ರೈತರಿಗೆ ಹೈನುಗಾರಿಕೆ ಲಾಭದಾಯಕ: ಎ.ಟಿ.ಸೋಮಶೇಖರ್

| Published : Dec 08 2024, 01:16 AM IST

ಸಾರಾಂಶ

ಜಾನುವಾರುಗಳು ಸೂಕ್ಷ್ಮವಾದ ಜೀವಿಗಳು ಆದರೆ ಮನುಷ್ಯನಿಗೆ ಬರುವ ಕಾಯಿಲೆ ತರನೇ ಜಾನುವಾರುಗಳಿಗೆ ಬರುತ್ತವೆ, ಇವೆಲ್ಲ ಹತೋಟಿಗೆ ತರಲು ಬಹಳಷ್ಟು ಪಶುಪಾಲನಾ ಇಲಾಖೆ ಶ್ರಮಿಸುತ್ತಿದೆ. ಜಿಲ್ಲೆ ಮತ್ತು ತಾಲೂಕಿನಲ್ಲಿ ಪಶು ವೈದ್ಯರು ಬಹಳಷ್ಟು ರೈತರ ಜೊತೆ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಭೇರ್ಯ

ರೈತರಿಗೆ ಹೈನುಗಾರಿಕೆ ಲಾಭದಾಯಕವಾಗಿದ್ದು, ಹಸುಗಳಿಗೆ ಕಾಲಕ್ಕೆ ತಕ್ಕಂತೆ ರೋಗ ನಿರೋಧಕದ ಲಸಿಕೆ, ಚುಚ್ಚುಮದ್ದು ಕಡ್ಡಾಯವಾಗಿ ಹಾಕಿಸಬೇಕು ಎಂದು ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್ ಹೇಳಿದರು.

ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ ಹಾಗೂ ಭೇರ್ಯ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ಅಧಿಕ ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾನುವಾರುಗಳು ಸೂಕ್ಷ್ಮವಾದ ಜೀವಿಗಳು ಆದರೆ ಮನುಷ್ಯನಿಗೆ ಬರುವ ಕಾಯಿಲೆ ತರನೇ ಜಾನುವಾರುಗಳಿಗೆ ಬರುತ್ತವೆ, ಇವೆಲ್ಲ ಹತೋಟಿಗೆ ತರಲು ಬಹಳಷ್ಟು ಪಶುಪಾಲನಾ ಇಲಾಖೆ ಶ್ರಮಿಸುತ್ತಿದೆ. ಜಿಲ್ಲೆ ಮತ್ತು ತಾಲೂಕಿನಲ್ಲಿ ಪಶು ವೈದ್ಯರು ಬಹಳಷ್ಟು ರೈತರ ಜೊತೆ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಉಪ ನಿರ್ದೇಶಕ ನಾಗರಾಜ್, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಡಾ. ಮಂಜುನಾಥ್ ಮಾತನಾಡಿದರು.

ಅಧಿಕ ಹಾಲು ಕರೆಯುವ ಸ್ಪರ್ಧೆ ಹಾಗೂ ಉತ್ತಮ ಮಿಶ್ರ ತಳಿಗಳ ಕರುಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು.

ಅತಿಹೆಚ್ಚು ಹಾಲು ಕರೆದ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನ ಸಂಬ್ರವಳ್ಳಿ ನಾಗರಾಜ- 18.86 ಲೀಟರ್ , ದ್ವಿತೀಯ ಸ್ಥಾನ ಸವಿತ ನಾಗರಾಜು- 17 ಲೀ, ಮೂರನೇ ಸ್ಥಾನ ಸೋಮಶೇಖರ್- 15 ಲೀ, ನಾಲ್ಕುನೇ ಸ್ಥಾನ ನಂಜುಂಡ ತಿಮ್ಮಚಾರಿ - 12.5 ಲೀ, ಐದನೆ ಸ್ಥಾನ ಹೂ ರಾಜು- 10.5 ಲೀ, ಆರನೇ ಸ್ಥಾನ ಮಂಜುನಾಥ್- 9 ಲೀಟರ್. 6 ತಿಂಗಳ ಮೇಲಿನ ಕರುಗಳು - ಪ್ರಥಮ ಬಹುಮಾನ- ಚಂದ್ರಶೇಖರ್ ಬೋರೇಗೌಡನಕೊಪ್ಪಲು, ದ್ವಿತೀಯ ಬಹುಮಾನ- ನೂರುಪಾಷ, ತೃತೀಯ -ನಾಗರಾಜು, ಆರು ತಿಂಗಳೊಳಗಿನ ಕರುಗಳು - ಹೂ ರಾಜು, ತಾಯಮ್ಮ, ಚಂದ್ರಶೇಖರ್, ಕುಮಾರ್, ಮಂಜುಳಾ, ನಾಟಿ ದೇಶಿ ಕರುಗಳು - ಬಟಿಗನಹಳ್ಳಿ ಗ್ರಾಮದ ಚಂದ್ರಶೇಖರ್, ಬಿ.ಎಚ್. ಮಹದೇವ, ನವೀನ. ಡಾ. ಹರೀಶ್, ಡಾ. ರಾಮು, ಡಾ. ವಿನಯ್, ಡಾ. ಚಂದನ್, ಡಾ. ಸುರೇಂದ್ರ, ಡಾ. ಸಂಜಯ್, ಡಾ. ಪ್ರಹ್ಲಾದ್, ಡಾ. ಸಂತೋಷ್, ಭೇರ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಖ್ಸೂದ್ ಖಾನ್, ಉಪಾಧ್ಯಕ್ಷ ಪುಟ್ಟಸ್ವಾಮೀಗೌಡ, ನಿರ್ದೇಶಕರಾದ ಗೆಂಡೆಕುಮಾರ್, ರಾಮನಾಯಕ, ಬಿ.ಪಿ. ರಾಮಕೃಷ್ಣ, ಗಣೇಶ್, ಮಹದೇವಪ್ಪ, ಡೈರಿ ಸಿಇಒ ಬಿ.ಪಿ. ಲೋಕೇಶ್, ಸಹಾಯಕ ಪ್ರಸನ್ನ, ಕೌಶಿಕ್, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.