ಹಣ ವರ್ಗಾಯಿಸಿದ ಬಳಿಕವೂ ರಫ್ತು ವ್ಯವಹಾರ ಮುಂದುವರಿಯದ ಹಿನ್ನೆಲೆ ತಾವು ವಂಚನೆಗೆ ಒಳಗಾಗಿರುವುದಾಗಿ ಅರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕಾರವಾರ: ಸಾಂಬಾರು ಪದಾರ್ಥಗಳನ್ನು ವಿದೇಶಕ್ಕೆ ರಫ್ತು ಮಾಡಲು ಖರೀದಿದಾರರನ್ನು ಹುಡುಕುತ್ತಿದ್ದ ಉದ್ಯಮಿಯೊಬ್ಬರಿಗೆ ಗ್ರೀಸ್ ದೇಶದ ಕಂಪನಿಯ ಹೆಸರಿನಲ್ಲಿ ಅರಿಶಿಣ ಖರೀದಿಸುವುದಾಗಿ ನಂಬಿಸಿ, ಪ್ರಮಾಣಪತ್ರಗಳ ಹೆಸರಿನಲ್ಲಿ ₹4.29 ಲಕ್ಷ ಪಡೆದು ವಂಚಿಸಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಈ ಕುರಿತು ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಂದಗೋಕುಲ, ವನ್ನಳ್ಳಿ ನಿವಾಸಿ ನಿತ್ಯಾನಂದ ಗೋಳಿ ನಾಯ್ಕ(53) ವಂಚನೆಗೆ ಒಳಗಾದವರು. ಅವರು ಸಾಂಬಾರು ಪದಾರ್ಥಗಳನ್ನು ವಿದೇಶಗಳಿಗೆ ರಫ್ತು ಮಾಡುವ ವ್ಯವಹಾರ ನಡೆಸುತ್ತಿದ್ದು, 2026ರ ಸೆ. 28ರಂದು ವಿದೇಶಿ ಖರೀದಿದಾರರನ್ನು ಗೂಗಲ್ನಲ್ಲಿ ಹುಡುಕುತ್ತಿರುವಾಗ ‘Web Solutions Export’ ಎಂಬ ಕಂಪನಿಯ ವೆಬ್ಸೈಟ್ ಕಂಡುಬಂದಿದೆ.ವೆಬ್ಸೈಟ್ನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಭುವನ ಚಂದ್ರ ಎಂದು ಪರಿಚಯಿಸಿಕೊಂಡಿದ್ದಾನೆ. ವಿದೇಶಗಳಲ್ಲಿರುವ ಖರೀದಿದಾರರನ್ನು ಹುಡುಕಿ ರಫ್ತು ಕಂಪನಿಗಳಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.ಬಳಿಕ ಆತ ಗ್ರೀಸ್ ದೇಶದ ‘Magna Graecia Trade LLC’ ಕಂಪನಿಯ ಮಾಲೀಕನೆಂದು ಪರಿಚಯಿಸಲಾದ ವಾಸಿಲಿಸ್ ಕಾನ್ಸ್ಟಾಂಟಿಪೌಲಸ್ ಎಂಬ ವ್ಯಕ್ತಿಯನ್ನು ವಾಟ್ಸ್ಆ್ಯಪ್ ಮೂಲಕ ನಿತ್ಯಾನಂದ ನಾಯ್ಕ ಅವರಿಗೆ ಪರಿಚಯಿಸಿದ್ದಾನೆ. ಈ ವ್ಯಕ್ತಿ 25 ಮೆಟ್ರಿಕ್ ಟನ್ ಅರಿಶಿಣದ ಕೊಂಬನ್ನು ಅಂದಾಜು ₹98 ಲಕ್ಷಕ್ಕೆ ಖರೀದಿಸುವುದಾಗಿ ನಂಬಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ರಫ್ತು ವ್ಯವಹಾರಕ್ಕೆ ವಿವಿಧ ಪ್ರಮಾಣಪತ್ರಗಳ ಅಗತ್ಯವಿದ್ದು, ಅವುಗಳನ್ನು ಪಡೆಯಲು ಮುಂಗಡ ಹಣ ಪಾವತಿಸಬೇಕೆಂದು ಆರೋಪಿಗಳು ತಿಳಿಸಿದ್ದಾರೆ. ಇದನ್ನು ನಂಬಿದ ನಿತ್ಯಾನಂದ ನಾಯ್ಕ 2026ರ ಅ. 6ರಿಂದ ಅ. 21ರ ವರೆಗೆ ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹4,29,000 ಜಮಾ ಮಾಡಿದ್ದಾರೆ.
ಹಣ ವರ್ಗಾಯಿಸಿದ ಬಳಿಕವೂ ರಫ್ತು ವ್ಯವಹಾರ ಮುಂದುವರಿಯದ ಹಿನ್ನೆಲೆ ತಾವು ವಂಚನೆಗೆ ಒಳಗಾಗಿರುವುದಾಗಿ ಅರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.