ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವೆ ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ಕಚ್ಚಾತೈಲದ ಬೃಹತ್‌ ಹಡಗು ಮಂಗಳೂರು ಬಂದರಿಗೆ ಶನಿವಾರ ರಾತ್ರಿ ತಲುಪಿದೆ. ಜನವರಿ ಅಂತ್ಯದ ವೇಳೆಗೆ ರಷ್ಯಾದಲ್ಲಿ ಕಚ್ಚಾ ತೈಲವನ್ನು ಲೋಡ್‌ ಮಾಡಿಕೊಂಡಿದ್ದು, ಚೀನಾಕ್ಕೆ ತೆರಳುವ ಗುರಿ ಹೊಂದಿತ್ತು.

ಮಂಗಳೂರು : ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವೆ ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ಕಚ್ಚಾತೈಲದ ಬೃಹತ್‌ ಹಡಗು ಮಂಗಳೂರು ಬಂದರಿಗೆ ಶನಿವಾರ ರಾತ್ರಿ ತಲುಪಿದೆ.

ಅಕ್ವಾ ಟೈಟಾನ್‌ ಎಂಬ ಹೆಸರಿನ ಈ ಸರಕು ಹಡಗು

ಅಕ್ವಾ ಟೈಟಾನ್‌ ಎಂಬ ಹೆಸರಿನ ಈ ಸರಕು ಹಡಗು ಜನವರಿ ಅಂತ್ಯದ ವೇಳೆಗೆ ರಷ್ಯಾದಲ್ಲಿ ಕಚ್ಚಾ ತೈಲವನ್ನು ಲೋಡ್‌ ಮಾಡಿಕೊಂಡಿದ್ದು, ಚೀನಾಕ್ಕೆ ತೆರಳುವ ಗುರಿ ಹೊಂದಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಆಗ್ನೇಯ ಏಷ್ಯಾದ ಜಲ ಪ್ರದೇಶಕ್ಕೆ ಬರುತ್ತಿದ್ದಂತೆ ಈ ಹಡಗಿನ ಪಥ ಬದಲಿಸಲಾಗಿದ್ದು, ಮಂಗಳೂರು ತಲುಪಿದೆ.

1.1ರಿಂದ 2 ಲಕ್ಷ ಟನ್‌ನಷ್ಟು ಕಚ್ಛಾ ತೈಲ

ಆಕ್ವಾ ಟೈಟಾನ್ ಹಡಗಿನಲ್ಲಿ 1.1ರಿಂದ 2 ಲಕ್ಷ ಟನ್‌ನಷ್ಟು ಕಚ್ಛಾ ತೈಲ ಇದ್ದು, ಮಂಗಳೂರು ಬಂದರಿಗಿಂತ ಸ್ವಲ್ಪ ದೂರದಲ್ಲಿ ಸಮುದ್ರ ಮಧ್ಯದಿಂದ ಎಂಆರ್‌ಪಿಎಲ್‌ ತೈಲ ಶುದ್ಧೀಕರಣ ಘಟಕಕ್ಕೆ ಪೈಪ್‌ಲೈನ್ ಮೂಲಕ ಈ ತೈಲವನ್ನು ಅನ್‌ಲೋಡ್‌ ಮಾಡಲಾಗುತ್ತದೆ. ಭಾನುವಾರ ಬೆಳಗ್ಗೆ ಈ ಪ್ರಕ್ರಿಯೆ ಆರಂಭಿಸಲಾಗುತ್ತದೆ, ಮುಗಿಯಲು ಒಂದು-ಒಂದೂವರೆ ದಿನ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಇಂಧನ ಬೇಡಿಕೆ ಪೂರೈಸುವಲ್ಲಿ ಇದು ಮಹತ್ತರ ಪಾತ್ರ ವಹಿಸಲಿದೆ.