ಸಾರಾಂಶ
ಯಾದಗಿರಿ ಸಮೀಪದ ಬೆಂಡೆಬೆಂಬಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಲಾಯಿತು.
ಯಾದಗಿರಿ: ಸಿ.ವಿ.ರಾಮನ್ ವಿಜ್ಞಾನ ಲೋಕದ ಪಿತಾಮಹ. ಅವರು ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಮಹಾನ್ ವ್ಯಕ್ತಿ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಮಹ್ಮದ್ ರಫೀ ತಾವರಗೇರಾ ಹೇಳಿದರು.
ಸಮೀಪದ ಬೆಂಡೆಬೆಂಬಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಿ.ವಿ. ರಾಮನ್ ಅತಿ ಚಿಕ್ಕ ವಯಸ್ಸಿನಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ನಮ್ಮ ಭಾರತ ದೇಶಕ್ಕೆ ಹೆಚ್ಚಿನ ಕೀರ್ತಿ ತಂದಿದ್ದಾರೆ. ನಮ್ಮ ವಿದ್ಯಾರ್ಥಿಗಳು ಕೂಡ ಉತ್ತಮವಾದ ಅಧ್ಯಯನ ಮಾಡಬೇಕೆಂದು ಶುಭ ಹಾರೈಸಿದರು. ಈ ವೇಳೆ ಶಾಲೆಯಲ್ಲಿ ಮಕ್ಕಳಿಗಾಗಿ ವಿಜ್ಞಾನ ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಜರುಗಿತು.
ಅಗಸ್ತ್ಯ ಫೌಂಡೇಶನ್ ಮಾರ್ಗದರ್ಶಕ ಪರ್ವತರೆಡ್ಡಿಗೌಡ ಬೆಳ್ಳಿಕಟ್ಟಿ, ಶಿಕ್ಷಕರಾದ ಫ್ರೆಡ್ರಿಕ್ ಸ್ಮಿತ್, ಪಾರ್ವತಿ, ದಯಾನಂದ್, ಸಿದ್ದರಾಮಪ್ಪ ಸೇರಿದಂತೆ ಇತರರಿದ್ದರು.