ಗ್ರಾಹಕರ ಅಭಿವೃದ್ಧಿಯೆ ಬ್ಯಾಂಕಿನ ಗುರಿಯಾಗಲಿ

| Published : Mar 31 2024, 02:01 AM IST

ಸಾರಾಂಶ

ಇಳಕಲ್ಲ ಇಂದು ಬ್ಯಾಂಕುಗಳು ತಮ್ಮ ವ್ಯವಹಾರದ ದೃಷ್ಟಿಯಿಂದ ಕಾರ್ಯ ಮಾಡದೆ ಗ್ರಾಹಕ ಅಭಿವೃದ್ಧಿ ಹಾಗು ಅವರಿಗೆ ಉತ್ತಮ ಸೇವೆ ಕೊಡುವ ಗುರಿಯಿಂದ ಕಾರ್ಯ ಮಾಡಬೇಕು. ಇದರಿಂದ ಆ ಬ್ಯಾಂಕ್‌ ಅಭಿವೃದ್ಧಿ ಸಾಧ್ಯವಾಗುವುದು ಎಂದು ಇಳಕಲ್‌ನ ವಿಜಯ ಮಠದ ಪೀಠಾದ್ಯಕ್ಷರಾದ ಪೂಜ್ಯ ಗುರುಮಹಾಂತ ಶ್ರೀಗಳು ನುಡಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ ಇಂದು ಬ್ಯಾಂಕುಗಳು ತಮ್ಮ ವ್ಯವಹಾರದ ದೃಷ್ಟಿಯಿಂದ ಕಾರ್ಯ ಮಾಡದೆ ಗ್ರಾಹಕ ಅಭಿವೃದ್ಧಿ ಹಾಗು ಅವರಿಗೆ ಉತ್ತಮ ಸೇವೆ ಕೊಡುವ ಗುರಿಯಿಂದ ಕಾರ್ಯ ಮಾಡಬೇಕು. ಇದರಿಂದ ಆ ಬ್ಯಾಂಕ್‌ ಅಭಿವೃದ್ಧಿ ಸಾಧ್ಯವಾಗುವುದು ಎಂದು ಇಳಕಲ್‌ನ ವಿಜಯ ಮಠದ ಪೀಠಾದ್ಯಕ್ಷರಾದ ಪೂಜ್ಯ ಗುರುಮಹಾಂತ ಶ್ರೀಗಳು ನುಡಿದರು.

ಅವರು ಇಳಕಲ್ಲ ನಗರದಲ್ಲಿ ನೂತನ ತಾಳಿಕೋಟಿಯ ಭಾವಸಾರ ಕ್ಷತ್ರಿಯ ಕೋ ಆಪ್‌ರೇಟಿವ್ ಬ್ಯಾಂಕಿನ ನಾಲ್ಕನೆ ಶಾಖೆಯ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ಸಾರ್ವಜನಿಕರಿಗೆ ಆರ್ಥಿಕ ನೆರವು ನೀಡುವ ಇಂಥ ಬ್ಯಾಂಕುಗಳ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು. ಗ್ರಾಹಕರು ತಾವು ಆರ್ಥಿಕವಂತರಾಗವುದರ ಜೊತೆ ಬ್ಯಾಂಕ್‌ನ್ನು ಆರ್ಥಿಕತೆಯತ್ತ ಒಯ್ಯಬೇಕು ಎಂದು ನುಡಿದರು.

ಪಂಡರಪುರದ ಪ್ರಭಾಕರ ದಾದಾ ಭೋದಲೆ ಹಾಗು ಸಮಾರಂಭದ ಅಧ್ಯಕ್ಷತೆ ವಹಿಸಿದ ಬ್ಯಾಂಕಿನ ಅಧ್ಯಕ್ಷ ದೇವೇಂದ್ರ ಹಂಚಾಟೆ ಮಾತನಾಡಿದರು. ಮುಖ್ಯ ಅತಿಥಿಗಳಾದ ತಾಳಿಕೊಟಿಯ ಭಾವಷಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ವೆಂಕಟೇಶ ಲೋಕರೆ, ಇಳಕಲ್ಲ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಕೃಷ್ಣ ಮಹಿಂದ್ರಕರ, ತೆರಿಗೆ ಸಲಹೆಗಾರ ವಿಜಯಕುಮಾರ ಹಂಚಾಟೆ ಮಾತನಾಡಿದರು. ಬ್ಯಾಂಕಿನ ಪ್ರಧಾನ ವ್ಯವಸ್ತಾಪಕ ಯಲ್ಲುಸಾ ಮಹೇಂದ್ರಕರ ಹಾಗು ಇತರರು ವೇದಿಕೆಯಲ್ಲಿ ಇದ್ದರು.