ಹುಣಸೂರಿನಲ್ಲಿ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಸಂಸ್ಥಾಪನಾ ದಿನಾಚರಣೆ

| Published : Jul 21 2024, 01:19 AM IST

ಹುಣಸೂರಿನಲ್ಲಿ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಸಂಸ್ಥಾಪನಾ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಹಕರ ಸೇವೆಯೇ ನಮ್ಮ ಮೂಲ ಮಂತ್ರವಾಗಿದ್ದು, ಗ್ರಾಹಕರ ಅಗತ್ಯತೆಗೆ ತಕ್ಕಂತೆ ಪ್ರಾದೇಶಿಕ ಅವಶ್ಯಕತೆಗಳನ್ನು ಮನಗಂಡು ಕಾರ್ಯ ನಿರ್ವಹಿಸುತ್ತಿದ್ದೇವೆ

ಕನ್ನಡಪ್ರಭ ವಾರ್ತೆ ಹುಣಸೂರು

ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ 117ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹುಣಸೂರು ಶಾಖೆಯ ವತಿಯಿಂದ ಪಟ್ಟಣದ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 100 ಸಸಿಗಳನ್ನು ಬ್ಯಾಂಕ್ ಸಿಬ್ಬಂದಿ ನೆಟ್ಟು ಸಂಭ್ರಮಿಸಿದರು.

ಶನಿವಾರ ಕಾಲೇಜು ಆವರಣದಲ್ಲಿ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಎನ್.ಎಂ. ಮೋಹನ್ ವಿದ್ಯಾರ್ಥಿಗಳೊಡಗೂಡಿ ಸಸಿ ನೆಟ್ಟರು. ನಂತರ ಮಾತನಾಡಿದ ಅವರು, 117 ವಸಂತಗಳಲ್ಲಿ ಬ್ಯಾಂಕ್ ಜನರ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿದೆ. ಗ್ರಾಹಕರ ಸೇವೆಯೇ ನಮ್ಮ ಮೂಲ ಮಂತ್ರವಾಗಿದ್ದು, ಗ್ರಾಹಕರ ಅಗತ್ಯತೆಗೆ ತಕ್ಕಂತೆ ಪ್ರಾದೇಶಿಕ ಅವಶ್ಯಕತೆಗಳನ್ನು ಮನಗಂಡು ಕಾರ್ಯ ನಿರ್ವಹಿಸುತ್ತಿದ್ದೇವೆ. ಇದೀಗ ಗ್ರಾಹಕರೊಂದಿಗೆ ಒಡಗೂಡಿ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದೇವೆ ಎಂದರು.

ಸಸಿ ನೆಡುವ ಕಾರ್ಯಕ್ರಮಕ್ಕೂ ಮುನ್ನ ಕಚೇರಿಯಲ್ಲಿ ಬ್ಯಾಂಕ್ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗ್ರಾಹಕರಿಂದ ಕೇಕ್ ಕತ್ತರಿಸಿ ಸಂಭ್ರಮಿಸಿತು.

ಸಹಾಯಕ ವ್ಯವಸ್ಥಾಪಕ ರವಿಕುಮಾರ್, ಗ್ರಾಹಕರಾದ ಶಿವಕುಮಾರ್, ಸಂತೋಷ, ನಾಗರಾಜೇ ಗೌಡ, ಅಗ್ರಿಕಲ್ಚರಲ್ ಆಫೀಸರ್ ಸಿ. ರೇವಂತ್, ಕೃಷ್ಣ ತೇಜ, ಶಿವಕುಮಾರ್, ಶಿವರಾಂ, ನಾರಾಯಣ್, ಮಹಿಳಾ ಸಂಘಗಳ ನಿರ್ದೇಶಕಿಯರು, ತಂಬಾಕು ಬೆಳೆಗಾರರು, ವ್ಯಾಪಾರಸ್ಥರು, ಉದ್ಯಮಿಗಳು ಇದ್ದರು.