ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಮಕ್ಕಳ ಸಂತೆಯು ವಿದ್ಯಾರ್ಥಿಗಳಲ್ಲಿ ದೈನಂದಿನ ವ್ಯವಹಾರಿಕ ಜ್ಞಾನ ವೃದ್ಧಿಸುವ ಜೊತೆಗೆ ಲೆಕ್ಕಚಾರ, ಅಳತೆ ಮತ್ತು ಪ್ರಮಾಣಗಳ ಅರಿವು ಮೂಡಿಸಲಿದೆ ಎಂದು ಉಪನ್ಯಾಸಕಿ ಜಯಂತಿ ಅಭಿಪ್ರಾಯಪಟ್ಟರು.ಹಲಗೂರಿನ ಸ್ವಾಮಿ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಜೆಪಿಎಂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿ, ವ್ಯಾಪಾರದಲ್ಲಿ ಬಂಡವಾಳದ ಹೂಡಿಕೆ ಲಾಭ, ನಷ್ಟ ತಿಳಿವಳಿಕೆ, ಜ್ಞಾನ ವೃದ್ಧಿಯಾಗಲಿದೆ. ದಿನನಿತ್ಯ ವಸ್ತುಗಳ ಬೆಲೆ ನಿರ್ಧಾರ, ಒಂದು ಕಾರ್ಯದ ಹಿಂದಿನ ಶ್ರಮದ ಅರಿವು ಮೂಡಲಿದೆ ಎಂದರು.
ಮುಖ್ಯ ಶಿಕ್ಷಕ ಮಧುಸ್ವಾಮಿ ಮಾತನಾಡಿ, ಪಠ್ಯದ ಜೊತೆಗೆ ಸಹ ಪಠ್ಯ ಚಟುವಟಿಕೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮಕ್ಕಳ ಸಂತೆ ಆಯೋಜಿಸಿದೆ. ಗಣಿತ ವಿಷಯದ ಸಂಕಲನ, ವ್ಯವಕಲನ ಕಲಿಕೆ ವೃದ್ಧಿಯಾಗಲಿದೆ. ಗ್ರಾಹಕ ಮತ್ತು ವ್ಯಾಪಾರಿಗಳ ನಡುವಿನ ಸಂವಹನ ಕೌಶಲ್ಯ ಮತ್ತು ಗ್ರಾಹಕರನ್ನು ಕಾಯ್ದುಕೊಳ್ಳುವ ಕಲೆಯನ್ನು ಕರಗತ ಮಾಡಿಸುವುದಲ್ಲದೇ ಮಕ್ಕಳಲ್ಲಿ ಸ್ವಾವಲಂಬಿ ಭಾವನೆಯನ್ನು ಗಟ್ಟಿಗೊಳಿಸಲು ಮಕ್ಕಳ ಸಂತೆ ಸಹಕಾರಿಯಾಗಲಿದೆ ಎಂದರು.ಈ ವೇಳೆ ಜೆಪಿಎಂ ಶಾಲೆ ಮುಖ್ಯ ಶಿಕ್ಷಕ ಮಧುಸ್ವಾಮಿ, ಶಿಕ್ಷಕರಾದ ಗೋವಿಂದರಾಜು, ಶೃತಿ, ಹರ್ಷಿತಾ, ಸವಿತಾ, ಇರ್ಫಾನ್ ತಬ್ಬಸುಮ್, ಲುಬ್ನಾ, ನಂದಿನಿ, ಭಾಗ್ಯ ಲಕ್ಷ್ಮೀ, ವಿನುತಾ ಬಿ.ಕೆ.ಮಧು, ಸಿದ್ದರಾಜು, ಸೇರಿದಂತೆ ಪೋಷಕರು ಭಾಗವಹಿಸಿದ್ದರು.ಹೊಸವರ್ಷಾಚರಣೆ-ಗಣ್ಯರಿಗೆ ಸನ್ಮಾನ: ಸಾಂಸ್ಕೃತಿಕ ಕಾರ್ಯಕ್ರಮಗಳು
ಮಂಡ್ಯ:ಹೊಸ ವರ್ಷಾಚರಣೆ ಅಂಗವಾಗಿ ಶ್ರೀರಂಜಿನಿ ಕಲಾ ವೇದಿಕೆ ವತಿಯಿಂದ ಜ.1ರಂದು ನಗರದ ವಿದ್ಯಾ ಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಹೊಸ ವರ್ಷಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಜೆ ನಡೆಯುವ ಕಾರ್ಯಕ್ರಮವನ್ನು ಜೈ ಕರ್ನಾಟಕ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ಉದ್ಘಾಟಿಸುವರು. ತಾರಾ ಡಯಗ್ನೋಸ್ಟಿಕ್ಬನ ಮುಖ್ಯಸ್ಥ ಡಾ.ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಹೊಸ ವರ್ಷದ ಶುಭಾಶಯ ಕೋರುವರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿನ ಶೈಲಾ ಕೆ.ಎಸ್.( ಭರತನಾಟ್ಯ), ಎ.ಎನ್.ಬಸವರಾಜು ( ಸಂಗೀತ ), ಕೊತ್ತತ್ತಿ ರಾಜು, (ಸಾಹಿತ್ಯ) ದ.ಕೋ. ಹಳ್ಳಿ ಚಂದ್ರಶೇಖರ್ (ಪತ್ರಿಕೋದ್ಯಮ), ಶಶಿಧರ್ ಸಬ್ಬನಹಳ್ಳಿ (ಯುವ ಕವಿ) ರೋಷನ್ ಚೋಪ್ರಾ (ಯುವ ಕವಿ ) ದೋ.ಚಿ.ಗೌಡ (ರೈತ ಕವಿ) ಲೋಕೇಶ್ ಕಲ್ಕುಣಿ (ಸಾಹಿತ್ಯ) ಅವರನ್ನು ಸನ್ಮಾನಿಸಲಾಗುವುದು.
ಸನ್ಮಾನಿತರನ್ನು ಮನೋವೈದ್ಯ ಡಾ.ಟಿ.ಸತ್ಯನಾರಾಯಣ ರಾವ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಜಾತ ಕೃಷ್ಣಪ್ಪ, ಜಿ.ವಿ.ನಾಗರಾಜು, ಹಾಗೂ ನವೋದಯ ಶಿಲ್ಪ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ಡಾ.ಎಚ್.ಆರ್.ಕನ್ನಿಕ ಅಭಿನಂದಿಸುವರು.ಅತಿಥಿಗಳಾಗಿ ಮನ್ಮುಲ್ ಮಾಜಿ ನಿರ್ದೇಶಕಿ ನೀನಾ ಪಟೇಲ್ , ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿ.ಸುಜಾತಕೃಷ್ಣ , ಕರವೇ ಗೌರವಾಧ್ಯಕ್ಷ ಕೆ.ಟಿ.ಶಂಕರೇಗೌಡ ಹಾಗೂ ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ರಾಘವೇಂದ್ರ, ಹಾಗೂ ಖ್ಯಾತ ವಕೀಲ ಬಸವಯ್ಯ ಭಾಗವಹಿಸುವರು,
ಶ್ರೀನಂದೀಕೇಶ್ವರ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ,ಶ್ರೀ ಶಂಕರ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಕೀ ಬೋರ್ಡ್ ವಾದನ , ಕಲಾಶ್ರೀ ಸಿ.ಪಿ.ವಿದ್ಯಾಶಂಕರ್, ಬಸವರಾಜು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ಸಿ.ಪಿ.ವಿದ್ಯಾಶಂಕರ್ ತಿಳಿಸಿದ್ದಾರೆ.