರರಾಗಿ ಬದುಕನ್ನು ಕಟ್ಟಿಕೊಳ್ಳೋಣ ಎಂದರು.ಮುಖ್ಯ ಅತಿಥಿಯಾಗಿದ್ದ ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು ತರಬೇತುದಾರ ಬಿ.ಎಂ. ರಮೇಶ್ ಮಾತನಾಡಿ, ಮಾನಸಿಕ ಮತ್ತು ದೈಹಿಕ ದೃಢತೆಗೆ ಕ್ರೀಡೆ ಮತ್ತು ಸಾಂಸ್ಕ್ಥತಿಕ ಚಟುವಟಿಕೆಗಳು ಎಷ್ಟೋ ಮುಖ್ಯವೋ ಅದೇ ರೀತಿ ಇವುಗಳಿಗೆ ಪ್ರೇರಣೆ ನೀಡುವ ಯೋಗವು ಅಷ್ಟೇ ಮುಖ್ಯವಾಗಿದೆ ಎಂದರು.ಇದರ ಮಹತ್ವವನ್ನೇ ಅರಿತೇ ಜಗತ್ತಿನ ಹೆಚ್ಚು ದೇಶಗಳು ಯೋಗ ಶಿಕ್ಷಣವನ್ನು ಅಳವಡಿಸಿಕೊಳ್ಳುತ್ತವೆ, ಜಗತ್ತಿಗೆ ಯೋಗ ಶಿಕ್ಷಣವನ್ನು ಕೊಟ್ಟ ಭಾರತವನ್ನು ಗೌರವವಾಗಿ ಕಾಣುತ್ತವೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಸಾರ್ವಜನಿಕ ಸಂಪರ್ಕಾಧಿಕಾರಿ ಆರ್. ಎಂ. ಸ್ವಾಮಿ, ವಿದ್ಯಾರ್ಥಿ ಸಂಘದ ಸುಶ್ಮಿತಾ, ಕ್ರೀಡಾ ತರಬೇತುದಾರ ಉಮೇಶ್, ಉಪನ್ಯಾಸಕಿ ಡಾ. ಸುಷ್ಮಾ ಉಪಸ್ಥಿತರಿದ್ದರು. ಇದೇ ನಾನಾ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.