ಪ್ರಿಯದರ್ಶಿನಿ ಸೊಸೈಟಿ ಪಡುಬಿದ್ರಿ ಶಾಖೆಯಲ್ಲಿ ಗ್ರಾಹಕರ ದಿನಾಚರಣೆ

| Published : Nov 11 2024, 11:46 PM IST

ಪ್ರಿಯದರ್ಶಿನಿ ಸೊಸೈಟಿ ಪಡುಬಿದ್ರಿ ಶಾಖೆಯಲ್ಲಿ ಗ್ರಾಹಕರ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಪಡುಬಿದ್ರಿ ಶಾಖೆಯಲ್ಲಿ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಸೌಲಭ್ಯಗಳಿಂದ ಗ್ರಾಹಕರು ಸ್ವಾವಲಂಬಿಗಳಾಗುತ್ತಿದ್ದು, ಗ್ರಾಹಕರು ಸಾಲ ಪಡೆದು ಸಾಲದ ಮರುಪಾವತಿಯನ್ನು ಕ್ಲಪ್ತ ಸಮಯದಲ್ಲಿ ಮಾಡಬೇಕೆಂದು ಪಡುಬಿದ್ರಿ ರೋಟರಿ ಕ್ಲಬ್‌ ಅಧ್ಯಕ್ಷ ತಸ್ನಿನ್‌ ಹೇಳಿದರು.

ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಪಡುಬಿದ್ರಿ ಶಾಖೆಯಲ್ಲಿ ಜರುಗಿದ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಚ್‌. ವಸಂತ್‌ ಬೆರ್ನಾಡ್‌ ವಹಿಸಿದ್ದರು. ಪಡುಬಿದ್ರಿ ಗ್ಲಾಮರ್ ಸ್ಲಿಪ್ ಪ್ರೊಫೆಷನಲ್ ಯೂನಿಸೆಕ್ಸ್ ಸೆಲೂನ್‌ನ ನಿಶಾ ಸಂದೇಶ್ ಸಾಲಿಯಾನ್‌, ಸೊಸೈಟಿಯ ನಿರ್ದೇಶಕರಾದ ಗಣೇಶ್‌ ದೇವಾಡಿಗ, ಪಡುಬಿದ್ರಿ ಶಾಖಾ ಪ್ರಭಾರ ಪ್ರಬಂಧಕಿ ಅಂಜಲಿ ಉಪಸ್ಥಿತರಿದ್ದರು. ಅಧ್ಯಕ್ಷ ವಸಂತ್ ಬೆರ್ನಾಡ್ ಪ್ರಸ್ತಾವನೆಗೈದರು. ಪ್ರಭಾರ ಪ್ರಬಂಧಕಿ ಅಂಜಲಿ ಸ್ವಾಗತಿಸಿದರು. ಸಿಬ್ಬಂದಿ ರಕ್ಷಿತಾ ವಂದಿಸಿದರು. ಸೊಸ್ಯೆಟಿಯ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್‌ ನಿರೂಪಿಸಿದರು.