ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣಸಂಘಟನೆಗಳಿಗೆ ಸಾಮಾಜಿಕ ಜವಾಬ್ದಾರಿ ಇದ್ದು ಗೌರವ ತರುವಂತ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಆರ್.ಎಸ್. ದೊಡ್ಡಣ್ಣ ತಿಳಿಸಿದರು.ಪಟ್ಟಣದ ಡಿ. ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ ರಾಮ್ ಸಾಮಾಜಿಕ ಹೋರಾಟ ಸಮಿತಿಯ ನೂತನ ಸಂಘ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ ರಾಮ್ ಇಬ್ಬರೂ ಮಹನೀಯರು ಕೂಡ ದಲಿತ ಸಮುದಾಯದ ಎರಡು ಕಣ್ಣುಗಳಿದ್ದಂತೆ. ಇವರ ಆದರ್ಶ ತತ್ವಗಳು ನಮಗೆ ದಾರಿದೀಪವಾಗಿದೆ. ಶೋಷಿತ ಸಮುದಾಯದ ಧ್ವನಿಯಾಗಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಇವರ ಆದರ್ಶ ತತ್ವಗಳನ್ನು ನಾವು ಪಾಲನೆ ಮಾಡಬೇಕು.ಮಾದಿಗ ಸಮುದಾಯಕ್ಕೆ ತನ್ನದೇ ಆದ ಇತಿಹಾಸ ಪರಂಪರೆ ಇದ್ದು, ಶತಮಾನಗಳಿಂದಲೂ ಕೂಡ ವಚನಕಾರರು, ಶಿವಶರಣರು ಅನೇಕರು ಸಮುದಾಯದಲ್ಲಿ ಇತಿಹಾಸ ಪುರುಷರಾಗಿದ್ದಾರೆ. ಸಂಘಟನೆಗಳಿಗೆ ಸಾಮಾಜಿಕ ಜವಾಬ್ದಾರಿ ಇದ್ದು ಇದನ್ನು ಅರಿತು ಕೆಲಸ ನಿರ್ವಹಿಸಬೇಕು ಎಂದರು.ಡಾ. ಬಾಬು ಜಗಜೀವನ ರಾಮ್ ಅಧ್ಯಯನ ಸಂಸ್ಥೆಯ ಉಪನ್ಯಾಸಕ ಶ್ರೀನಿವಾಸ್ ಮೂರ್ತಿ ಮಾತನಾಡಿ, ಯುವ ಪೀಳಿಗೆ ವಿದ್ಯಾವಂತರಾಗುವುದರ ಮೂಲಕ ಇತರರಿಗೆ ಮಾದರಿಯಾಗಬೇಕು. ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಎಂದಿಗೂ ಕೂಡ ಮರೆಯಬಾರದು. ಮಹನೀಯರುಗಳ ಬಗ್ಗೆ ಅರಿತುಕೊಳ್ಳುವುದರ ಮೂಲಕ ಇತರರಿಗೆ ತಿಳಿಸುವ ಕೆಲಸವಾಗಬೇಕು ಎಂದರು.ಸಂಘದ ಪದಾಧಿಕಾರಿಗಳು : ಅಧ್ಯಕ್ಷರಾಗಿ ಎಂ.ಎನ್. ಆದಿಶೇಷ, ಗೌರವಾಧ್ಯಕ್ಷರಾಗಿ ಬಿ.ಜೆ. ಸುರೇಶ್, ಉಪಾಧ್ಯಕ್ಷರಾಗಿ ಪಿ. ಹರೀಶ್, ಖಜಾಂಚಿಯಾಗಿ ಬಿ.ಕೆ. ಉದಯ್, ಕಾರ್ಯದರ್ಶಿಗಳಾಗಿ ಬಿ.ಕೆ. ಗಿರೀಶ್, ಇ. ನಟೇಶ್, ನಾಗೆಂದ್ರ, ಕುಮಾರ್, ಎಂ.ಕೆ. ಸಾಗರ್, ಚಂದ್ರ, ವೆಂಕಟೇಶ, ಸಂಚಾಲಕರಾಗಿ ಸ್ವಾಮಿ, ಶ್ರೀನಿವಾಸ, ಸಲಹೆಗಾರರಾಗಿ ಎಂ.ಕೆ. ಕಾಳಯ್ಯ, ಬಿ.ಕೆ. ರವಿ, ಸದಸ್ಯರಾಗಿ ರವಿ, ಸುರೇಶ, ಪ್ರವೀಣ್, ಸೋಮಣ್ಣ, ಮಹದೇವ್ ಆಯ್ಕೆಯಾಗಿದ್ದಾರೆ.ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಸಮುದಾಯದ ಚುನಾಯಿತ ಪ್ರತಿನಿಧಿಗಳನ್ನು, ನಿವೃತ ಅಧಿಕಾರಿಗಳನ್ನು ಸನ್ಮಾನಿಸಿದರು.ಸಾಮಾಜಿಕ ನ್ಯಾಯಪರವೇದಿಕೆ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಕೃಷ್ಣ ಮೂರ್ತಿ, ಮಲ್ಲೇಶ್, ಶ್ರೀನಿವಾಸ್, ಅಕ್ಕಯ್ಯಮ್ಮ, ಲಕ್ಷ್ಮಮ್ಮ, ರಾಜು, ಮಹೇಶ್, ವೆಂಕಟೇಶ್, ಮಲ್ಲೇಶ್, ರಮೇಶ್, ಅಶ್ವಿನಿ, ಜ್ಯೋತಿ, ವೀಣಾ, ಲೋಕೇಶ್, ರಾಮು ಇದ್ದರು.