ಸಾರಾಂಶ
ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಸುಬ್ರಮಣ್ಯಸ್ವಾಮಿ ಸನ್ನಿಧಿಯಲ್ಲಿ ಸುಬ್ರಮಣ್ಯ ಷಷ್ಠಿ ಪ್ರಯುಕ್ತ ಶನಿವಾರ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು. ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿದ್ದ ರಥದಲ್ಲಿ ಪ್ರತಿಷ್ಟಾಪಿಸಿ, ಪೂಜಾ ಕೈಂಕರ್ಯ ನೆರವೇರಿಸಿದ ನಂತರ ದೇವಾಲಯದ ಪ್ರಾಂಗಣದಲ್ಲಿ ಪ್ರಾಕಾರೋತ್ಸವ ನಡೆಸಿದ ನಂತರ ಶ್ರೀ ಸ್ವಾಮಿಯ ಮೂರ್ತಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಸುಬ್ರಮಣ್ಯಸ್ವಾಮಿ ಸನ್ನಿಧಿಯಲ್ಲಿ ಸುಬ್ರಮಣ್ಯ ಷಷ್ಠಿ ಪ್ರಯುಕ್ತ ಶನಿವಾರ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು.
ಕ್ರೋಧಿಕೃತ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲಪಕ್ಷದ ಷಷ್ಠಿಯ ದಿನವಾದ ಶನಿವಾರ ಧನಿಷ್ಠ ನಕ್ಷತ್ರದಲ್ಲಿ ಶ್ರೀ ವಲ್ಲಿ ಸಮೇತ ಸುಬ್ರಮಣ್ಯ ಸ್ವಾಮಿಯ ಮೂರ್ತಿಗೆ ಸಂಪ್ರದಾಯದ ಆಚರಣೆಯಂತೆ ಪುಣ್ಯಹಃ, ಪಂಚಾಮೃತ ಹಾಗೂ ಪಂಚಫಲ ಅಭಿಷೇಕ, ಪುಷ್ಪಾರ್ಚನೆ ನಡೆಸಿ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿ ವೇದ ಪಾರಾಯಣ, ಸ್ತೋತ್ರಪಾಠ ಪಠಣ, ಮಹಾನಿವೇದನ, ತದಿಯಾರಾಧನೆ ಸೇವೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯವನ್ನು ನಡೆಸಲಾಯಿತು. ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿದ್ದ ರಥದಲ್ಲಿ ಪ್ರತಿಷ್ಟಾಪಿಸಿ, ಪೂಜಾ ಕೈಂಕರ್ಯ ನೆರವೇರಿಸಿದ ನಂತರ ದೇವಾಲಯದ ಪ್ರಾಂಗಣದಲ್ಲಿ ಪ್ರಾಕಾರೋತ್ಸವ ನಡೆಸಿದ ನಂತರ ಶ್ರೀ ಸ್ವಾಮಿಯ ಮೂರ್ತಿಗೆ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.ಹಿರಿಯ ಅರ್ಚಕ ರಾಮಸ್ವಾಮಿಭಟ್ಟರ ನೇತೃತ್ವದಲ್ಲಿ ವೆಂಕಟನರಸಿಂಹನ್, ನಾರಾಯಣಭಟ್ಟರು ಹಾಗೂ ರಾಮಪ್ರಸನ್ನ, ವಿಜಯ್ ಕುಮಾರ್, ನಾಗರಾಜು, ಇತರರು ಪೂಜಾ ಕೈಂಕರ್ಯ ನೆರವೇರಿಸಿದರು.
ಪುರಸಭಾ ಸದಸ್ಯರಾದ ಶಿವಣ್ಣ, ಕುಮಾರಸ್ವಾಮಿ, ಪತಂಜಲಿ ಯೋಗಕೂಟದ ಅಧ್ಯಕ್ಷ ಲೋಕೇಶ್, ದೇವಾಂಗ ಯುವಕ ಸಂಘದ ಅಧ್ಯಕ್ಷ ಎಚ್.ಆರ್.ಶಂಕರ್, ಉದ್ಯಮಿ ಮಾಯಣ್ಣ, ಯು.ಕೆ.ವನಿತಾ, ಎಂ.ವೀಕ್ಷಿತ್, ಎಂ.ಮೋಕ್ಷ, ರವೀಶ್ ಜಿ.ಟಿ., ಕಡುವಿನಕೋಟೆ ವೆಂಕಟೇಶ್, ಡಿಶ್ ಗೋವಿಂದಾ ಹಾಗೂ ಭಾಸ್ಕರ, ರೇಖಾ, ಸತೀಶ್, ಮೂರ್ತಿ, ಕುಮಾರ್, ರಾಜು, ಚಲುವ, ವಸಂತಲಕ್ಷ್ಮಿ ಮಂಜುನಾಥ್, ಬಾಬು, ರೇಣುಕಾ, ಶೃತಿ ಪ್ರದೀಪ್ ಕುಮಾರ್, ಶಿವಕುಮಾರ್, ಅಭಿಲಾಷ್, ಮಂಜು ಆಚಾರ್ ಮೊದಲಾದವರಿದ್ದರು.