ಸಾರಾಂಶ
ಕನಕಪುರ: ದೈಹಿಕ ವ್ಯಾಯಾಮಕ್ಕೆ ಸೈಕಲ್ ಸವಾರಿ ಉತ್ತಮ ಕ್ರೀಡೆಯಾಗಿದ್ದು, ಎಲ್ಲರೂ ಪ್ರತಿದಿನ ಕನಿಷ್ಠ ಒಂದು ತಾಸು ಸೈಕಲ್ ತುಳಿಯಬೇಕೆಂದು ಲಯನ್ ಸಂಸ್ಥೆ ಜಿಲ್ಲಾಧ್ಯಕ್ಷ ಮರಸಪ್ಪ ರವಿ ಹೇಳಿದರು.
ಕನಕಪುರ: ದೈಹಿಕ ವ್ಯಾಯಾಮಕ್ಕೆ ಸೈಕಲ್ ಸವಾರಿ ಉತ್ತಮ ಕ್ರೀಡೆಯಾಗಿದ್ದು, ಎಲ್ಲರೂ ಪ್ರತಿದಿನ ಕನಿಷ್ಠ ಒಂದು ತಾಸು ಸೈಕಲ್ ತುಳಿಯಬೇಕೆಂದು ಲಯನ್ ಸಂಸ್ಥೆ ಜಿಲ್ಲಾಧ್ಯಕ್ಷ ಮರಸಪ್ಪ ರವಿ ಹೇಳಿದರು.
ಇಲ್ಲಿನ ಲಯನ್ಸ್ ಮತ್ತು ಲಿಯೋ ಸಂಸ್ಥೆ 78ನೇ ಸ್ವತಂತ್ರ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ರಸ್ತೆ ಸೈಕಲ್ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ದಿನದಲ್ಲಿ ಸೈಕಲ್ ತುಳಿಯುವುದೇ ಕಡಿಮೆಯಾಗಿದೆ. ಬಹುಪಾಲು ಜನರು ವಾಹನಗಳನ್ನೇ ಆಶ್ರಯಿಸುತ್ತಿದ್ದಾರೆ. ಇದು ಪರಿಸರ ಮಾಲಿನ್ಯದ ಜೊತೆಗೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ, ಸೈಕಲ್ ತುಳಿಯುವುದನ್ನು ಮಕ್ಕಳು ನಿತ್ಯದ ಹವ್ಯಾಸವಾಗಿ ರೂಢಿಸಿಕೊಳ್ಳಬೇಕು ಎಂದರು.ಲಯನ್ಸ್ ಸಂಸ್ಥೆ ಕನಕಪುರ ಶಾಖೆ ಅಧ್ಯಕ್ಷ ಎ.ಟಿ.ರವಿ ಮಾತನಾಡಿ, ಲಯನ್ಸ್ ಸಂಸ್ಥೆ ಸಮಾಜಮುಖಿ ಕಾರ್ಯಗಳೊಂದಿಗೆ ಪರಿಸರ, ಕ್ರೀಡೆ ಬಗ್ಗೆಯು ಅತ್ಯಂತ ಕಾಳಜಿ ವಹಿಸುತ್ತಿದೆ. ಅದರಂತೆಯೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೈಕಲ್ ಸ್ಪರ್ಧೆ ಏರ್ಪಡಿಸಿ ಮಕ್ಕಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಹಾಗೂ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಲಿಯೋ ಸಂಸ್ಥೆ ಅಧ್ಯಕ್ಷ ಜೀವನ್, ಕಾರ್ಯದರ್ಶಿ ಪ್ರದೀಪ್, ಖಜಾಂಚಿ ಶಿವಕುಮಾರ್, ಲಿಯೋ ಸಂಸ್ಥೆ ಕಾರ್ಯದರ್ಶಿ ಪ್ರದೀಪ್ ಕುಮಾರ್, ಖಜಾಂಚಿ ಸತೀಶ್ ಕುಮಾರ್, ಜಿಲ್ಲಾಧ್ಯಕ್ಷ ಗೋಪಾಲರಾಜು, ಸತೀಶ್, ಪ್ರಾದೇಶಿಕ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಮನೋಜ್ ಕುಮಾರ್, ವಿಶ್ವಕಾಂತ್, ಮಹೇಶ್ ಗೌಡ, ಸಂದೀಪ್, ದರ್ಶನ್, ದಿಲೀಪ್, ವಾಸು, ವಸಂತ್, ಪ್ರಜ್ವಲ್, ರಾಘವೇಂದ್ರರಾವ್, ಹರೀಶ್, ಬಿಳಿಗಿರಿ ರಂಗಸ್ವಾಮಿ ಮತ್ತಿತರರಿದ್ದರು.ಸೈಕಲ್ ಸ್ಪರ್ಧೆಯ 5 ವಿಭಾಗಗಳಲ್ಲಿ 150 ಮಂದಿ ಭಾಗವಹಿಸಿದ್ದರು. ಮೊದಲ ಸ್ಥಾನ ಪಡೆದ ಮಕ್ಕಳಿಗೆ 15 ಸಾವಿರ ನಗದು ಹಾಗೂ ಪಾರಿತೋಷಕ ವಿತರಿಸಲಾಯಿತು.
ಕೆ ಕೆ ಪಿ ಸುದ್ದಿ 02ಕನಕಪುರದ ಲಯನ್ಸ್ ಮತ್ತು ಲಿಯೋ ಸಂಸ್ಥೆ 78ನೇ ಸ್ವತಂತ್ರ ದಿನಾಚರಣೆ ಅಂಗವಾಗಿ ಮಕ್ಕಳಿಗೆ ತಾಲೂಕು ಮಟ್ಟದ ರಸ್ತೆ ಸೈಕಲ್ ಸ್ಪರ್ಧೆ ಏರ್ಪಡಿಸಿತ್ತು.