ಸೈಕಲ್‌ ಸ್ಫರ್ಧೆ: ಕರಿಯಪ್ಪ ಪ್ರಥಮ

| Published : Jul 07 2025, 11:48 PM IST

ಸಾರಾಂಶ

ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಕರಿಯಪ್ಪ ಕುಕಡಿಗೆ ಪ್ರಥಮ ಸ್ಥಾನದೊಂದಿಗೆ ₹1 ಲಕ್ಷ ಬಹುಮಾನ ಪಡೆದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗೋಕಾಕಿನ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ನಿಮಿತ್ತ 50 ಕಿಮೀ ರೋಡ್‌ ರೈಸ್‌ ಸೈಕಲ್‌ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು. ವಿವಿಧ ರಾಜ್ಯಗಳಿಂದ ಸುಮಾರು 50 ಸ್ಪರ್ಧಾಳುಗಳು ಭಾಗವಹಿಸಿದ್ದರು. ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಕರಿಯಪ್ಪ ಕುಕಡಿಗೆ ಪ್ರಥಮ ಸ್ಥಾನದೊಂದಿಗೆ ₹1 ಲಕ್ಷ ಬಹುಮಾನ ಪಡೆದರು. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದ ಅರುಣ ಲಮಾಣಿ ದ್ವಿತೀಯ ಸ್ಥಾನದೊಂದಿಗೆ ₹75 ಸಾವಿರ ಹಾಗೂ ವಿಜಯಪುರದ ಕರ್ನಾಟಕ ಪೊಲೀಸ್‌ ಇಲಾಖೆಯ ಮೊಹಮದ್‌ ಸಾಧನಿ ತೃತೀಯ ಸ್ಥಾನದೊಂದಿಗೆ ₹50 ಸಾವಿರ, ಮಹಾರಾಷ್ಟ್ರದ ಕೊಲ್ಹಾಪುರನ ಸಿದ್ದೇಶ ಪಾಟೀಲ ಚತುರ್ಥ ಸ್ಥಾನದೊಂದಿಗೆ ₹25 ಸಾವಿರ ನಗದು ಸೇರಿದಂತೆ ಪಾರಿತೋಷಕ ಪಡೆದುಕೊಂಡಿದ್ದಾರೆ.ಪ್ರಶಸ್ತಿ ಪುರಸ್ಕೃತರಿಗೆ ರಾಜ್ಯ ಸೈಕ್ಲಿಂಗ್‌ ಸಂಸ್ಥೆಯ ಪೋಷಕ ಹಾಗೂ ಮಾಜಿ ಎಂಎಲ್ಸಿ ವಿವೇಕರಾವ ವಿ.ಪಾಟೀಲ, ರಾಜ್ಯ ಸೈಕ್ಲಿಂಗ್‌ ಸಂಸ್ಥೆಯ ಅಧ್ಯಕ್ಷರಾದ ಜಿ.ವಿ.ಪಾಟೀಲ, ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಕುರ್ಣಿ, ಬೆಳಗಾವಿ ಜಿಲ್ಲೆಯ ಸೈಕ್ಲಿಂಗ್‌ ಅಸೊಸಿಯೆಷನ್‌ ಜಿಲ್ಲಾಧ್ಯಕ್ಷ ಅನಿಲ ಎಂ.ಪೊದ್ದಾರ ಹಾಗೂ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌.ಎಚ್‌.ಪೂಜಾರಿ ಅಭಿನಂದಿಸಿದ್ದಾರೆ.