ಸಿಲಿಂಡರ್ ಸ್ಫೋಟ ಇಬ್ಬರು ಗಾಯಾಳು ಸಾವು

| Published : May 23 2024, 01:02 AM IST

ಸಾರಾಂಶ

ಇತ್ತೀಚಿಗೆ ಸಿಲಿಂಡರ್ ಸ್ಪೋಟಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮೃತಪಟ್ಟ ಘಟನೆ ಪಟ್ಟಣದ ಕೋಟೆ ಪ್ರದೇಶದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ಇತ್ತೀಚಿಗೆ ಸಿಲಿಂಡರ್ ಸ್ಪೋಟಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮೃತಪಟ್ಟ ಘಟನೆ ಪಟ್ಟಣದ ಕೋಟೆ ಪ್ರದೇಶದಲ್ಲಿ ನಡೆದಿದೆ.ಶಿವಣ್ಣ (45), ರವಿ ಅವರ ಮಗ ಕುಶಾಲ್ (11), ಮೃತ ದುಧೈವಿ. ಕೋಟೆ ಪ್ರದೇಶದ ಸಂತೆ ಮೈದಾನದ ಪಕ್ಕದ ರವಿ ಎಂಬುವರ ಮನೆಯಲ್ಲಿ ಇತ್ತೀಚಿಗೆ ಸಿಲಿಂಡರ್ ಸಿಡಿದು ಸುಮಾರು ಐದು ಮಂದಿಗೆ ಗಾಯಗಳಾಗಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಸ್ಥಳಕ್ಕೆ ರಕ್ಷಿಸಲು ಬಂದ ಪಕ್ಕದ ಮನೆಯ ಶಿವಣ್ಣ (45) ಹಾಗೂ ರವಿ ಅವರ ಮಗ ಕುಶಾಲ್ (11) ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ.

ವ್ಯಾಪಾರಿಯಾಗಿದ್ದ ರವಿಕುಮಾರ್ ಸಣ್ಣ ಸಿಲಿಂಡರ್ ಒಂದನ್ನು ತಮ್ಮ ಗೃಹ ಬಳಕೆಗೆ ಬಳಸುತ್ತಿದ್ದರು. ಅನಿರೀಕ್ಷಿತ ಅದು ಸಿಡಿದ ಪರಿಣಾಮ ಮನೆಯಲ್ಲಿ ಅಗ್ನಿ ಉಂಟಾಗಿದ್ದು, ಅವರ ಮಗಳು ಹೇಮಲತಾ, ಪತ್ನಿ ಶೃತಿ ಮತ್ತು ಸ್ಥಳಕ್ಕೆ ರಕ್ಷಿಸಲು ಬಂದ ಪಕ್ಕದ ಮನೆಯ ಶಿವಣ್ಣ ಮಂಜುಳಾ ಮತ್ತು ಸಮೀನಾ ಇವರಿಗೂ ತೀವ್ರ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.