ಧಾರವಾಡ:

ಶ್ರೀ ರುದ್ರವು ಮನುಷ್ಯನನ್ನು ಭೋಗದಿಂದ ಯೋಗದ ಕಡೆಗೆ, ಅಹಂಕಾರದಿ೦ದ ಸ್ಮರಣೆ ಕಡೆಗೆ, ಬಂಧನದಿಂದ ಶಿವ ಸಾನ್ನಿಧ್ಯದ ಮೋಕ್ಷದ ಕಡೆಗೆ ನಡೆಸುವ ಮಹಾಮಂತ್ರ. ನಿತ್ಯ ರುದ್ರ ಪಠಣದಿಂದ ಬದುಕಿಗೆ ಪ್ರಸನ್ನತೆ ಪ್ರಾಪ್ತವಾಗುತ್ತದೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಸ್ವಾಮೀಜಿ ಶಾಂತಲಿ೦ಗ ಶಿವಾಚಾರ್ಯರು ಹೇಳಿದರು.

ಇಲ್ಲಿಯ ಮದಿಹಾಳದ ಸಿದ್ಧಾರೂಢ ಕಾಲನಿಯ ‘ಆರೂಢ ರುದ್ರಬಳಗ’ದ ಸಹೋದರಿಯರು ಅಧಿಕ ಮಾಸದ ಅಂಗವಾಗಿ ತಾಲೂಕಿನ ಅಮ್ಮಿನಬಾವಿಯ ಶ್ರೀಮಠಕ್ಕೆ ಆಗಮಿಸಿ ಶ್ರೀರುದ್ರ ಪಠಣ ಮಾಡಿದ ಸಂದರ್ಭದಲ್ಲಿ ‘ಆರೂಢ ರುದ್ರಬಳಗ’ದ ಸಹೋದರಿಯರು ನೀಡಿದ ಗೌರವ ಸ್ವೀಕರಿಸಿ ಮಾತನಾಡಿದರು.

ನಿತ್ಯವೂ ಶ್ರೀರುದ್ರದ ಪಠಣ ಮಾಡುವುದರಿಂದ ಕೇವಲ ಐಹಿಕ ಸುಖಗಳಷ್ಟೇ ಅಲ್ಲ, ಮನಶಾಂತಿ, ಚಿತ್ತಶುದ್ಧಿ, ಶಿವಭಕ್ತಿ, ಆತ್ಮಜ್ಞಾನಗಳಂತಹ ಉನ್ನತ ಫಲಗಳು ದೊರೆಯುತ್ತವೆ. ಶ್ರೀರುದ್ರ ಪಠಣದಿಂದ ಮಾನವನ ‘ನಾನು’ ಎಂಬ ಅಹಂಕಾರದ ನಿವಾರಣೆಯಾಗಿ ‘ಸರಸ್ವವೂ ನೀನೇ’ ಎಂಬ ಶಿವಭಾವ ಅಂಕುರಿಸುತ್ತದೆ ಎಂದು ಹೇಳಿದರು.

‘ಆರೂಢ ರುದ್ರಬಳಗ’ದ ಅಧ್ಯಕ್ಷರಾದ ಸರೋಜ ಶಿಗ್ಲಿ ಹಿರೇಮಠ, ಉಪಾಧ್ಯಕ್ಷರಾದ ಸುಜಾತಾ ಪೂಜಾರ, ಸದಸ್ಯರಾದ ಕಮಲಾಕ್ಷಿ ಕಿತ್ತೂರ, ಸಾವಿತ್ರಿ ಬೆಳ್ಳಕ್ಕಿ, ಸವಿತಾ ತುರಮರಿ, ಜ್ಯೋತಿ ಹೂಗಾರ, ಮಂಜುಳಾ ಕಾಲವಾಡ, ರಶ್ಮಿ ಮುಂದಿನಮನಿ, ಸವಿತಾ ಕಡಕೋಳ, ಮಹಾದೇವಿ ಹೆಗಡೆ, ವಿದ್ಯಾ ಹೆಬ್ಬಳ್ಳಿ, ಗೀತಾ ಹುಬ್ಬಳ್ಳಿ, ಸುರ‍್ಣ ಮಾದರಿಮಠ, ಗೀತಾ ವಗ್ಗಪ್ಪನವರ, ಸುರ‍್ಣ ಹಣಬರಟ್ಟಿ ಇದ್ದರು.