ನನಗೆ ಕೆಟ್ಟ ಹೆಸರು ತರದೆ ಡೇರಿ ಕಾರ್ಯದರ್ಶಿಗಳು ಕೆಲಸ ನಿರ್ವಹಿಸಬೇಕು: ಡಿ.ಕೃಷ್ಣೇಗೌಡ

| Published : Jul 01 2025, 12:47 AM IST

ನನಗೆ ಕೆಟ್ಟ ಹೆಸರು ತರದೆ ಡೇರಿ ಕಾರ್ಯದರ್ಶಿಗಳು ಕೆಲಸ ನಿರ್ವಹಿಸಬೇಕು: ಡಿ.ಕೃಷ್ಣೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು ಗ್ರಾಹಕರಿಂದ ಗುಣಮಟ್ಟದ ಹಾಲು ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಸಹಕರಿಸುವ ಮೂಲಕ ನನಗೆ ಯಾವುದೇ ಕೆಟ್ಟ ಹೆಸರು ತರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಮನ್ಮುಲ್ ನೂತನ ನಿರ್ದೇಶಕ ಡಿ.ಕೃಷ್ಣೇಗೌಡ ಸಲಹೆ.

ಕನ್ನಡಪ್ರಭ ವಾರ್ತೆ ಹಲಗೂರು

ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳು ಗ್ರಾಹಕರಿಂದ ಗುಣಮಟ್ಟದ ಹಾಲು ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಸಹಕರಿಸುವ ಮೂಲಕ ನನಗೆ ಯಾವುದೇ ಕೆಟ್ಟ ಹೆಸರು ತರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಮನ್ಮುಲ್ ನೂತನ ನಿರ್ದೇಶಕ ಡಿ.ಕೃಷ್ಣೇಗೌಡ ಸಲಹೆ ನೀಡಿದರು.

ಮುತ್ತತ್ತಿ ರಸ್ತೆಯ ತಾಳವಾಡಿ ದೇವಸ್ಥಾನದ ಆವರಣದಲ್ಲಿ ಹಲಗೂರು ವ್ಯಾಪ್ತಿಯ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಒಕ್ಕೂಟದ ಅಭಿವೃದ್ಧಿಗೆ ಗ್ರಾಹಕರಿಂದ ಗುಣಮಟ್ಟದ ಹಾಲನ್ನು ಪರೀಕ್ಷಿಸಿ ತೆಗೆದುಕೊಳ್ಳುವುದು ನಿಮ್ಮ ಜವಾಬ್ದಾರಿ. ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿದಾಗ ನಮ್ಮ ಮಳವಳ್ಳಿ ಒಕ್ಕೂಟ ಆರನೇ ಸ್ಥಾನದಲ್ಲಿದೆ. ಎರಡನೇ ಸ್ಥಾನಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಒಕ್ಕೂಟದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ನಿಮಗೆ ಕೊಡಿಸಲು ನಾನು ಶ್ರಮಿಸುತ್ತೇನೆ. ನನ್ನ ಮೊದಲನೇ ಸಭೆಯಲ್ಲಿ ನೌಕರರಿಗೆ ಸಹಾಯ ಮಾಡಿ ಎಂದು ಅಧ್ಯಕ್ಷರಲ್ಲಿ ಕೇಳಿದ್ದೇನೆ. ಅದಕ್ಕೆ ಅವರು ಸ್ಪಂದಿಸುವ ಭರವಸೆ ನೀಡಿದ್ದಾರೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಸಹಕಾರದಿಂದ ಒಕ್ಕೂಟದ ನಿರ್ದೇಶಕನಾಗಿದ್ದೇನೆ. ಅದಕ್ಕೆ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದರು.

ಹಾಲು ಒಕ್ಕೂಟದ ತಾಲೂಕು ವ್ಯವಸ್ಥಾಪಕ ಸದಾಶಿವ ಮಾತನಾಡಿ, ಹಾಲು ಸರಬರಾಜು ಮಾಡುವ ಗ್ರಾಹಕರಿಗೂ ಹಾಗೂ ಮನ್ಮುಲ್ ಸಂಸ್ಥೆಗೂ ಕಾರ್ಯದರ್ಶಿಗಳು ಸೇತುವೆ ಇದ್ದಂತೆ. ನಮ್ಮ ಸಂಸ್ಥೆಯಿಂದ ಸಿಗುವ ಸವಲತ್ತುಗಳನ್ನು ಗ್ರಾಹಕರಿಗೆ ಕೊಡಿಸುವ ನಿಟ್ಟಿನಲ್ಲಿ ನೀವುಗಳು ಮುಂದಾಗಬೇಕು ಎಂದರು.

ಇದೇ ವೇಳೆ ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ ಮತ್ತು ಮಳವಳ್ಳಿ ತಾಲೂಕು ವ್ಯವಸ್ಥಾಪಕ ಸದಾಶಿವ, ಪಶು ವೈದ್ಯಾಧಿಕಾರಿ ಯೋಗೇಶ್, ಜಯಲಕ್ಷ್ಮಿ, ವಿಸ್ತರಣಾಧಿಕಾರಿ ಇಂದ್ರ ಸೇರಿದಂತೆ ನಿವೃತ್ತ ನೌಕರರಿಗೆ ಮತ್ತು ಕೊನ್ನಾಪುರ ಗ್ರಾಮದ ಡೇರಿ ಕಾರ್ಯದರ್ಶಿ ನಾಗರಾಜು, ಮೌನಶ್ರೀ ಬೇಕರಿಯ ಜಗದೀಶ್ ಹಾಗೂ ನಿವೃತ್ತಿಗೊಂಡ ಡೇರಿ ಕಾರ್ಯದರ್ಶಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಡೇರಿ ಕಾರ್ಯದರ್ಶಿಗಳಾದ ಗೊಲ್ಲರಹಳ್ಳಿ ಶಿವಲಿಂಗೇಗೌಡ, ನಿಟ್ಟೂರು ಕೋಡಿಹಳ್ಳಿ ಪ್ರಕಾಶ್, ಶಂಕರ, ಬುಯ್ಯನ ದೊಡ್ಡಿ ಪುಟ್ಟರಾಜು ಸೇರಿದಂತೆ ಹಲವರು ಇದ್ದರು.